ಹೂವಿನ ಹಡಗಲಿ

ದಸರಾ ಚೌಡೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪನೆ

ದಸರಾ ಚೌಡೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪನೆ


ಹೂವಿನ ಹಡಗಲಿ: ಅ.11- ಶರನ್ನವರಾತ್ರಿ ದಸರಾ ಮಹೋತ್ಸವದ ಅಂಗವಾಗಿ ಪಟ್ಟಣದ ಶ್ರೀ ಗವಿಸಿದ್ದೇಶ್ವರ ಮಠದ ಮುಂಭಾಗದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಭಾನುವಾರ ಬೆಳಿಗ್ಗೆ ಚೌಡೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪನೆ ಪೂಜಾ ಕಾರ್ಯಕ್ರಮ ಸಕಲ ಸಂಭ್ರಮ ಸಡಗರದಿಂದ ನೆರೆವೇರಿತು.ಗವಿಮಠದ ಡಾ ಹಿರಿಶಾಂತವೀರ ಮಹಾಸ್ವಾಮಿಗಳು ದೇವಿ ಚೌಡೇಶ್ವರಿಗೆ ಮಹಾಪೂಜೆ ಸಲ್ಲಿಸಿದರು. ಧಾರ್ಮಿಕ ಕಾರ್ಯಕ್ರಮಗಳು ಮನಸ್ಸಿಗೆ ನೆಮ್ಮದಿ ಸಂತೋಷ ಲಭಿಸುತ್ತದೆ ಎಂದರು.

ವೀರಶೈವ ಸಮಾಜದ ನಗರ ಘಟಕದ ಅಧ್ಯಕ್ಷ ಕೋಡಿಹಳ್ಳಿ ಮುದುಕಪ್ಪ ಮಾತನಾಡಿ ಪಟ್ಟಣದ  ಗವಿಸಿದ್ದೇಶ್ವರ ಮಠದ ಡಾ ಹಿರಿಶಾಂತವೀರ ಸ್ವಾಮಿಗಳ ನೇತೃತ್ವದಲ್ಲಿ ನಿರಂತರವಾಗಿ ದಸರಾ ಹಬ್ಬದ ನಿಮಿತ್ತ ಚೌಡೇಶ್ವರಿ ದೇವಿಯ ಪೂಜಾ ಮಹೋತ್ಸವ ಆಯೋಜಿಸಲಾಗಿದೆ. ಚೌಡೇಶ್ವರಿ ದೇವಿ ಸಕಲರಿಗೂ ಮಂಗಳ ಉಂಟುಮಾಡಲಿ ಎಂದು ತಿಳಿಸಿದರು.

ಚೌಡೇಶ್ವರಿ ದೇವಿ ಆಚರಣೆ ಸಮಿತಿ ಅಧ್ಯಕ್ಷ ಅಲಂಕಾರ ಪ್ರಿಯ ಸೊಪ್ಪಿನ ವೀರೇಶ್ ಸಮಿತಿಯ ಸದಸ್ಯರಾದ ಶರಣಪ್ಪ, ಸೊಪ್ಪಿನ ಶಂಭುನಾಥ, ಉಪನ್ಯಾಸಕ ಚನ್ನಬಸಯ್ಯ ಇದ್ದರು.ಇದಕ್ಕೂ ಮುನ್ನ ಚೌಡೇಶ್ವರಿ ದೇವಿ ಮೂರ್ತಿಯನ್ನು ಸಕಲ ಮಂಗಳ ವಾದ್ಯಗಳೊಂದಿಗೆ ಜಾನಪದ ಕಲಾವಿದರ ನೃತ್ಯ ಕುಂಭಮೇಳದೊಂದಿಗೆ ಭವ್ಯ ಮೆರವಣಿಗೆಯಲ್ಲಿ ಮುಖ್ಯ ರಸ್ತೆಯ ಮೂಲಕ ಗವಿಮಠದ ವರೆಗೆ ಸಾಗಿ ಬಂದು ನಂತರ ಪ್ರತಿಷ್ಠಾಪನೆ ಪೂಜೆ ಸಲ್ಲಿಸಲಾಯಿತು. 


ಸುದ್ದಿ ಓದಿ