ಇಂಡಿ

ಸೇವಾಲಾಲ್ ವೃತ್ತ ನಿರ್ಮಾಣಕ್ಕೆ ಜಿಲ್ಲಾಧ್ಯಕ್ಷ ಬಿರಾದಾರ ಧನಸಹಾಯ

ಸೇವಾಲಾಲ್ ವೃತ್ತ ನಿರ್ಮಾಣಕ್ಕೆ ಜಿಲ್ಲಾಧ್ಯಕ್ಷ ಬಿರಾದಾರ ಧನಸಹಾಯ
ಸೇವಾಲಾಲ್ ವೃತ್ತ ನಿರ್ಮಾಣ ಮಾಡಲು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಬಂಜಾರಾ ಸಮಾಜ ಬಾಂಧವರಿಗೆ 5 ಲ

ಇಂಡಿ: ಇತ್ತೀಚೆಗೆ ಕೆಂಟೇನರ್ ವಾಹನ ಡಿಕ್ಕಿಯಾಗಿ ದ್ವಂಸವಾಗಿದ್ದ ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಸೇವಾಲಾಲ್ ಅವರ ವೃತ್ತ ಪುನರ್ ನಿರ್ಮಾಣಕ್ಕೆ ಬಿಜೆಪಿ ಜಿಲ್ಲಾ ರೈತಮೋರ್ಚಾ  ಅಧ್ಯಕ್ಷ ಕಾಸುಗೌಡ ಬಿರಾದಾರ ವೈಯಕ್ತಿಕವಾಗಿ 5 ಲಕ್ಷ ರೂಪಾಯಿ ಧನ ಸಹಾಯ ಮಾಡಿದರು.

ಕಾಸುಗೌಡ ಬಿರಾದಾರ ಮಾತನಾಡುತ್ತಾ ಸಂತ ಸೇವಾಲಾಲ್ ಮಹಾರಾಜರು ಬಂಜಾರಾ ಸಮುದಾಯದ ಏಳ್ಗೆಗೆ ಹಗಲಿರುಳು ಶ್ರಮಿಸಿದ್ದಾರೆ. ಅವರನ್ನು ಸ್ಮರಿಸುವ ಕಾರ್ಯ ನಾವು ನೀವೆಲ್ಲ ಮಾಡಬೇಕಾಗಿದೆ. ಅಂತಹ ಮಹಾನ್ ವ್ಯಕ್ತಿಯ ವೃತ್ತ ನಿರ್ಮಾಣ ಮಾಡುವಲ್ಲಿ ಧನ ಸಹಾಯ ಮಾಡುವ ಭಾಗ್ಯ ಸಿಕ್ಕಿದ್ದು ನನ್ನ ಸೌಭಾಗ್ಯವೇ ಸರಿ ಎಂದರು.

ವಿಜು ರಾಥೋಡ್, ಲಿಂಬಾಜಿ ರಾಥೋಡ್ ಸಂಜೀವ್ ಚೌಹಾನ್ ನಿಂಗಪ್ಪ ಚೌಹಾಣ್ ಧರ್ಮರಾಜ ಮದರಖಂಡಿ ಸೇರಿದಂತೆ ಇನ್ನಿತರರು ಇದ್ದರು.


ಸುದ್ದಿ ಓದಿ