ಯೋಧ ಇಸಾಕ್ ಅಹ್ಮದ್ಗೆ ಗೌರವ ಸನ್ಮಾನ
ಲೋಕದರ್ಶನ ವರದಿ
ಶಿಗ್ಗಾವಿ 04: ಜಮ್ಮು ಕಾಶ್ಮೀರದ ಸೇನೆಯಲ್ಲಿ 18 ವರ್ಷಗಳ ಸೇವಿ ಸಲ್ಲಿಸಿ ತಾಯ್ನಾಡಿಗೆ ಆಗಮಿಸಿದ ಶಿಗ್ಗಾವಿ ತಾಲೂಕಿನ ಬನ್ನೂರು ಗ್ರಾಮದ ಯೋಧ ಇಸಾಕ್ಅಹ್ಮದ್ ಮತ್ತೂರವರನ್ನು ಪ್ರವಾಸಿ ಮಂದಿರದಲ್ಲಿ ಸಾಮಾಜಿಕ ಹೋರಾಟಗಾರ ಹಾಗೂ ಕಾಂಗ್ರೆಸ್ ಪಕ್ಷದ ವಕ್ತಾರ ಮಂಜುನಾಥ್ ಮಣ್ಣಣ್ಣವರ್ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಿದರು.
ಹಿರಿಯ ಮುಖಂಡ ಪೀರ್ ಸಾಬ್ ನದಾಫ್ ಮಾತನಾಡಿ ಸೇನೆಯಲ್ಲಿ ಸೇವೆ ಮಾಡುವುದೇ ಒಂದು ಸೌಭಾಗ್ಯಅದನ್ನು ಪೂರ್ಣಾವಧಿಗೆ ಮಾಡಿ ತಮ್ಮ ಸ್ವಗ್ರಾಮಕ್ಕೆ ಬಂದಿರುವುದು ಹೆಮ್ಮೆಯ ವಿಷಯ ಅಂತ ಹೇಳಿದರು.
ತಾಲೂಕ ಯುವ ಕಾಂಗ್ರೆಸ್ಅಧ್ಯಕ್ಷ ನಿಸಾರ್ ಅಹಮದ್ ತೋಕಲ್ಲಿ ಮಾತನಾಡಿ ಸೇನೆಯಲ್ಲಿ ಸೇವೆ ಮಾಡಬೇಕೆಂಬುದು ಹಾಗೂ ಅವಕಾಶ ಒದಗಿ ಬರಲೆಂದು ಇವರ ಪೂರ್ಣಾವಧಿ ಸೇವೆ ನಮ್ಮಂತ ಯುವಕರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು. ಸಂದರ್ಭದಲ್ಲಿ ಹಲವಾರು ಜನ ಉಪಸ್ಥಿತರಿದ್ದರು