ಇಂಡಿ

ಅನುದಾನಕ್ಕೆ ಒಳಪಡುವ ಶಾಲೆಗಳಿಗೆ ಜಿಪಂ ಸಿಇಓ ಭೇಟಿ: ಪರೀಶೀಲನೆ

ಅನುದಾನಕ್ಕೆ ಒಳಪಡುವ ಶಾಲೆಗಳಿಗೆ ಜಿಪಂ ಸಿಇಓ ಭೇಟಿ: ಪರೀಶೀಲನೆ
ಇಂಡಿ: ತಾಲೂಕಿನ ಅನುದಾನಕ್ಕೆ ಒಳಪಡುವ ಇಂಗಳಗಿ ಶಾಲೆಗೆ ಜಿ.ಪಂ ಸಿಇಓ ರಾಹುಲ್ ಶಿಂಧೆ ಭೇಟಿ ನೀಡಿ ಪರೀಶೀಲಿಸಿದರು.

ಇಂಡಿ:  ತಾಲೂಕಿನ ಅನುದಾನಕ್ಕೆ ಒಳಪಡುವ ಶಾಲೆಗಳಿಗೆ ಜಿ.ಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಶುಕ್ರವಾರ  ಭೇಟೀನೀಡಿ ಪರೀಶೀಲಿಸಿದರು. 

ಇಂಡಿ ಪಟ್ಟಣದ ಸಿದ್ದೇಶ್ವರ ಬಾಲಕಿಯರ ಪ್ರೌಢಶಾಲೆ, ತವಕ್ಕಲಶಾ ಓಣಿಯ ಶಕೀರ ಮೌಲಾನಾ ಅರೆಬಿಕ್ ಶಾಲೆ, ಇಂಗಳಗಿ ಅಂಜುಮನ್ ಅರೆಬಿಕ್ ಶಾಲೆ, ಚಿಕ್ಕಮಣೂರ ಹಜರತ್ ಹಾಸನ್ ಅರೆಬಿಕ್ ಶಾಲೆ ಮತ್ತು ಸಿದ್ದಿಕಿಯಾ ಅರೆಬಿಕ್ ಶಾಲೆ ಸಾಲೋಟಗಿಯ ಅರೆಬಿಕ್ ಶಾಲೆಗಳಿಗೆ ಭೇಟಿ ನೀಡಿದರು. 

ಮೂಲಭೂತ ಸೌಕರ್ಯಗಳಾದ ಕಟ್ಟಡ, ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ, ವಿದ್ಯಾರ್ಥಿಗಳ ಹಾಜರಾತಿ-ದಾಖಲಾತಿ ಪರೀಶೀಲಿಸಿದರು. 

ಸಾಲೋಟಗಿಯ ಶಾಲೆಗೆ ಶಾಲಾ ಗ್ರಂಥಾಲಯದಲ್ಲಿ ಇನ್ನೂ ಹೆಚ್ಚಿಗೆ ಪುಸ್ತಕಗಳನ್ನು ಖರೀದಿಸಿ ಫೋಟೋದೊಂದಿಗೆ ವಿವರಣೆ ಸಲ್ಲಿಸಲು ತಿಳಿಸಿದರು. ಇಂಗಳಗಿ ಶಾಲೆಗೆ  ಕಪ್ಪು ಹಲಗೆ ಅಳವಡಿಸಲು ಹಾಗೂ ಶಾಲಾ ಗ್ರಂಥಾಲಯಕ್ಕೆ ಹೆಚ್ಚಿನ ಪುಸ್ತಕ, ಇಂಡಿಯ ತವಕ್ಕಲಶಾ ಶಾಲೆಗೆ ಬಾಲಕಿಯರ ಶೌಚಾಲಯ ರಿಪೇರಿ ಮಾಡಿಸಿ ಫೋಟೋದೊಂದಿಗೆ ವಿವರ ಸಲ್ಲಿಸಲು, ಸಿದ್ದೇಶ್ವರ ಶಾಲೆಗೆ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಿಸಲು  ಫೊಟೋದೊಂದಿಗೆ ವಿವರಣೆ ಸಲ್ಲಿಸಲು ತಿಳಿಸಿದರು. 

ಮಕ್ಕಳಿಂದ ಅರೆಬಿಕ್ ಪುಸ್ತಕ ಓದಿಸಿದರು, ಹಾಗೂ ಕುರಾಣ ಗ್ರಂಥ ಪಠಣ ಮಾಡಿಸಿದರು. ಹಾಗೂ ಇಂಡಿ ಪಟ್ಟಣದ ಮತ್ತು ಆಯಾ ಗ್ರಾಮಸ್ಥರಿಂದ ಸದರಿ ಶಾಲೆಗಳ ಕುರಿತು ಮಾಹಿತಿ ಪಡೆದರು. 

ಉಪನಿರ್ಧೇಶಕ ಎನ್‌.ಬಿ.ಹೊಸೂರ, ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ, ಆಯಾ ಶಾಲೆಯ ಆಡಳಿತ ಮಂಡಳಿಯವರು, ಮುಖ್ಯ ಗುರುಗಳು, ಶಾಲಾ ಸಿಬ್ಬಂದಿ ಹಾಜರಿದ್ದರು.  

ಸುದ್ದಿ ಓದಿ