ರಾಣೆಬೆನ್ನೂರ

‘ಮಾದಕ’ ವ್ಯಸನದ ಭಯಾನಕ ಪರಿಣಾಮದ ಬಗ್ಗೆ ಅರಿವಿನ ಕೊರತೆ ಕಾರಣ: ಗೊಲ್ಲರ

‘ಮಾದಕ’ ವ್ಯಸನದ ಭಯಾನಕ ಪರಿಣಾಮದ ಬಗ್ಗೆ ಅರಿವಿನ ಕೊರತೆ ಕಾರಣ: ಗೊಲ್ಲರ

ರಾಣೇಬೆನ್ನೂರು: ಡಿ 4ಮಾದಕ ದ್ರವ್ಯ ವ್ಯಸನವು ಯುವ ಸಮೂಹವನ್ನು ಕಿತ್ತು ತಿನ್ನುತ್ತಿದೆ. ಭವಿಷ್ಯ ಕಂಡುಕೊಳ್ಳುವ ಮೊದಲೇ ಈ ಚಟಕ್ಕೆ ಸಿಲುಕಿ ತಮ್ಮ ಜೀವನವನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ಈ ಪಿಡುಗನ್ನು ತೊಲಗಿಸಲು ಬಲವಾದ ಕಾನೂನುಗಳಿದ್ದರೂ ಸಾಧ್ಯವಾಗುತ್ತಿಲ್ಲ. ಮಾದಕ ವ್ಯಸನದ ಭಯಾನಕ ಪರಿಣಾಮಗಳ ಬಗ್ಗೆ ಅರಿವಿನ ಕೊರತೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು, ಹಾವೇರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.  ಅವರು ತಾಲೂಕಿನ ಗೌರಾಪುರ ಗ್ರಾಮದ ಮಾಲತೇಶ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ, ಸ್ವಾಸ್ಥ್ಯ  ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು. 

ತಜ್ಞರ ಅಭಿಪ್ರಾಯದಂತೆ ಸೇದುವವನಿಗಿಂತ ಪಕ್ಕದಲ್ಲಿ ಕುಳಿತು ಶ್ವಾಸ ತೆಗೆದುಕೊಳ್ಳುವವರಿಗೇ ಹೆಚ್ಚಿನ ಅಪಾಯವನ್ನುಂಟು ಮಾಡುತ್ತದೆ. ಗರ್ಭಿಣಿಯರಿಗೆ, ಮಕ್ಕಳಿಗೆ ಇದು ಅತ್ಯಂತ ಅಪಾಯಕಾರಿ. ಕಾನೂನು ಮಾಡಿದರೆ ಸಾಲದು, ಪಾಲಿಸುವ ಜನಾಂಗ ನಿರ್ಮಾಣ ಮಾಡಬೇಕು. ಕೇವಲ ಉಪದೇಶದಿಂದ ಉಪಯೋಗವಿಲ್ಲ. ನಮ್ಮ ಹಿರಿಯರು, ಶಿಕ್ಷಕರು ತಮ್ಮ ನಡೆಯಿಂದ ಕಲಿಸುವಂತಾಗಬೇಕು. ನುಡಿದ ನುಡಿಯೊಂದಿಗೆ ನಡೆ ಹೇಳಿದ ಪಾಠದೊಂದಿಗೆ ಪಾಲನೆಯ ರೀತಿಗಳು ಪರಿಣಾಮ ಬೀರುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ದುಶ್ಚಟಗಳಿಂದ ದೂರವಾಗಿರುವುದಷ್ಟೇ ಅಲ್ಲದೇ ಇತರರಲ್ಲಿಯೂ ಈ ತಿಳುವಳಿಕೆಯನ್ನು ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಹನುಮಂತಗೌಡ ಗೊಲ್ಲರ ಹೇಳಿದರು.ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ತೋಟಗೇರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮೆಲ್ಲ ಭೌತಿಕ ಪ್ರಗತಿ, ನೈತಿಕ ಅಧೋಗತಿಯಿಂದ ಬಹುಬೇಗ ನಾಶವಾಗುತ್ತದೆ. ಇಲ್ಲವೇ ದುರುಪಯೋಗವಾಗುತ್ತದೆ. ಚರಿತ್ರ್ಯ ನಾಶ ಸರ್ವನಾಶಕ್ಕೆ ನಾಂದಿಯಾಗುವುದು ಎಂದು ಹೇಳಿದರು. ಯೋಜನಾಧಿಕಾರಿ ನಾರಾಯಣ ಮಾತನಾಡಿ ಜ್ಞಾನದೀಪ ಸಮುದಾಯ ಅಭಿವೃದ್ಧಿ, ಕೆರೆ ಅಭಿವೃದ್ಧಿ, ಜ್ಞಾನವಿಕಾಸ, ಪ್ರಗತಿ ನಿಧಿ, ದೇವಸ್ಥಾನಗಳಿಗೆ ಜೀರ್ಣೋದ್ಧಾರ, ಶಿಷ್ಯವೇತನ ಹೀಗೆ ಹತ್ತು ಹಲವಾರು ಯೋಜನೆಗಳು ಪೂಜ್ಯರ ಮಾರ್ಗದರ್ಶನದಲ್ಲಿ ನಿರಂತರವಾಗಿ ನಡೆಯುತ್ತಿವೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಸ್ವಾಸ್ಥö್ಯ ಸಂಕಲ್ಪ ಪ್ರತಿಜ್ಞೆ ಮಾಡಿದರು. ಒಕ್ಕೂಟದ ಅಧ್ಯಕ್ಷೆ ಪುಷ್ಪಾ, ಶಿಕ್ಷಕಿ ವೀಣಾ ಕಾರ್ಕಳ, ಜಮಖಾನಿ, ಸಂಸ್ಥೆಯ ನಿರ್ದೇಶಕ ಮಾಲತೇಶ ತೋಟಗೇರ ವೇದಿಕೆಯಲ್ಲಿದ್ದರು. ಜ್ಯೋತಿ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಮುಖ್ಯಾಧ್ಯಾಪಕ ವಿನಯ ಜೋಶಿ ಸ್ವಾಗತಿಸಿದರು. ಮೇಲ್ವಿಚಾರಕಿ ಕಾರ್ಯಕ್ರಮ ನಿರೂಪಿಸಿ, ಸೇವಾ ಪ್ರತಿನಿಧಿ ಶಾರದಾ ವಂದಿಸಿದರು.

ಸುದ್ದಿ ಓದಿ