ಹೂವಿನ ಹಡಗಲಿ

ಹೂವಿನಹಡಗಲಿ ಇ-ಸ್ವತ್ತು ; 1195 ಅರ್ಜಿ ಸಲ್ಲಿಕೆ, 331 ವಿತರಣೆ

ಹೂವಿನಹಡಗಲಿ ಇ-ಸ್ವತ್ತು ; 1195 ಅರ್ಜಿ ಸಲ್ಲಿಕೆ, 331 ವಿತರಣೆ

ಹೂವಿನಹಡಗಲಿ08:   ವಿಜಯನಗರ ಜಿಲ್ಲೆ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಹಳ್ಳಿಗಳಲ್ಲಿನ ಆಸ್ತಿಗೆ ಇ- ಸ್ವತ್ತು ನೀಡಬೇಕೆಂಬ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಹೂವಿನಹಡಗಲಿ ತಾಲೂಕಿನ 26 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಇ- ಸ್ವತ್ತು ದಾಖಲೆ ನೀಡಲು ಮುಂದಾಗಿದೆ.26 ಗ್ರಾಪಂಗಳ ಕಸ ವಿಲೇವಾರಿ ವಾಹನಗಳಲ್ಲಿ ಧ್ವನಿವರ್ಧಕದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಗ್ರಾಪಂ ಸಿಬ್ಬಂದಿ ಜನರ ಮನೆ ಬಾಗಿಲಿಗೆ ಹೋಗಿ ದಾಖಲೆಗಳನ್ನು ಸಂಗ್ರಹಿ ಸುತ್ತಿದ್ದಾರೆ.ತಾಲೂಕಿನ 26 ಗ್ರಾಪಂಗಳಲ್ಲಿ 53110 ಆಸ್ತಿಗಳಿವೆ. ನ. 30ರಿಂದ ಅರ್ಜಿ ಸ್ವೀಕಾರ ಮಾಡಲಾಗುತ್ತಿದ್ದು, ಈ ವರೆಗೂ 1195 ಅರ್ಜಿ ಸಲ್ಲಿಕೆಯಾಗಿವೆ. ಇದರಲ್ಲಿ 186 ಅರ್ಜಿ ಮೋಜಿಣಿಗೆ ಸಲ್ಲಿಕೆಯಾಗಿವೆ. 331 ಇ- ಸತ್ತು ದಾಖಲೆ ವಿತರಣೆಯಾಗಿವೆ. ಗ್ರಾಪಂ ತಂತ್ರಾಂಶದಲ್ಲಿ 517 ಅರ್ಜಿಗಳಿವೆ. 678 ಅರ್ಜಿಗಳು ತಂತ್ರಾಂಶದಲ್ಲಿಅಳವಡಿಸುವುದು ಬಾಕಿ ಇವೆ. 

 ತಾಲೂಕಿನ ಮೈಲಾರ ಗ್ರಾಪಂ ಪಂಚಾಯಿತಿಯಲ್ಲಿ ಅತಿ ಹೆಚ್ಚು ಅಂದರೆ 172 ಅರ್ಜಿಗಳು ಸಲ್ಲಿಕೆಯಾಗಿದ್ದು. ಹಿರೇಹಡಗಲಿ 103 ಅರ್ಜಿ ಸಲ್ಲಿಕೆಯಾಗಿ 2ನೇ ಸ್ಥಾನದಲ್ಲಿವೆ. ಅತಿ ಕಡಿಮೆ ಸೋಗಿ ಗ್ರಾಪಂ ಕೇವಲ 8 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿ ಕೊನೆ ಸ್ಥಾನದಲ್ಲಿದೆ.ತಾಲೂಕಿನ 26 ಗ್ರಾಮ ಪಂಚಾಯಿತಿಯ ಪಿಡಿಒಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದ್ದು, ಈ ಕುರಿತು ನಿತ್ಯ ಕಸ ವಿಲೇವಾರಿ ವಾಹನದಲ್ಲಿ ಜನರಿಗೆ ಇ- ಸ್ವತ್ತಿಗಾಗಿ ದಾಖಲೆಗಳನ್ನು ನೀಡುವಂತೆ ಮಾಹಿತಿ ನೀಡಲಾಗುತ್ತಿದೆ. ಇದರಿಂದ ಈಗಾಗಲೇ 53110 ಆಸ್ತಿಗಳಲ್ಲಿ 1195 ಅರ್ಜಿ ಸಲ್ಲಿಕೆಯಾಗಿವೆ, 331 ಇ-ಸ್ವತ್ತು ದಾಖಲೆಗಳನ್ನು ಜನರಿಗೆ ವಿತರಣೆ ಮಾಡಲಾಗಿದೆ.  

-ಜಯರಾಮ ಚೌವ್ಹಾಣ ಇಒ,

ತಾಪಂ ಹೂವಿನಹಡಗಲಿ 


ಸುದ್ದಿ ಓದಿ