ಯುವಜನತೆಯ ಸಬಲೀಕರಣ ಪ್ರಜಾಪ್ರಭುತ್ವ ದಿನಾಚರಣೆಉದ್ದೇಶ: ಬ್ಲಾಕ ಅಧ್ಯಕ್ಷ ಶಂಭುಲಿಂಗಪ್ಪ ಆಜೂರ
ಶಿಗ್ಗಾವಿ 16: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕಿನ ಡಾ ಬಿ.ಆರ.್‌ಅಂಬೇಡ್ಕರ್ ಸಂಕೀರ್ಣದ ಆವರಣದ ಮುಂಭಾಗ ಇಂದು ಮಾಲಾರ್ಪಣೆ ಮಾಡಿ ಮಾತನಾಡಿದ ಕಾಂಗ್ರೆಸ ಬ್ಲಾಕ ಅಧ್ಯಕ್ಷ ಶಂಭುಲಿಂಗಪ್ಪ ಆಜೂರ ಈ ಬಾರಿಯ ಅಂತರಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ನಮ್ಮಗುರಿ ಯುವಜನತೆಯ ಸಬಲೀಕರಣ ಆಗಬೇಕು ಎಂಬ ಉದ್ದೇಶದೊಂದಿಗೆ ನಮ್ಮ ಸರ್ಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಭಾರತ ಸಂವಿಧಾನ ಪೀಠಿಕೆಯನ್ನು ಓದುವ ಮೊದಲ ಕಾರ್ಯಕ್ರಮವನ್ನು ಮಾಡಲಾಗಿತ್ತು. ಇಂದು ಸಂವಿಧಾನ ಪೀಠಿಕೆ ಓದುವ ಎರಡನೇ ಹೆಜ್ಜೆ ಮತ್ತು ಯಶಸ್ಸಿನಲ್ಲಿ ನಾವಿದ್ದೇವೆ. ನಮ್ಮ ಭವಿಷ್ಯದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿಯುವ ಸಮುದಾಯ ಮತ್ತು ಮಕ್ಕಳ ಪಾತ್ರದ ಬಗ್ಗೆ ನಾವೆಲ್ಲರೂ ಯೋಚಿಸಬೇಕಾಗಿದೆ.
ಸುರಕ್ಷಿತ ಯುವ ಸಮುದಾಯ ಪ್ರಜಾಪ್ರಭುತ್ವ ದೇಶದ ಒಂದು ದೊಡ್ಡ ಆಸ್ತಿ ಇದ್ದಂತೆ. ಉತ್ತಮ ಶಿಕ್ಷಣದ ಮೂಲಕ ಯುವಪೀಳಿಗೆಗೆ ಶಕ್ತಿ ತುಂಬಬೇಕಿದೆ. ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್‌ಅ ವರನ್ನು ಸ್ಮರಿಸುವ ಮೂಲಕ ನಾವೆಲ್ಲರೂ ಅವರಿಗೆ ಗೌರವ ಸಲ್ಲಿಸೋಣ ಎಂದರು.
ಶಿವಾನಂದ ಬಾಗೂರ, ಅಶೋಕ ಓಲೇಕಾರ್,ಚಂದ್ರಣ ್ಣಕೊಡ್ಲಿವಾಡ, ಹಾಗೂ ಮುಖಂಡರಾದ ಮಂಜಣ್ಣ ಯಲಿಗಾರ, ಮಂತೇಶ ಗಿರೆಪ್ಪಗೌಡ್ರ, ಪವನ್ ಧಾರವಾಡ, ಹನುಮಂತಣ್ಣಾ ಬಂಡಿವಡ್ಡರ, ಆಶಿಫ್ ಕಣವಿ, ವಿಜಯ್ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.