ಯರಝರ್ವಿ :ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಯರಗಟ್ಟಿ 10: ಸ್ಥಳಿಯ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ರವಿವಾರ ದಿ.9 ರಂದು ಆಚರಸಲಾಯಿತು.
ವಾಲ್ಮೀಕಿ ಭಾವ ಚಿತ್ರಕ್ಕೆ ಗ್ರಾಪಂ ಅಧ್ಯಕ್ಷ ದೀಪಿಕಾ ಮಠಪತಿ, ಪೂಜೆ ಸಲ್ಲಿಸಿದರು. ಪಿಡಿಓ ಈರಪ್ಪ ಹವಳಪ್ಪನವರ, ಉಪಾಧ್ಯಕ್ಷರಾದ ನಾಗಮ್ಮ ಬಡಕಪ್ಪನವರ, ಪರಮೇಶ ಚಂದರಗಿ, ಮಹಾದೇವ ಜಕ್ಕನ್ನವರ, ಸರೋಜಿನಿ ಭಜಂತ್ರಿ, ಮಹಾಂತೇಶ ಮಠಪತಿ ಮುಂತಾದವರು ಇದ್ದರು.
ಸ್ಥಳಿಯ 3 ನೇ ಅಂಗನವಾಡಿ ಕೇಂದ್ರದಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಭಾವಚಿತ್ರಕ್ಕೆ ಅನಿತಾ ಬೆಟಸೋರ ಪೂಜೆ ಸಲ್ಲಿಸಿದರು. ಅಂಗನವಾಡಿ ಕಾರ್ಯಕರ್ತರಾದ ಭಾರತಿ ಮಠದ, ಶಿವಲೀಲಾ ಅಂಗಡಿ, ಎಸ್ ಎಮ್ ಪಾಟೀಲ, ಅಂಗನವಾಡಿ ಮುದ್ದು ಮಕ್ಕಳು ಮುಂತಾದವರು ಇದ್ದರು.
ಯರಝರ್ವಿ ಗ್ರಾಮದಲ್ಲಿ
ಯರಝರ್ವಿ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯತು. ವಾಲ್ಮೀಕಿ ಭಾವ ಚಿತ್ರಕ್ಕೆ ಗ್ರಾಪಂ ಅಧ್ಯಕ್ಷೆ ಈರವ್ವ ಹರಿಜನ ಪೂಜೆ ಸಲ್ಲಿಸಿದರು. ಪಿಡಿಓ ವ್ಹಿ ಎಮ್ ಕೊಳವಿ, ಸ್ಥಾಯಿ ಸಮೀತಿ ಅಧ್ಯಕ್ಷರಾದ ಮಲ್ಲಪ್ಪ ವಂಟಮುರಿ, ಗ್ರಾಪಂ ಸರ್ವ ಸದಸ್ಯರು, ಗ್ರಾಮದ ಹಿರಿಯರು ಗ್ರಾಪಂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು