ಕಾಗವಾಡ

ಜಾರಕಿಹೊಳಿ, ಕವಟಗಿಮಠ ಗೆಲುವು ನಿಶ್ವಿತ;ಅಮೂಲ ನಾಯಿಕ

ಜಾರಕಿಹೊಳಿ, ಕವಟಗಿಮಠ ಗೆಲುವು ನಿಶ್ವಿತ;ಅಮೂಲ ನಾಯಿಕ

ಕಾಗವಾಡ 08: ಡಿಸೆಂಬರ 10 ರಂದು ಜರುಗಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಖ್ಯಾತ ಉದ್ದಿಮೇದಾರರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಲಖನ್ ಜಾರಕಿಹೊಳಿಯವರು ರಾಜ್ಯದಲ್ಲಿಯೇ ಅತಿ ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸಲಿದ್ದಾರೆ ಎಂದು ಅರಿಹಂತ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಮೂಲ ನಾಯಿಕ ಹೇಳಿದರು. 

ಅವರು ಕಾಗವಾಡ ವಿಧಾನಸಭಾ ಮತಕ್ಷೇತ್ರದ ಶಿರಗುಪ್ಪಿ, ಮಂಗಸೂಳಿ, ಜುಗೂಳ, ಮೋಳೆ, ಅನಂತಪುರ, ಮಧಬಾವಿ ಗ್ರಾಮಗಳಿಗೆ ಭೇಟ್ಟಿ ನೀಡಿ ಐನಾಪುರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ವಿಷಯ ತಿಳಿಸಿದರು. 

 ಕಳೆದ ಒಂದು ವಾರದಿಂದ ಕಾಗವಾಡ, ಅಥಣಿ ಹಾಗೂ ರಾಯಭಾಗ ತಾಲೂಕುಗಳಲ್ಲಿ ಪ್ರತಿ ಗ್ರಾಮ ಪಂಚಾಯತಿಗಳಿಗೆ ಭೇಟ್ಟಿ ನೀಡಿ ಅವರ ಅಭಿಪ್ರಾಯವನ್ನು ಸಂಗ್ರಹಿಸಿದ್ದು, ಎಲ್ಲರ ಮನಸ್ಸಿನಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಹಾಗೂ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪರ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದರು. 

ಲಖನ್ ಜಾರಕಿಹೊಳಿ ಹಾಗೂ ಮಹಾಂತೇಶ ಕವಟಗಿಮಠ ಇವರು  ಪ್ರಶ್ನಾತೀತ ನಾಯಕರಾಗಿದ್ದು ಇಬ್ಬರು ಪ್ರಥಮ ಸುತ್ತಿನಲ್ಲಿಯೇ ಗೆಲುವು ಸಾಧಿಸಿ ರಾಜ್ಯದಲ್ಲಿಯೇ ಇತಿಹಾಸ ಸೃಷ್ಠಿಸಲಿದ್ದಾರೆ ಎಂದು ಅಮೂಲ ನಾಯಿಕ ಹೇಳಿದರು. 


ಸುದ್ದಿ ಓದಿ