ಜಮಖಂಡಿ

ಇಂದಿನ ಮಕ್ಕಳು ಸ್ಪಷ್ಟವಾದ ಗುರಿಯನ್ನು ಹೊಂದುತ್ತಿಲ್ಲ: ಸುವರ್ಣಖಂಡಿ

ಇಂದಿನ ಮಕ್ಕಳು ಸ್ಪಷ್ಟವಾದ ಗುರಿಯನ್ನು ಹೊಂದುತ್ತಿಲ್ಲ: ಸುವರ್ಣಖಂಡಿ

ಲೋಕದರ್ಶನ ವರದಿ,

ಜಮಖಂಡಿ 06: ಇಂದಿನ ಮಕ್ಕಳು ಸ್ಪಷ್ಟವಾದ ಗುರಿಯನ್ನು ಹೊಂದುತ್ತಿಲ್ಲ. ಯಾರು ಗುರಿಯನ್ನು ಹೊಂದುತ್ತಾರೆ ಅವರು ಮಾತ್ರ ಸಾಧನೆಯನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದು ವಿಶ್ರಾಂತ ಪ್ರಾಚಾರ್ಯ ಡಾ.ಎಸ್.ಎಸ್. ಸುವರ್ಣಖಂಡಿ ಹೇಳಿದರು. 

ತಾಲ್ಲೂಕಿನ ಸಿದ್ದಾಪೂರದಲ್ಲಿ ನಡೆದ ಪುಷ್ಪಾತಾಯಿ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಢ ಶಾಲೆ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ 2022-23 ರ  ಪ್ರಭು ಅವಾರ್ಡ್  ಮತ್ತು 17ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಣದ ಕೊರತೆಯಿಂದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಕಾಣುತ್ತಿದ್ದಾವೆ. ಇದರಿಂದ ಶಿಕ್ಷಣವು ಕುಂಟಿತಗೊಳುತ್ತಿದೆ. ಇದರಿಂದ ಮಕ್ಕಳು ಅಡ್ಡದಾರಿ ಹಿಡಿಯುತ್ತಿದ್ದಾರೆ. ಅದನ್ನು ಹೊಗಲಾಡಿಸುವ ಜವಾಬ್ದಾರಿಯು ಶಿಕ್ಷಕರು ಮತ್ತು ಪಾಲಕರ ಪಾತ್ರ ಬಹಳ ಅವಶಕತೆಯಾಗಿದೆ. ನಾಡಿನಲ್ಲಿ ಸಾಕಷ್ಟು ಪ್ರಶಸ್ತಿಗಳು ಇವೆ. ಸಾಧನೆ ಮಾಡಿದ ವ್ಯಕ್ತಿಗಳಿಗೆ, ಆಟ, ಪಾಠದಲ್ಲಿ ಭಾಗಿಯಾಗಿದ ವ್ಯಕ್ತಿಗಳಿಗೆ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಪ್ರಶಸ್ತಿಗಳನ್ನು ಪಡೆದುಕೊಳ್ಳುತ್ತಾರೆ. ಭಾರತ್ನ ರತ್ನ, ಪದ್ಮವಿಭೂಷಣ ಹೀಗೆ ಹಲವಾರು ಪ್ರಶಸ್ತಿಗಳು ಇವೆ. ಶಾಲಾ ವಿದ್ಯಾರ್ಥಿ ಗಳು ಕೂಡಾ ಇಂತಹ ಪ್ರಶಸ್ತಿಯನ್ನು ಪಡೆಯಲು ಮುಂದಾಗಬೇಕಾಗಿದೆ. ಇದರಿಂದ ಮಾನಸಿಕವಾಗಿ, ದೈಹಿಕವಾಗಿ ರೂಪಾಂತರಗೊಳ್ಳುಲು ಸಾಧ್ಯವಾಗುತ್ತದೆ. ಶಾಲಾ ಸಂಸ್ಥೆಯಲ್ಲಿ ಶಿಕ್ಷಣ ಕಲಿಯಲು ಎಲ್ಲ ಸಂಪತ್ತುಗಳು, ಮೂಲಭೂತ ಸೌಕರ್ಯಗಳು ಸರಿಯಾಗಿ ಇರುತ್ತವೆ. ಅದರ ಸದ್ಬಳಕೆ ಮಾಡಿಕೊಂಡರೆ ಮಾತ್ರ ಸಾರ್ಥಕತೆ ಆಗುತ್ತದೆ ಎಂದರು. 

