ಕಾಚಬಿಂದು ಜನಜಾಗೃತಿ ಓಟದ ಸ್ಪರ್ಧೆಗೆ ಕಾಟರೆ ಚಾಲನೆ
ಶೇಡಬಾಳ 15: ವಿಶ್ವ ಗ್ಲುಕೋಮಾ(ಕಾಚಬಿಂದು) ಸಪ್ತಾಹ ಅಂಗವಾಗಿ ಮಿರಜದ ಶಾಂತಿಸರೋಜ ನೇತ್ರಾಲಯದ ವತಿಯಿಂದ ರವಿವಾರ ದಿ. 12ರಂದು ಕಾಚಬಿಂದು ಜನಜಾಗೃತಿ ಓಟದ ಸ್ಪಧರ್ೆಯನ್ನು ಆಯೋಜಿಸಲಾಗಿತ್ತು.
ರವಿವಾರ ದಿ. 12ರಂದು ಮಿರಜದ ಗಾಂಧಿಚೌಕ ಪೊಲೀಸ್ ಠಾಣೆಯ ನಿರೀಕ್ಷಕ ಕಾಟರೆ ಅವರು ಹಸಿರು ನಿಶಾನೆ ತೋರಿಸುವದರ ಮೂಲಕ ಓಟದ ಸ್ಪರ್ಧೆಗೆ ಚಾಲನೆ ನೀಡಿದರು.
ಈ ಓಟದಲ್ಲಿ ಮಿರಜ ಹಾಗೂ ಸಾಂಗಲಿ ನಗರದಿಂದ ಸುಮಾರು 150 ನಾಗರಿಕರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಶಾಂತಿಸರೋಜ ನೇತ್ರ ಚಿಕಿತ್ಸಾಲಯದ ಗ್ಲುಕೋಮಾ ತಜ್ಞ ಡಾ. ಪೂಜಾ ಬೋಮಾಜ ಮಾತನಾಡಿ ಗ್ಲೂಕೋಮಾ(ಕಾಚಬಿಂದು) ನೇತ್ರರೋಗದಿಂದ ವಿಶ್ವಾದ್ಯಂತ ಪ್ರತಿವರ್ಷ ಲಕ್ಷಾಂತರ ಜನರಿಗೆ ಶಾಶ್ವತ ಕುರುಡುತನವನ್ನು ಉಂಟುಮಾಡುತ್ತಿದೆ. ಯಾವುದೇ ಪ್ರಕಾರದ ಶಸ್ತ್ರಚಿಕಿತ್ಸೆ ಮಾಡಿದರೂ ಕೂಡ ಕಳೆದು ಹೋದ ದೃಷ್ಟಿಯನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ ಆರಂಭಿಕ ಚಿಕಿತ್ಸೆಯು ದೃಷ್ಟಿಯನ್ನು ಉಳಿಸುತ್ತದೆ. ಆದ್ದರಿಂದ ಸಾರ್ವಜನಿಕರಿಗೆ ಕಾಚಬಿಂದು ರೋಗದ ಕುರಿತು ಜಾಗೃತಿಯನ್ನುಂಟು ಮಾಡುವುದೇ ಒಂದೇ ಮಾರ್ಗವಾಗಿದೆ ಎಂದು ಹೇಳಿದರು. ಕಾರಣ ಕಾಚಬಿಂದು ಸಂಶಯ ಬಂದ ಕೂಡಲೇ ಕಣ್ಣು ತಪಾಸಣೆ ಮಾಡಿಕೊಳ್ಳುವುದು ಅತ್ಯವಶ್ಯವಾಗಿದೆ ಎಂದು ಹೇಳಿದರು. ವರ್ಷದಲ್ಲಿ ಒಂದು ಸಲವಾದರೂ ನೇತ್ರ ತಜ್ಞರಿಂದ ಕಣ್ಣುಗಳನ್ನು ತಪಾಸಣೆ ಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ಇದರಿಂದ ಮುಂದೆ ಎದುರಾಗುವ ಶಾಶ್ವತ ಕುರುಡತನವನ್ನು ಮೆಟ್ಟಿನಿಲ್ಲಬಹುದೆಂದು ಹೇಳಿದರು.
ಮಿರಜದ ಶಾಂತಿಸರೋಜ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಶರದ ಬೋಮಾಜ ಇವರ ಮಾರ್ಗದರ್ಶನದಲ್ಲಿ ಈ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಡಾ. ಶರದ ಬೋಮಾಜ, ಡಾ. ಪೂಜಾ ಬೋಮಾಜ, ಪೋಲಿಸ್ ಅಧಿಕಾರಿಗಳ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ಸಹಕಾರದಿಂದ ಯಶಸ್ವಿಯಾಗಿ ಸಂಪನ್ನಗೊಂಡಿತು.