ವ್ಯಸನ ಮುಕ್ತಿ ಕೇಂದ್ರದಲ್ಲಿ ಯೋಗ
ಕಾಗವಾಡ 28: ಅಂತರರಾಷ್ಟ್ರೀಯ ಯೋಗ ದಿನ ನಿಮಿತ್ತ ಮಿರಜ್ ತಾಲೂಕಿನ ವ್ಯಸನಮುಕ್ತಿ ಕೇಂದ್ರದ ವತಿಯಿಂದ ಎಲ್ಲಾ ರೋಗಿಗಳಿಗೆ ಯೋಗಾಭ್ಯಾಸ ಬಗ್ಗೆ ಮಾಹಿತಿ ನೀಡಿ ಅವರಿಂದ ಯೋಗ ಮಾಡಿಸಲಾಯಿತು.
ಮಿರಾಜ್ ವ್ಯಸನ ಮುಕ್ತಿ ಕೇಂದ್ರದ ಪ್ರಮುಖ ಡಾ.ಚಂದ್ರಶೇಖರ್ ಹಳಿಂಗಳಿ, ಯೋಗಾಚಾರ್ಯ ಪ್ರಶಾಂತ ಜಾಧವ್ ಇವರು ರೋಗಿಗಳಿಗೆ ಯೋಗದ ಪ್ರಾಣಾಯಾಮ, ಧ್ಯಾನ, ಮಂತ್ರೊಪಚಾರ್ ಮತ್ತು ಸಂಗೀತ ಮುಖಾಂತರ ಯೋಗಾಭ್ಯಾಸ ನೀಡಿದರು.
ವ್ಯಸನ ಮುಕ್ತಿ ಕೇಂದ್ರದಲ್ಲಿಯೇಎಲ್ಲ ರೋಗಿಗಳು ಪ್ರತಿದಿನ ಯೋಗಾಭ್ಯಾಸ ಮಾಡಲು ಮುಂದಾಗಿದ್ದಾರೆ. ಇದರಿಂದ ಅವರ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರಿದೆ. ಅದಕ್ಕಾಗಿ ಡಾ.ಚಂದ್ರಶೇಖರ್ ಹಳಿಂಗಳಿ ಸಂತಸ ವ್ಯಕ್ತಪಡಿಸಿದರು.