ರಾಣೆಬೆನ್ನೂರ

ದೀರ್ಘಾಯುಷ್ಯ ಜೀವನಕ್ಕೆ ಯೋಗ ಪ್ರಾಣಾಯಾಮ ಅಗತ್ಯ: ವೆಂಕಟೇಶ್

ದೀರ್ಘಾಯುಷ್ಯ ಜೀವನಕ್ಕೆ ಯೋಗ ಪ್ರಾಣಾಯಾಮ ಅಗತ್ಯ:  ವೆಂಕಟೇಶ್

ರಾಣೇಬೆನ್ನೂರು 23 : ದೀರ್ಘಾಯುಷ್ಯ ಜೀವನ ಬದುಕಿಗೆ ಇಂದು ಯೋಗ ಧ್ಯಾನ ಪ್ರಾಣಾಯಾಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಇಂದಿನ ಅಗತ್ಯವಿದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ತೊಗಟವೀರ್ ಹೇಳಿದರು. 

ಅವರು ಬುಧವಾರ ಸಂಸ್ಥೆಯ ಆವರಣದಲ್ಲಿ ನಡೆದ 9ನೇ, ಅಂತರಾಷ್ಟ್ರೀಯ  ಯೋಗ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ನಮ್ಮ ನಿತ್ಯದ ಬದುಕಿನಲ್ಲಿ ಶಿಕ್ಷಣದ ಜೊತೆ ಜೊತೆಗೆ, ಯೋಗ ಧ್ಯಾನ ಪ್ರಾಣಾಯಾಮ ಅಳವಡಿಸಿಕೊಂಡಾಗ ಮಾತ್ರ ಏಕಾಗ್ರತೆಯಿಂದ ಶಿಕ್ಷಣವನ್ನು ಪರಿಪೂರ್ಣಗೊಳಿಸಲು ಸಾಧ್ಯವಾಗಲಿದೆ ಎಂದು ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಅಧಿಕ್ಷಕಿ, ವಿಜಯಲಕ್ಷ್ಮಿ ಪೂಜಾರ, ಉಪ ಪ್ರಾಚಾರ್ಯ ಮಾಲತೇಶ್ ಸುಂಕದ,ಶಿಕ್ಷಕಿ ಸರೋಜಾ ಕುಬಸದ, ಶಿಕ್ಷಕಿ ಜ್ಯೋತಿ ಎಸ್.ಬಿ.ದೈಹಿಕ, ಶಿಕ್ಷಕ ಚಂದ್ರಶೇಖರ್ ಲಮಾಣಿ ಸೇರಿದಂತೆ ಶಿಕ್ಷಕರು, ಸಿಬ್ಬಂದಿ ಮತ್ತು ಮಕ್ಕಳು ಉಪಸ್ಥಿತರಿದ್ದರು. 

ಸುದ್ದಿ ಓದಿ