ಹೂವಿನ ಹಡಗಲಿ

ಸಹಿಷ್ಣುತೆ ಮತ್ತು ಮುಕ್ತ ಮನೋಭಾವ ಅಗತ್ಯ

ಸಹಿಷ್ಣುತೆ ಮತ್ತು ಮುಕ್ತ ಮನೋಭಾವ ಅಗತ್ಯ


ಲೋಕದರ್ಶನ ವರದಿ 

ಹೂವಿನ ಹಡಗಲಿ 10:  ಭಿನ್ನ ಜಾತಿ,ಧರ್ಮ, ಭಾಷೆ  ಮತ್ತು ಹಿನ್ನೆಲೆ ಯಲ್ಲಿ ಬಂದ ಸಹಪಾಠಿಗಳನ್ನು  ಸಮಾನವಾಗಿ ಕಾಣಬೇಕು ಜತೆಗೆ ಎಲ್ಲರನ್ನೂ ಸ್ನೇಹ ಮನೋಭಾವ ಬೆಳೆಸಿಕೊಳ್ಳಬೇಕು ಹೊರತು ಭಿನ್ನಾಭಿಪ್ರಾಯ ಉಂಟಾದಾಗ ಹಿಂಸೆ ಮಾರ್ಗ ಹಿಡಿಯದೆ , ಚರ್ಚೆಯ ,ಸಂವಾದ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಂಡು ,   ಐಕ್ಯತೆ ಸಾಮರಸ್ಯ ಸರ್ವರ ಬದುಕಾಗಲಿ ಎಂದು ಮಾನವ ಬಂಧುತ್ವ ವೇದಿಕೆಯ ಮುಖಂಡರಾದ ಕೋಡಿಹಳ್ಳಿ ಭೀಮಪ್ಪ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ಮಾನವ ಬಂಧುತ್ವ ವೇದಿಕೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಮಲ್ಲಿಗೆ ನಾಡಿನ ಸೌಹಾರ್ದತೆ ಸಾಮರಸ್ಯ ಸಾರುವ ಮನುಷ್ಯ ಮನುಷ್ಯರಲ್ಲಿ ಬೆಸುಗೆ ಹಾಕುವ ಸದುದ್ದೇಶದಿಂದ ಶುಕ್ರವಾರ ಆಯೋಜಿಸಿದ್ದ ಸೌಹಾರ್ದ ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

ಕ್ಷುಲ್ಲಕ ಕಾರಣಕ್ಕಾಗಿ ಸಮಾಜ ಒಡೆಯುವ ಹುನ್ನಾರ ನಡೆಯುತ್ತಿದೆ ಎಂದು ವಿಷಾದಿಸಿದರು.ಇಂದಿಗೂ ಹಳ್ಳಿಗಳಲ್ಲಿ ಹಲೆಹಬ್ಬ, ಉರುಸು ಸಾಂಸ್ಕೃತಿಕ ಹಬ್ಬಗಳನ್ನು ಎಲ್ಲಾ ಧರ್ಮದವರು ಒಗ್ಗಟ್ಟಾಗಿ ಆಚರಿಸುತ್ತಾರೆ.ಈ ಪರಂಪರೆ ಮುಂದುವರೆಯಲಿ ಎಂದು ಆಶಿಸಿದರು.ನಾಗತಿ ಬಸಾಪುರ ಸದ್ಗುರು ಶಿವಯೋಗಿ ಮಂಜುನಾಥ ಹಾಲಸ್ವಾಮಿ ಮಾತನಾಡಿ ಕೋಮು ಸೌಹಾರ್ದತೆ ಹಾಳು ಮಾಡುವ ಪ್ರಚೋದನಕಾರಿ ಭಾಷಣ ಮಾಡಿದರೆ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಸೂಕ್ತ ಉತ್ತರ ನೀಡಲು ಸಿದ್ಧರಾಗಿದ್ದಾರೆ ಎಂದು ತಿಳಿಸಿದರು. 


ಸುದ್ದಿ ಓದಿ