ಪುಷ್ಪಾತಾಯಿ ಶಾಲೆಯ ಕಾರ್ಯದರ್ಶಿ ಧರ್ಮಲಿಂಗಯ್ಯ ಗುಡಗುಂಟಿ ಮಾತನಾಡಿ, ಶಿಕ್ಷಕರು ಕಲಿಸಿದ ವಿದ್ಯಾಭ್ಯಾಸವನ್ನು ಮಕ್ಕಳು ಗಮನವಿಟ್ಟು ವಿದ್ಯಾಭ್ಯಾಸ ಮಾಡಬೇಕು. ಶಾಲೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಶಾಲೆಗಳಿಗೆ ಒದಗಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಇಂತಹ ಅವಾರ್ಡಗಳನ್ನು ಪಡೆಯಲು ಮುಂದಾದರೆ ಮಾತ್ರ ಶಾಲೆ ಕೀರ್ತಿಯನ್ನು ತರಲು ಸಾಧ್ಯ ಎಂದರು.

ಶಾಲಾ ಆಡಳಿತಾಧಿಕಾರಿ ವಾಯ್, ಬಿ, ಹೊಟ್ಟಿ ಪ್ರಾಸ್ತಾವಿಕ ಮಾತನಾಡಿದ ಅವರು,  ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಗುಡಗುಂಟಿ ಅವರು ಶಾಲೆಯನ್ನು ಪ್ರಾರಂಭಿಸಿದ್ದಾರೆ. ನಮ್ಮ ಶಾಲೆಯಲ್ಲಿ ಕಾರ್ಮಿಕ ಮತ್ತು  ರೈತರ ಮಕ್ಕಳಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಶಾಲೆಯಲ್ಲಿ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ. ಆಟ, ಪಾಠ, ಸಂಗೀತ, ಗಾಯನ ಎಲ್ಲ ಅವಕಾಶಗಳು ಇರುತ್ತವೆ. ನುರಿತ ಶೀಕ್ಷಕ ವೃಂದದವರು ಭೋಧನೆಯನ್ನು ಮಾಡುತ್ತಿದ್ದಾರೆ. ತಾಲೂಕಿನ ಸುತ್ತ ಮುತ್ತಲಿನ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಓಟದ ಸ್ಪರ್ಧೆ, ಕಬ್ಬಡಿ, ಸಂಗೀತ, ರಸಪ್ರಶ್ನೇಗಳನ್ನು ಇಡಲಾಗಿದೆ. ಸ್ಪಧರ್ೆಯಲ್ಲಿ ಮೊದಲು ಸ್ಥಾನ, ದ್ವೀತಿಯ ಸ್ಥಾನ, ತೃತೀಯ ಸ್ಥಾನ ಪಡೆದುಕೊಂಡ ಎಲ್ಲ ಮಕ್ಕಳಿಗೆ ಬಹುಮಾನವನ್ನು ನೀಡಲಾಗುತ್ತಿದೆ. ಬಹುಮಾನದ ಒಟ್ಟು ಮೊತ್ತ. 1.50 ಲಕ್ಷ ರೂ, ಬಹುಮಾನ ರೂಪದಲ್ಲಿ ನೀಡಲಾಗಿದೆ. ಮಕ್ಕಳಿಗೆ ಬಹುಮಾನ ನೀಡುವುದರಿಂದ ಕಲಿಯುವ ಮಕ್ಕಳಿಗೆ ಹುಮಸು ಬರುತ್ತದೆ. ವಾಣಿಜ್ಯ ವಿಭಾಗ ಮಾತ್ರ ಇತ್ತು. ಇವಾಗ ವಿಜ್ಞಾನ ವಿಭಾಗವು ಕೂಡಾ ಪ್ರಾರಂಭ ಮಾಡಲಾಗುತ್ತಿದೆ. ಶಾಲೆಗೆ ಬರಲು ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. 