ರಾಣೆಬೆನ್ನೂರ

ಯುವತಿಯ ಸಾವು: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಮನವಿ

ಯುವತಿಯ ಸಾವು: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಮನವಿ

ರಾಣಿಬೆನ್ನೂರು 25: ತಾಲೂಕಿನ ಕರೂರು ಗ್ರಾಮದ ರೈಲ್ವೆ ಬಿಡ್ಜ್‌ ಮೇಲಿಂದ ಹಾರಿ ಮೃತ ಪಟ್ಟ ಯುವತಿಯ ಸಾವು ಆತ್ಮಹತ್ಯೆಯಲ್ಲ ಅದೊಂದು ವ್ಯವಸ್ಥಿತವಾದ ಕೊಲೆಯಾಗಿದೆ. ಆ ಪ್ರಕರಣವನ್ನು ವಿವಿಧ ಹಂತಗಳಲ್ಲಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು  ಎಂದು ಒತ್ತಾಯಿಸಿ, ರೈತ ಸಂಘದ ಕಾರ್ಯರ್ಕರು ಮತ್ತು ಮೃತ ಯುವತಿಯ ಸಂಬಂದಿಕರು ತಾಲೂಕಿನ ಕುಮಾರಪಟ್ಟಣ ಪೊಲೀಸ್ ಠಾಣೆ ಎದುರಿಗೆ ಪ್ರತಿಭಟನೆ ನಡೆಸಿ, ದಾವಣಗೆರೆ ರೈಲ್ವೆ ಪೋಲೀಸ್ ಇನ್ಸ್‌ಪೆಕ್ಟರ್ ಸಂತೋಷ ಪಾಟೀಲ ಅವರಿಗೆ ರವಿವಾರ   ಮನವಿ ಸಲ್ಲಿಸಿದರು. 

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಮುಖಂಡ ರವೀಂದ್ರಗೌಡ  ಪಾಟೀಲ ಮಾತನಾಡಿ, ಜೂ.20 ರಂದು ತಾಲ್ಲೂಕಿನ ಕರೂರು ಗ್ರಾಮದ ರೈಲ್ವೆ ಬಿಡ್ಜ್‌ ಮೇಲಿಂದ ಹಾರಿ ಮೃತ ಪಟ್ಟ ಕರೂರು ಗ್ರಾಮದ ಲಕ್ಷ್ಮೀ ಬಸವರಾಜ ಎಲಿಗಾರ (18) ಎಂಬ ಯುವತಿಯ ಸಾವು ಆತ್ಮಹತ್ಯೆಯಲ್ಲ ಅದೊಂದು ವ್ಯವಸ್ಥಿತವಾದ ಕೊಲೆಯಾಗಿದೆ. ಆ ಪ್ರಕರಣವನ್ನು ವಿವಿಧ ಹಂತಗಳಲ್ಲಿ ತನಿಖೆ ಮಾಡಿ ತಪ್ಪಿತಸ್ಥರು ಯಾರೇ ಇದ್ದರೂ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು  ಎಂದು ಒತ್ತಾಯಿಸಿದರು. 

ಮೃತ ಯುವತಿಯ ಕುಟುಂಬಕ್ಕೆ ನ್ಯಾಯಾ  ದೊರಕಿಸ ಕೊಡುವುದರ ಜೊತೆಗೆ ಇಂತ ಕೃತ್ಯಗಳನ್ನು ನಡೆಸುವ ದುಷರಿಗೆ ಎಚ್ಚರಿಕೆಯ ಬಿಸಿ ಮುಟ್ಟಿಸುವಂತಾಗಬೇಕು.  ಪ್ರೀತಿ, ಪ್ರೇಮ, ಆತ್ಯಚಾರ, ನಂಬಿಕೆ ಎಂಬ ಮೋಸದ ಚಾಲದಲ್ಲಿ ಸಿಲುಕಿ ಸಾವನ್ನಪ್ಪಿರುವ ಈ ಹದಿಹರೆಯಾದ ಯುವತಿಯ ಸಾವಿಗೆ ನ್ಯಾಯಾ ದೊರಕಬೇಕಾದರೆ ನಿಜವಾದ ಆರೋಪಿಯ ಪತ್ತೆಗಾಗಿ ನಟದರ್ಶನ ಕೊಲೆ ಪ್ರಕರಣದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣನಂತಹ ಆತ್ಯಚಾರ ಪ್ರಕರಣದಂತೆ ಈ ಪ್ರಕರಣವನ್ನು ಬೇದಿಸಬೇಕು ಎಂದು ಒತ್ತಾಯಿಸಿದರು. 

ಪ್ರತಿಭಟನಾಸ್ಥಳಕ್ಕೆ ಆಗಮಿಸಿದ ದಾವಣಗೆರೆಯ ರೈಲ್ವೆ ಪೋಲಿಸ್ ಇನ್ಸ್‌ಪೇಕ್ಟರ್ ಸಂತೋಷ ಪಾಟೀಲ ಮನವಿ ಸ್ವೀಕರಿಸಿ ಮಾತನಾಡಿ, ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪಾರದರ್ಶಕವಾಗಿ ತನಿಖೆ ನಡೆಸುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು. 

ಈ ಸಂದರ್ಭದಲ್ಲಿ ಮೃತಳ ತಾಯಿ ಗೀತಾ ಎಲಿಗಾರ, ಶೇಖವ್ವ ಓಲೇಕಾರ ಸೇರಿದಂತೆ ಮೃತಳ ತಂಗಿ, ತಮ್ಮ ಹಾಗೂ ರೈತ ಮುಖಂಡರಾದ ಹನುಮಂತಪ್ಪ ಆರೇರ, ಚಂದ್ರಣ್ಣ ಬೇಡರ, ವಾಸಣ್ಣ ಎಲಿಗಾರ, ತಿರಕಪ್ಪ ವಡ್ಲವರ, ಬಾಬಣ್ಣ ಪಾಟೀಲ, ಕೃಷ್ಣಪ್ಪ ಅಗಸಿಬಾಗಿಲ, ಷಣ್ಮುಖಪ್ಪ ವೈ, ಭೀಮಪ್ಪ ಎಲಿಗಾರ, ಶೇಖಪ್ಪ ಎಲೆಗಾರ, ಚಿತ್ರಪ್ಪ ವೈ, ಎಂ.ಎಸ್‌. ಪಾಟೀಲ, ಸುರೇಶ ಮಲ್ಲಪುರ, ಗಣೇಶ ಬಿಳಕಿ, ಹರಿಹರಗೌಡ ಪಾಟೀಲ, ಬಸವರಾಜ ಯಲ್ಲಕ್ಕನವರ, ರಾಮೇಶ ಪೂಜಾರ ಭಾಗವಹಿಸಿದ್ದರು. 


ಸುದ್ದಿ ಓದಿ