ಯುವಕರು ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಸಿರಿ : ಡಾ.ಕುಮಾರಸ್ವಾಮಿ
ಶಿಗ್ಗಾವಿ : ಯುವಕರು ಹೆಚ್ಚು ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕುಮಾರಸ್ವಾಮಿ. ಪಿ.ಸಿ ಹೇಳಿದರು.
ಪಟ್ಟಣದ ಸಂತೆ ಮೈದಾನದ ಶರೀಫ ಭವನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ 63 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮುಖ್ಯಮಂತ್ರಿಗಳಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿ ಮಾತನಾಡಿದ ಅವರು ದೇವರು ಅವರಿಗೆ ಆಯುಷ್ಯ ಅರೋಗ್ಯ ಕರುಣಿಸಲಿ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿಯವರ 63 ನೇ ಹುಟ್ಟು ಹಬ್ಬ ಆಗಿರುವುದರಿಂದ 63 ಜನ ರಕ್ತದಾನ ಮಾಡರಿ ಎಂದರು.
ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಹನುಮಂತಪ್ಪ ಪಿ.ಹೆಚ್.ಮಾತನಾಡಿ ಜಿಲ್ಲೆಯಲ್ಲಿ ಅತಿ ಹೆಚ್ಚು ರಕ್ತದಾನದ ಅವಶ್ಯಕತೆ ತಾಲೂಕಿನ ಜನತೆಗೆ ಇರುವುದರಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿರಿ ಎಂದರು.ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಬೊಮ್ಮಾಯಿಯವರ ಹುಟ್ಟು ಹಬ್ಬದ ನಿಮಿತ್ಯ ಈ ಶಿಬಿರವನ್ನು ಹಮ್ಮಿಕೊಂಡಿದ್ದು ಅದನ್ನು ಯಶಸ್ವಿ ಗೋಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಉಪಕಾರ್ಯದರ್ಶಿ ರಮೇಶ ಕೋನರಡ್ಡಿ, ಜಿಲ್ಲಾ ಆಸ್ಪತ್ರೆ ರಕ್ತನಿಧಿ ವೈಧ್ಯಾಧಿಕಾರಿ ಡಾ.ಬಸವರಾಜ ತಳವಾರ, ತಾಲೂಕ ಆರೋಗ್ಯಾಧಿಕಾರಿ ಡಾ ಸತೀಶ, ಸಿಂಡಿಕೇಟ ಸದಸ್ಯೆ ಡಾ ಶೋಭಾ ನಿಸ್ಸಿಮಗೌಡ್ರ, ರಾಜ್ಯ ಯುವ ಮೋರ್ಚಾ ಸದಸ್ಯ ನರಹರಿ ಕಟ್ಟಿ, ಆನಂದ ಸುಭೇದಾರ, ಡಾ ಮಲ್ಲೇಶಪ್ಪ ಹರಿಜನ, ಮಂಜುನಾಥ ಬ್ಯಾಹಟ್ಟಿ, ಮುನ್ನಾ ಬಿಸ್ತಿ ಸೇರಿದಂತೆ ಬಸವರಾಜ ಕಮತದ, ಸೌಭಾಗ್ಯ ದೊಡ್ಡಮನಿ, ಅಶೋಕ ಅಮಾತ್ಯಣ್ಣವರ, ಶಂಕರ ಕೋರಿಶೆಟ್ಟರ, ಸರೋಜಾ ಹರಿಜನ, ಕಟ್ಟಿಮನಿ, ಸುಮಾ, ಸಂತೋಷ, ಸುನೀತಾ, ಪವಿತ್ರಾ, ಈಶ್ವರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಭಾಜಪ ರಾಜ್ಯ ಯುವ ಮೋರ್ಚಾ ಸದಸ್ಯ ನರಹರಿ ಕಟ್ಟಿ 19 ಭಾರಿ ರಕ್ತದಾನ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾದರು.