ಧಾರವಾಡ - ಹುಬ್ಬಳ್ಳಿ

ಯುವ ಬರಹಗಾರರು ಹೆಚ್ಚು ಅಧ್ಯಯನ ಶೀಲರಾಗಬೇಕು- ಅಶೋಕ ಚೊಳಚಗುಡ್ಡ

ಯುವ ಬರಹಗಾರರು ಹೆಚ್ಚು ಅಧ್ಯಯನ ಶೀಲರಾಗಬೇಕು- ಅಶೋಕ ಚೊಳಚಗುಡ್ಡ

ಸಾಹಿತ್ಯದ ಸಣ್ಣ ಪ್ರಕಾರವೇ  ಚುಟುಕು : 

ಧಾರವಾಡ 17: ಅಂತ್ಯ ಪ್ರಾಸ, ನಿಯಮಿತ ಸಾಲುಗಳು , ಮಿತವಾದ ಪದಗಳಿಂದ ಸಾರಭರಿತವಾದ ಸಾಹಿತ್ಯದ ಪ್ರಕಾರವೇ ಚುಟುಕು ಎಂದು ಹಿರಿಯ ಸಾಹಿತಿ ಅಶೋಕ ಚೊಳಚಗುಡ್ಡ ಪ್ರತಿಪಾದಿಸಿದರು. 

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಧಾರವಾಡ ತಾಲೂಕ ಘಟಕ ಮತ್ತು ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಸಂಯುಕ್ತ ಆಶ್ರಯದಲ್ಲಿ ರವಿವಾರ ಅಪರಾಹ್ನ ಪರಿಸರ ಭವನದಲ್ಲಿ ಜರುಗಿದ ಚುಟುಕು ರಚನೆ ಕಾರ್ಯಾಗಾರ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಯುವ ಬರಹಗಾರರು ಹೆಚ್ಚು ಅಧ್ಯಯನಶೀಲರಾಗುವಂತೆ ಮನವಿ ಮಾಡಿದರು. 

ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ ಮಾತನಾಡಿ ಬರಹಗಾರರಲ್ಲಿ ಚಿಂತನ ಶೀಲ ಮನೋಭಾವ, ಸೃಜನಶೀಲತೆ ಅರಿವು ಕಾವ್ಯ ಪರಿಪಕ್ಷವಾಗಲು ಸಾಧ್ಯವಿದೆ ಎಂದು ಹೇಳಿದರು.    

 ಅಖಂಡ ಧಾರವಾಡ ಜಿಲ್ಲಾ ಕಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶಂಕರ ಕುಂಬಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್‌ನ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಕಚುಸಾಪ ಪ್ರಸಾರಾಂಗ ನಿರ್ದೇಶಕರಾದ ಚನ್ನಬಸಪ್ಪ ದಾರವಾಡಶೆಟ್ಟರ. ಮಹಿಳಾ ಘಟಕದ ಪದ್ಮಜಾ ಉಮರ್ಜಿ, ಕಚುಸಾಪ ಧಾರವಾಡ ತಾಲ್ಲೂಕಿನ ನೂತನ ಪದಾಧಿಕಾರಿಗಳಿಗೆ ಅಧಿಕಾರದ ಪ್ರಮಾಣಪತ್ರ ವಿತರಿಸಿದರು.ಧಾರವಾಡ ತಾಲೂಕು ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಪಾಟೀಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಾ ಉಷಾ ಗದ್ದಗಿಮಠ ನಿರೂಪಿಸಿದರು. ವಿವಿಧ ಕಡೆಗಳಿಂದ ಬಂದ ಇಪ್ಪತ್ತಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಚುಟುಕು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. 

ಮಂಜುಳಾ ಎಚ್‌. ಎಫ್‌. ಪ್ರಥಮ, ಜಯಶ್ರೀ ಬೆಂಡಿಗೇರಿ ದ್ವಿತೀಯ, ಆಶಾ ಮುನವಳ್ಳಿ ತೃತೀಯ ಬಹುಮಾನ ಗಳಿಸಿದರು. ಎಸ್‌. ಎಂ. ಬಳ್ಳಾರಿ, ಸವಿತಾ ನಿಲೆಗಣಿ ಸಮಾಧಾನ ಸ್ಥಾನ ಪಡೆದರು. ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಚುಟುಕು ಸ್ಪರ್ಧೆಯನ್ನು ಚಿನ್ಮಯಿ ಪಾಟೀಲ ಅವರು ನಡೆಸಿಕೊಟ್ಟರು. ಕಸ್ತೂರಿ ಬೀರ​‍್ಪನವರ ಪ್ರಾರ್ಥನೆ ಮಾಡಿದರು. ಪ್ರಮೀಳಾ ಜಕ್ಕಣ್ಣವರ, ಡಾ ಸುಧಾ ಹುಲಗೂರ, ಶ್ರೀನಿವಾಸ ಪಾಟೀಲ, ಪಂಪಾಪತಿ ಹಿರೇಮಠ, ಗೀತಾ ಕುಂಬಿ, ಪ್ರಮೋದ ಜೋಶಿ, ಮೃತ್ಯುಂಜಯ ಮಟ್ಟಿ, ವಂದನಾ ಕರಾಳೆ, ವಿಜಯಲಕ್ಷ್ಮಿ ಕಲ್ಯಾಣಶೆಟ್ಟರ, ಉಮಾ ಪುರಾಣಿಕ, ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