ಯಕ್ಲಾಸಪುರ ಗ್ರಾಪಂ: ಅಧ್ಯಕ್ಷರಾಗಿ ಅಶ್ವಿನಿ - ಉಪಾಧ್ಯಕ್ಷ- ಹೊನ್ನಪ್ಪ ಆಯ್ಕೆ
ರಾಣೇಬೆನ್ನೂರು: ತಾಲೂಕಿನ ರಾಹುತನಕಟ್ಟಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗಾಗಿ ಇಂದು ಚುನಾವಣೆ ಪ್ರಕ್ರಿಯೆ ನಡೆಯಿತು. 22 ಸದಸ್ಯರ ಬಲ ಹೊಂದಿರುವ ಪಂಚಾಯಿತಿಯಲ್ಲಿ 11 ಸದಸ್ಯರ ಬಲ ಪಡೆದ ಬಿಜೆಪಿ ಯ, ಅಶ್ವಿನಿ ಅರ್ಜುನ್ ಬಣಕಾರ್ ಅವರು ಅಧ್ಯಕ್ಷರಾಗಿ ಹಾಗೂ 9, ಮತ ಪಡೆದ ಕಾಂಗ್ರೆಸ್ ನ, ಹೊನ್ನಪ್ಪ ಗೌಡ್ರ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು. ರಾಹುತನಕಟ್ಟಿ ಗ್ರಾಮ ಪಂಚಾಯತಿಯು, ಯಕಲಾಸಪುರ, ಗೋವಿಂದ ಬಡಾವಣೆ, ಪದ್ಮಾವತಿಪುರ, ಶ್ರೀನಿವಾಸಪುರ ಮತ್ತು ಸಿದ್ದಾಪುರ ತಾಂಡಾಗಳು ಒಳಗೊಂಡಿವೆ. ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್, ಜಿ.ಪಂ ಮಾಜಿ ಅಧ್ಯಕ್ಷ ಮಂಜುನಾಥ್ ಓಲೇಕಾರ್, ಬಸವರಾಜ ಹುಲ್ಲತ್ತಿ, ರಮೇಶ್ ನಾಯಕ್, ಅರ್ಜುನ್ ಬಣಕಾರ್, ಸೇರಿದಂತೆ ಬಿಜೆಪಿಯ ಮತ್ತಿತರ ಮುಖಂಡರು, ಪಾಲ್ಗೊಂಡಿದ್ದರು