ಶಿಗ್ಗಾವ್

ಅಸ್ಥವ್ಯಸ್ಥತೆಗೆ ಕ್ಷಮೆ ಕೇಳಿದ ಶಶಿಧರ ಯಲಿಗಾರ.

ಅಸ್ಥವ್ಯಸ್ಥತೆಗೆ ಕ್ಷಮೆ ಕೇಳಿದ ಶಶಿಧರ ಯಲಿಗಾರ.

ಲೋಕದರ್ಶನ ವರದಿ

 ಶಿಗ್ಗಾವಿ: ನಮ್ಮ ಕರೆಗೆ ಓ ಗೊಟ್ಟು ಗಂಗೆಬಾವಿ ರೆಸಾರ್ಟ್ ಉದ್ಘಾಟನೆಗೆ ಆಗಮಿಸಿದ ಆತ್ಮೀಯರಿಗೆ ಧನ್ಯವಾದ ತಿಳಿಸಿ, ಊಟದಲ್ಲಿ ಆದ ಅಸ್ಥವ್ಯಸ್ಥತೆಗೆ ಕ್ಷಮೆ ಕೋರುವುದಾಗಿ ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ರೆಸಾರ್ಟ್  ಮಾಲೀಕರೂ ಆದ ಶಶಿಧರ ಯಲಿಗಾರ ತಿಳಿಸಿದರು.

ತಾಲೂಕಿನ ಗಂಗೆಬಾವಿ ರೆಸಾರ್ಟ್ನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು. ಸುಮಾರು 20ಸಾವಿರ ಜನರ ನಿರೀಕ್ಷೆ ಇಟ್ಟುಕೊಂಡು ಊಟದ ವ್ಯವಸ್ಥೆ ಮಾಡಲಾಗಿತ್ತು, ಸಾಗರೋಪಾದಿಯಲ್ಲಿ ಹರಿದು ಬಂದ ಜನಸಾಗರಕ್ಕೆ ಹೆಚ್ಚಿನ ವ್ಯವಸ್ಥೆ ಮಾಡಿಸಲು ಶಕ್ತಿಮೀರಿ ಪ್ರಯತ್ನ ಮಾಡಲಾಯಿತು, ಆದರೂ ಕೆಲವರಿಗೆ ಊಟದಲ್ಲಿ ಕೊರತೆಯಾಗಿದ್ದರಿಂದ ಬಹಳ ಬೇಸರವಾಗಿದೆ, ತಾಯಂದಿರು, ಸಹೋದರರು, ವಿದ್ಯಾರ್ಥಿಗಳು, ಹಿತೈಸಿಗಳೂ ಸೇರಿದಂತೆ ಎಲ್ಲರಿಗೂ ಕ್ಷಮೆ ಕೇಳಿಕೊಳ್ಳುವುದಾಗಿ ತಿಳಿಸಿದರು 

ಸುದ್ದಿ ಓದಿ