ಯೋಗದಿಂದ ದೈಹಿಕ ಮಾನಸಿಕ ರೋಗಗಳ ನಿವಾರಣೆ ಸಾಧ್ಯ
ರಾಣೇಬೆನ್ನೂರು, 19: ಭಾರತದ ಅತ್ಯಂತ ಪುರಾತನ ಶಾಸ್ತ್ರವಾದ ಯೋಗವು ಹಲವಾರು ದೈಹಿಕ, ಮಾನಸಿಕ ನ್ಯೂನ್ಯತೆಗಳಿಗೆ ಅತ್ಯಂತ ಸರಳ ನಿವಾರಣಾ ಮಾರ್ಗವಾಗಿದೆ. ಪ್ರಕೃತಿಯಿಂದ ದೊರಕುವ ಗಿಡಮೂಲಿಕೆಗಳು ಅನೇಕಾನೇಕ ರೋಗಗಳಿಗೆ ಓಷಧಿಯಾಗಿ ಬಳಕೆ ಮಾಡಬಹುದಾಗಿದೆ. ಇದರಿಂದ ಉತ್ತಮ ಆರೋಗ್ಯ ಪಡೆಯಬಹುದೆಂದು ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ಸಂಜೀವ ನಾರಪ್ಪನವರ ಹೇಳಿದರು.
ಅವರು ಜಿ.ಸಿ.ಟಿ.ಎಂ. ಪದವಿಪೂರ್ವ ಕಾಲೇಜಿನಲ್ಲಿ ಕೆ.ಎಚ್. ಪಾಟೀಲ ಯೋಗ ಹಾಗೂ ನೈಸಗ್ರಿಕ ಚಿಕಿತ್ಸೆ ಮತ್ತು ಆಯುಷ್ ಇಲಾಖೆ ಹಾಗೂ ಜಿ.ಸಿ.ಟಿ.ಎಂ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ನಡೆಯುತ್ತಿರುವ ಯೋಗ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮೇಲಿನಂತೆ ಹೇಳಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಡಾ.ಕಮಲಾಕರ, ಆಯುಷ್ ಇಲಾಖೆಯು ವಿದ್ಯಾರ್ಥಿಗಳಿಗೆ ಆರೋಗ್ಯ ಕಾರ್ಯಕ್ರಮ ಏರಿ್ಡಸುತ್ತಾ ಬಂದಿದೆ. ನಮ್ಮ ಸುತ್ತಮುತ್ತಲಿನ ಪರಿಸರದಿಂದ ದೊರಕುವ ಗಿಡಮೂಲಿಕೆಗಳು ನಮ್ಮ ಆರೋಗ್ಯ ರಕ್ಷಣೆ ಮಾಡುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಎ ದೇಶಪಾಂಡೆ ಅವರು ಯೋಗದಿಂದ ರೋಗಗಳು ದೂರವಾಗುತ್ತವೆ ಎಂದರು. ಸದೃಢ ದೇಹದಲ್ಲಿ ಸದೃಢ ಮನಸ್ಸು ಹೊಂದಲು ಯೋಗ ಉಪಯುವಾದ ಸಾಧನ ಎಂದರು. ಇದು ಆಧ್ಯಾತ್ಮಿಕತೆಯ ಹಾಗೂ ಮೌಲ್ಯಯುತ ಬದುಕನ್ನು ಬೋಧಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಕೆ.ಎಚ್. ಪಾಟೀಲ ಯೋಗ ಹಾಗೂ ನೈಸಗ್ರಿಕ ಚಿಕಿತ್ಸಾ ಕೇಂದ್ರದ ಡಾ.ಭಾರ್ಗವ ಇವರು ಸಮಯೋಚಿತವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ವಿವಿಧ ಆಸನಗಳ ತರಬೇತಿ ನೀಡಿದರು. ಕಾಲೇಜಿನ ಯೋಗ ತರಬೇತಿ ನೀಡುವ ರಮೇಶ ದಿನ್ನಿ, ಕೆ.ಎಂ.ಗರಗ ಡಾ.ಗೊಳಸಂಗಿ, ಎಸ್.ಎಮ್.ದುಂದೂರ, ಸಚಿನ್ ಸತ್ಯರಡ್ಡಿ, ಎನ್.ಬಿ.ಬಾಲಪ್ಪನವರ, ಇನ್ನಿತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.