ಆತ್ಮಾವಲೋಕನಕ್ಕೆಯೋಗ ಸಹಕಾರಿ:ಪ್ರೊ.ಭಾಸ್ಕರ್
ಶಿಗ್ಗಾವಿ :ಯೋಗಆಧ್ಯಾತ್ಮಿಕ ಹಿನ್ನೆಲೆ ಹೊಂದಿದೆ.ಆಧ್ಯಾತ್ಮಿಕತಪಸ್ಸು ಮನಸ್ಸಿಗೆ ಸಂತೋಷ ನೀಡಿಶಿಸ್ತುಪಾಲನೆಯಅರಿವು ಮೂಡಿಸುತ್ತದೆ.ಇದುನಮ್ಮ ಆತ್ಮದೊಳಗೆ ಆಳವಾಗಿ ಸೇರಲುಸಹಕಾರಿಆಗಿದೆಎಂದುಗೊಟಗೋಡಿಕರ್ನಾಟಕಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್ಹೇಳಿದರು.
ತಾಲೂಕಿನಗೊಟಗೋಡಿಯಉತ್ಸವರಾಕ್ಗಾರ್ಡನ್ನಜಾನಪದರಂಗಮಂದಿರದಲ್ಲಿಕರ್ನಾಟಕಜಾನಪದ ವಿಶ್ವವಿದ್ಯಾಲಯ,ಉತ್ಸವರಾಕ್ಗಾರ್ಡನ್ ಸಮಿತಿ ಹಾಗೂ ಶಿಗ್ಗಾಂವಿಯ ಪ್ರಜಾಪಿತ ಬ್ರಹ್ಮಕುಮಾರಿಈಶ್ವರೀಯ ವಿಶ್ವವಿದ್ಯಾಲಯ ಸಂಯಕ್ತಆಶ್ರಯದಲ್ಲಿ ಶುಕ್ರವಾರ ನಡೆದಅಂತಾರಾಷ್ಟ್ರೀಯಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದಅವರುವ್ಯಾಯಾಮ ಚಟುವಟಿಕೆಗಳು ಕೇವಲ ದೇಹದಂಡನೆಗೆ ಮಾತ್ರಸೀಮಿತವಾಗಿದೆ.ಯೋಗವುದೇಹ ಹಾಗೂ ಮನಸ್ಸು ಈ ಎರಡನ್ನುಸಮತೋಲನದಲ್ಲಿಟ್ಟುಕೊಳ್ಳಲು ಅನುಕೂಲ ಆಗುತ್ತದೆಎಂದು ಟಿ.ಎಂ.ಭಾಸ್ಕರ್ ತಿಳಿಸಿದರು.
ಇಂದುಯೋಗ ವಿಶ್ವದಾದ್ಯಂತ ಪಸರಿಸಿದೆ.ಇದು ಭಾರತದ ಮೂಲ ಎಂದು ಹೇಳಲು ಹೆಮ್ಮೆಆಗುತ್ತದೆ.ದೈನಂದಿನ ಬದುಕಿನಲ್ಲಿಯೋಗ ಅಳವಡಿಸಿಕೊಳ್ಳಬೇಕುಎಂದುಸಾನ್ನಿಧ್ಯ ವಹಿಸಿದ ಶಿಗ್ಗಾವಿಯ ಪ್ರಜಾಪಿತ ಬ್ರಹ್ಮಕುಮಾರಿಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ಬ್ರ.ಕು.ಭಾರತಿ ಅಕ್ಕ ನುಡಿದರು.
ಉತ್ಸವರಾಕ್ ಸಮಿತಿ ಕಾರ್ಯದರ್ಶಿ ಪ್ರಕಾಶದಾಸನೂರ ಮತ್ತಿತರರು ಉಪಸ್ಥಿತರಿದ್ದರು.ನೂರಾರು ಯೋಗಪಟುಗಳು ಭಾಗವಹಿಸಿದ್ದರು.ಯೋಗ ಶಿಕ್ಷಕ ಮಂಜುನಾಥತುಳಜಪ್ಪನವರ ನಿರೂಪಿಸಿದರು.