150 ವಿದ್ಯಾಥರ್ಿನಿಯರು ಇರುವ ಸುಸಜ್ಜಿತವಾದ ನೂತನದ ವಸತಿ ನಿಲಯವನ್ನು ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಓಲೇಮಠದ ಡಾ,ಚನ್ನಬಸವ ಶ್ರೀಗಳು ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು, ಅನ್ನದಾನವನ್ನು ಜಗದೀಶ ಗುಡಗುಂಟಿ ಅವರು ಮಾಡುತ್ತಿದ್ದಾರೆ. ತಮ್ಮ ತಾಯಿಯನ್ನು ದೇವರ ಸ್ಥಾನದಲ್ಲಿ ನೋಡುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಅನ್ನದಾನವನ್ನು ಸಹ ನೀಡುತ್ತಿದ್ದಾರೆ. ಪ್ಯಾಕ್ಟರಿ ಕಟ್ಟುವ ಜೊತೆಗೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿದ್ದಾರೆ. ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದಕ್ಕೆ ಅವರಿಗೆ ನಾಡೋಜ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಅವರಿಗೆ ಕಾವಿಧಾರಿಗಳು, ಹಸಿದವರು ಇದ್ದವರಿಗೆ ಅವರು ಸಹಾಯ ಸಹಕಾರ ನೀಡುತ್ತಿದ್ದಾರೆ. ಬಸವಣನ್ನವರ ಮೂರ್ತಿ  ಪ್ರತಿಷ್ಠಾನಕ್ಕೆ ಸಹಾಯ ಸಹಕಾರ ನೀಡದಕ್ಕೆ ಇಂದು ಬಸವಣನ್ನವರ ಮೂರ್ತಿ  ನಿರ್ಮಾಣವಾಗಿದೆ. ಈ ಭಾಗದಲ್ಲಿ ಮಠಗಳು ಸಾಕಷ್ಟು ಹುಟ್ಟಿಕೊಂಡಿರುತ್ತವೆ. ಮಠಗಳ ಮಠಾಧೀಶರ ಮೇಲೆ ಅವರು ಅಪಾರವಾದ ಭಕ್ತಿ, ಗೌರವ, ಪ್ರೀತಿಯನ್ನು ತೋರುತ್ತಿದ್ದಾರೆ. ಅವರಂತೆ ಅವರ ಪುತ್ರ ಧರ್ಮಲಿಂಗಯ್ಯ ಗುಡಗುಂಟಿ ಅವರು ಸಹ ತಂದೆಯಂತೆ ನಡೆದುಕೊಳ್ಳುತ್ತಿದ್ದಾರೆ. ಜಗದೀಶ ಗುಡಗುಂಟಿ ಅವರು ಕನ್ನಡ ಭಾಷೆಗೆ ಬಹಳ ಮಹತ್ವವನ್ನು ನೀಡಿ. ಕನ್ನಡದ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದಾರೆ. ಅನಾಥ ವಿದ್ಯಾರ್ಥಿ ಗಳಿಗೆ ಓದಲು ಬರೆಯಲು ಪೆನ್ನು, ಪುಸ್ತಕಗಳನ್ನು ನೀಡಿ. ಅಂತಹ ಮಕ್ಕಳು ಮುಂದೆ ತರುವ ಪ್ರಯತ್ನ ಮಾಡುತ್ತೀರುವುದು ಶ್ಲಾಘನೀಯ. ಪ್ರಶಸ್ತಿಗಾಗಿ ಕೇವಲ ಓದ ಬಾರದು. ಓದುವದು ಬಹಳ ಮುಖ್ಯವಾಗಿದೆ. ಮಕ್ಕಳು ಓದಿನ ಕಡೆಗೆ ಹೆಚ್ಚು ಗಮನಹರಿಸಬೇಕು. ಪ್ರತಿಭಾವಂತ ಮಕ್ಕಳು ಹೆಚ್ಚಿಗೆ  ಬೆಳೆಯಬೇಕು. ಇಂದಿನ ಕೆಲವು ಮಕ್ಕಳು ಓದಲು ಬರೆಯಲು ಬರದ ವಿದ್ಯಾರ್ಥಿ ಗಳು ಪದವಿಯನ್ನು ಪಡೆದುಕೊಳ್ಳುತ್ತಿದ್ದಾರೆ ಅದು ಹಾಗೆ ಆಗಬಾರದು. ಶಿಕ್ಷಣನದ ಕಡೆಗೆ ಹೆಚ್ಚು ಒತ್ತು ನೀಡಿ ವಿದ್ಯಾಭ್ಯಾಸವನ್ನು ಮಾಡಬೇಕೆಂದು ಮಕ್ಕಳಿಗೆ ಕರೆಯನ್ನು ನೀಡಿ. ಆಶಿ ವಚನ ನೀಡಿದರು.

ಗೌರವಧ್ಯಕ್ಷೆ ಪುಷ್ಪತಾಯಿ ಗುಡಗುಂಟಿ, ಪಾರ್ವತಿ ಧರ್ಮಲಿಂಗಯ್ಯ ಗುಡಗುಂಟಿ, ಮುಖ್ಯ ಗುರುಗಳು ಕೆ, ವಾಯ್, ಭೂತಾಳೆ ವೇದಿಕೆಯಲ್ಲಿ ಉಪಸ್ಥಿತರಿದರು. 


ಸುದ್ದಿ ಓದಿ