ಯರಗಟ್ಟಿ

ಯರಗಟ್ಟಿ ಕೃಷಿ ಪತ್ತಿನ ಸಂಘದ ಸಭೆ: ಸಾಧಕರಿಗೆ ಸನ್ಮಾನ

ಯರಗಟ್ಟಿ ಕೃಷಿ ಪತ್ತಿನ ಸಂಘದ ಸಭೆ: ಸಾಧಕರಿಗೆ ಸನ್ಮಾನ

ಲೋಕದರ್ಶನ ವರದಿ 

ಯರಗಟ್ಟಿ 12: ಯರಗಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಭಾನುವಾರ ನಡೆದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಅಜಿತಕುಮಾರ ದೇಸಾಯಿ, ಎ.ಕೆ. ಜಮಾದಾರ, ಪಿ.ಎಚ್‌. ಪಾಟೀಲ, ಶಿವಾನಂದ ಯರಗಣವಿ, ಶಶಿಕಾಂತ ಹಾದಿಮನಿ ಇತರರು ಇದ್ದರು.     

 ಸಭೆಯಲ್ಲಿ ನಿವೃತ್ತ ಶಿಕ್ಷಕ ಎ.ಕೆ. ಜಮಾದಾರ ಮಾತನಾಡಿ, ಬಹಳಷ್ಟು ಷರ್ವಗಳಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತ ಕೆಲಸ ನಿರ್ವಹಿಸುತ್ತಿರುವ ಈ ಸಂಘ 104 ವರ್ಷ ಪೂರೈಸಿರುವುದು ಬಹಳ ಹೆವ್ಮೆಯ ವಿಚಾರ ಎಂದರು.  

ಸಹಕಾರಿ ಸಂಘಗಳ ಸಲಹೆಗಾರ ಬಸವರಾಜ ಹಸಬಿ ಮಾತನಾಡಿ, ಸಹಕಾರಿ ತತ್ವದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೃಷಿ ಪತ್ತಿನ ಸಂಘಗಳಿಗೆ ರೈತರೇ ಬೆನ್ನೆಲಬು ಆಗಿದ್ದು ಸರಿಯಾದ ಸಮಯದಲ್ಲಿ ಸಾಲ ಪಡೆಯುವದು ಮತ್ತು ತುಂಬುವ ಪ್ರವೃತ್ತಿ ಅಳವಡಿಸಿಕೊಳ್ಳಬೇಕು. ಇದರಿಂದ ಸಂಘಗಳು ಬದುಕುತ್ತವೆ ಹಾಗೂ ಲಾಭದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದರು. 

ಪಿ.ಎಚ್‌. ಪಾಟೀಲ, ರಾಜೇಂದ್ರ ವಾಲಿ ಮಾತನಾಡಿದರು. ಮಹಾಂತೇಶ ಜಕಾತಿ, ರಾಜೇಂದ್ರಗೌಡ ಪಾಟೀಲ, ಉಪಾಧ್ಯಕ್ಷ ಶಿವಾನಂದ ಯರಗಣವಿ, ನಿರ್ದೇಶಕರಾದ ಶಶಿಕಾಂತ ಹಾದಿಮನಿ, ಶಿವಾನಂದ ಪಟ್ಟಣಶೆಟ್ಟಿ, ಅಬೀದಬೇಗ ಜಮಾದಾರ, ಅರ್ಜುನ ಅಡಕಲಗುಂಡಿ, ಬಸಲಿಂಗಪ್ಪ ಪಟ್ಟಣಶೆಟ್ಟಿ, ಶಬ್ಬಿರಬೇಗ ಜಮಾದಾರ, ಹಣಮಂತ ತಳವಾರ, ಯಲ್ಲಪ್ಪ ಭೋವಿ, ಸುನಂದಾ ಪರಾಳದ ಕಾರ್ಯನಿರ್ವಾಹಕ ಬಿ.ಎಚ್‌. ಕುರಿ, ಸದಾನಂದ ಹಣಬರ ನಿರೂಪಿಸಿದರು ಇತರರು ಇದ್ದರು. 


ಸುದ್ದಿ ಓದಿ