‘ಚಾಕೆಟ್ ಮಳೆ’ ಮಕ್ಕಳ ಕಥಾ ಸಂಕಲನ ಲೋಕಾರೆ್ಣ
ಲೋಕದರ್ಶನ ವರದಿ
ಹೂವಿನಹಡಗಲಿ 15- ಮಕ್ಕಳ ಮನಸ್ಸಿಗೆ ಮುದ ನೀಡುವ ಸಾಹಿತ್ಯ ರಚನೆಯ ಮೂಲಕ 20ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿರುವ ಆರಿ್ಬ. ಗುರುಬಸವರಾಜ ಸೃಜನಶೀಲ ಮಕ್ಕಳ ಕವಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ಮಕ್ಕಳ ಸಾಹಿತಿ ಡಾ.ನಿಂಗು ಸೊಲಗಿ ಹೇಳಿದರು.ಪಟ್ಟಣದ ಶ್ರೀಮತಿ ರುದ್ರಾಂಬ ಎಂ.ಪಿ. ಪ್ರಕಾಶ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಘಟಕ ಕನ್ನಡ ವಿಭಾಗ, ಹಗರಿಬೊಮ್ಮನಹಳ್ಳಿಯ ಅಮ್ಮ ಪ್ರಕಾಶನದ ಸಹಯೋಗದಲ್ಲಿ ಸಾಹಿತಿ, ಶಿಕ್ಷಕ ಆರಿ್ಬ. ಗುರುಬಸವರಾಜ ಅವರ ‘ಚಾಕೆಟ್ ಮಳೆ’ ಮಕ್ಕಳ ಕಥಾ ಸಂಕಲನ ಬಿಡುಗಡೆ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು. ಕೃತಿಗಳಲ್ಲಿ ನೈಜ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಕೌತುಕಮಯ ಬರಹಗಳಿವೆ. ಮಕ್ಕಳ ಕಲ್ಪನಾಶಕ್ತಿ, ಕುತೂಹಲ ಸೃಜನಶೀಲತೆಯನ್ನು ಉತ್ತೇಜಿಸುವ ಸಾಹಿತ್ಯ ರಚನೆಯಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರು.ಪುಸ್ತಕ ಬಿಡುಗಡೆ ಮಾಡಿದ ವಿಶ್ರಾಂತ ಪ್ರಾಂಶುಪಾಲ ಪ್ರೊ. ಶಾಂತಮೂರ್ತಿ ಬಿ. ಕುಲಕರ್ಣಿ, ಮಕ್ಕಳ ಕವಿತೆಗಳನ್ನು ಬರೆಯುವುದು ಸುಲಭದ ಕೆಲಸವಲ್ಲ. ಮಕ್ಕಳ ಮನೋಭಾವಕ್ಕೆ ಇಳಿದು, ಬರಹಗಾರನೇ ಮಗುವಾಗಿ ಯೋಚಿಸಿ ಬರೆಯಬೇಕು.