ಕಾಗವಾಡ

ಯುವ ಉದ್ಯಮಿ ಬಾಳಾಸಾಹೇಬ ಧೋತ್ರೆ ಬಿಜೆಪಿ ಸೇರ್ಪಡೆ

ಯುವ ಉದ್ಯಮಿ ಬಾಳಾಸಾಹೇಬ ಧೋತ್ರೆ ಬಿಜೆಪಿ ಸೇರ್ಪಡೆ

ಕಾಗವಾಡ 03: ವಿಶ್ವದಲ್ಲಿಯೇ ಅತೀ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಬಿಜೆಪಿಯಾಗಿದ್ದು ಅದರಂತೆ ಕಾಗವಾಡ ಮಂಡಲದ ವತಿಯಿಂದ ಪ್ರತಿ ಬೂತ್‌ಗಳಿಂದ ಮೂರುನೂರು ಜನರಿಗೆ ನೂತನ ಸದಸ್ಯತ್ವವನ್ನು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಡಿಸೋಣವೆಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು. 

ಅವರು ರವಿವಾರ ದಿ. 1ರಂದು ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಡೆದ ಯುವ ಉದ್ಯಮಿ ಬಾಳಾಸಾಹೇಬ ಧೋತ್ರೆ ದಂಪತಿಗಳ ಬಿಜೆಪಿ ಪಕ್ಷ ಸೇರ್ಪಡೆ ಮತ್ತು ಸದಸ್ಯತ್ವ ಅಭಿಯಾನದಲ್ಲಿ ಮಾತನಾಡುತ್ತಿದ್ದರು. ನರೇಂದ್ರ ಮೋದಿಯವರ ಕಾರ್ಯಗಳನ್ನು ಮೆಚ್ಚಿ ದಲಿತ ಯುವ ಉದ್ಯಮಿ ಬಾಳಾಸಾಹೇಬ ಧೋತ್ರೆ ದಂಪತಿಗಳು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಅವರ ಸೇರೆ​‍್ಡಯಿಂದ ಕಾಗವಾಡ ಮಂಡಲದಲ್ಲಿ ಬಲಗೊಳ್ಳಲಿದೆ. ಕಾಂಗ್ರೆಸ್ ಪದೇ ಪದೇ ಬಿಜೆಪಿಗೆ ದಲಿತ  ವಿರೋಧಿ ಪಟ್ಟ ಕಟ್ಟುತ್ತಿದ್ದು, ಇಂದಿನ ಕಾರ್ಯಕ್ರಮದಲ್ಲಿ ಸಾವಿರಾರು ದಲಿತ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡಿರುವುದನ್ನು ನೋಡಿದರೇ ದಲಿತರ ಪರವಾಗಿ ಯಾರು ಇದ್ದಾರೆ ಎಂಬುದು ಅರ್ಥವಾಗುತ್ತದೆ ಎಂದರು. 

ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಅಪ್ಪಾಜಿಗೋಳ ಮಾತನಾಡಿ, ಬಾಳಾಸಾಹೇಬ ಧೋತ್ರೆ ಅವರು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದು, ಅವರನ್ನು ಕಾಗವಾಡ ಮಂಡಲದ ಎಸ್‌ಸಿ ಮೋರ್ಚಾದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದರು. 

ನಿಂಗಪ್ಪಾ ಖೋಖಲೆ, ತಮ್ಮಣ್ಣಾ ಪಾರಶೆಟ್ಟಿ, ಶಿವಾನಂದ ಪಾಟೀಲ, ಅಮೃತ ಕುಲಕರ್ಣಿ, ಅಭಯ ಅಕಿವಾಟೆ, ಮಹಾವೀರ ಕಾತ್ರಾಳೆ, ಭಮ್ಮಣ್ಣ ಚೌಗುಲೆ, ದಿವ್ಯಾ ಧೋತ್ರೆ, ಶಿವಾನಂದ ನವಿನಾಳೆ, ಉತ್ಕರ್ಷ ಪಾಟೀಲ, ವಿದ್ಯಾಧರ ಮೌರ್ಯ ಸೇರಿದಂತೆ ಬಿಜೆಪಿ ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