ಹೂವಿನ ಹಡಗಲಿ

ನವ ರಾತ್ರಿ ಸಂಭ್ರಮ : ದಾಂಡಿಯಾ ಉತ್ಸವ ಗಮನ ಸೆಳೆದ ಮಹಿಳೆಯರಿಂದ ಆಕರ್ಷಕ ನೃತ್ಯ

ನವ ರಾತ್ರಿ ಸಂಭ್ರಮ : ದಾಂಡಿಯಾ ಉತ್ಸವ  ಗಮನ ಸೆಳೆದ ಮಹಿಳೆಯರಿಂದ ಆಕರ್ಷಕ ನೃತ್ಯ

ಹೂವಿನ ಹಡಗಲಿ 13 : ಮಲ್ಲಿಗೆ ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ದಸರಾ ನವರಾತ್ರಿ ಅಂಗವಾಗಿ ಇಲ್ಲಿನ ಲೇಡಿಸ್ ಕಲ್ಚರಲ್ ಕ್ಲಬ್ ವತಿಯಿಂದ ದಾಂಡಿಯಾ ಉತ್ಸವ 2026 ಆಯೋಜಿಸಲಾಗಿತ್ತು.ಪಟ್ಟಣದ ಹೊಳಗುಂದಿ ರಸ್ತೆಯಲ್ಲಿನ ಪಂಚಮಸಾಲಿ ಸಮುದಾಯ ಭವನದಲ್ಲಿ ನಡೆದ ದಾಂಡಿಯಾ ಉತ್ಸವದ ನೃತ್ಯಗಳಲ್ಲಿ ಮಕ್ಕಳು ಯುವತಿಯರು ಮಧ್ಯ ವಯಸ್ಸಿನ ಗೃಹಿಣಿಯರು ಸೇರಿದಂತೆ 60 ಕ್ಕೂ ಹೆಚ್ಚು ಮಹಿಳೆಯರು ಭಾಗವಸಿದ್ದು ವಿಶೇಷವಾಗಿತ್ತು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಲ್ ಕೃಷ್ಣನಾಯಕ ಮಲ್ಲಿಗೆ ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ದಾಂಡಿಯಾ ಉತ್ಸವ ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 

 ಮಹಿಳೆಯರು ತಮ್ಮ ಮನೆ ವೈಯಕ್ತಿಕ ಕೆಲಸಗಳ ಒತ್ತಡದ ನಡುವೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಉಲ್ಲಾಸ ಉತ್ಸಾಹ ಸಂತೋಷ ಲಭಿಸುತ್ತದೆ ಎಂದು ತಿಳಿಸಿದರು.ಲೇಡೀಸ್ ಕಲ್ಚರಲ್ ಕ್ಲಬ್ ಆಯೋಜಿಸುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದಾಗಿ ಹೇಳಿದರು.ಮೊದಲಿಗೆ ಶಕ್ತಿ ಅಧಿ ದೇವತೆ ದುರ್ಗಾಮಾತೆಗೆ ಎಲ್ಲರೂ ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು.ಲೇಡೀಸ್ ಕಲ್ಚರಲ್ ಕ್ಲಬ್ ನ ಸಂಚಾಲಕರಾದ ಲಕ್ಷ್ಮಿ ಬೀರಬ್ಬಿ, ವಿ ಬಿ ಸಹನಾ,ಡಾ ಸುಷ್ಮಾ ನವೀನ್, ಪೂಜಾ ರಾಘವೇಂದ್ರ ಇವರ ನೇತೃತ್ವದಲ್ಲಿ ದಾಂಡಿಯಾ ಉತ್ಸವವು ಅತ್ಯಂತ ಯಶಸ್ವಿಯಾಗಿ ನೆರವೇರಿತು.ಮಹಿಳೆಯರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ದಾಂಡಿಯಾ ಉತ್ಸವ ಆಯೋಜಿಸಲಾಗಿದೆ.ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿತು ಎಂದು ಸಂಚಾಲಕರು ತಿಳಿಸಿದರು.ಜೆ ಎಸ್ ಎಸ್ ಸಿ ಬಿ ಎಸ್ ಸಿ ಪಬ್ಲಿಕ್ ಶಾಲೆಯ ನೃತ್ಯ ಶಿಕ್ಷಕ ಸತೀಶ್ ಸತತ ಒಂದು ತಿಂಗಳ ಕಾಲ ಮಹಿಳೆಯರಿಗೆ ಸೂಕ್ತ ನೃತ್ಯ ನಿರ್ದೇಶನ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ನೃತ್ಯ ನಿರ್ದೇಶಕ ಸತೀಶ್ ರವರನ್ನು ಕ್ಲಬ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.ಒಟ್ಟಾರೆ ಹೂವಿನ ಹಡಗಲಿ ತಾಲೂಕು ಕೇಂದ್ರದಲ್ಲಿ ದಾಂಡಿಯಾ ಉತ್ಸವ ಮೆರುಗು ನೀಡಿತು.ಮಹಿಳಾ ವೈದ್ಯರು,ಅಭಿಯಂತರರು, ಖಾಸಗಿ ವಲಯದ ಕಾರ್ಯಕರ್ತೆಯರು,ಗೃಹಿಣಿಯರ ಪ್ರತಿಭಾ ಪ್ರದರ್ಶನಕ್ಕೆ ದಾಂಡಿಯಾ ಉತ್ಸವವು ವೇದಿಕೆ ಒದಗಿಸಿತು. 


ಸುದ್ದಿ ಓದಿ