ಸ್ವಂತ ಕಟ್ಟಡವಿಲ್ಲದ ವೈ.ಟಿ.ಹೊನ್ನತಿ ಗ್ರಾಮ ಪಂಚಾಯಿತಿ: ಮೀಸಲು ಜಾಗ ಕುರಿತು ತಹಶೀಲ್ದಾರ್ ಕಚೇರಿಯಲ್ಲಿ ಚರ್ಚೆ
ರಾಣೆಬೆನ್ನೂರ ೦೧: ಹಾವೇರಿ ಜಿಲ್ಲೆಯಲ್ಲಿಯ ಸ್ವಂತ ಕಟ್ಟಡವಿಲ್ಲದ ಗ್ರಾಮ ಪಂಚಾಯಿತಿ ಎಂದರೆ ಅದು ವಾಯ್ ಟಿ ಹೊನ್ನತ್ತಿ ಗ್ರಾಮ ಪಂಚಾಯತ್ ಎಂಬ ಅಪ ಕೀರ್ತಿಗೆ ಕಾರಣವಾಗಿದೆ.ನಗರದ ತಹಸಿಲ್ದಾರ ಕಚೇರಿಯಲ್ಲಿ ತಾಲೂಕ ದಂಡಾಧಿಕಾರಿಗಳಾದ ಎನ್ ಹೆಚ್ ಶಿರಹಟ್ಟಿ ಅವರ ಅಧ್ಯಕ್ಷತೆಯಲ್ಲಿ ವಾಯ್ ಟಿ ಹೊನ್ನತ್ತಿ ಗ್ರಾಮದ ಹಿರಿಯ ಮುಖಂಡರಿಂದ ಗ್ರಾಮ ಪಾಚಾಯತಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮೀಸಲು ಜಾಗದ ಕುರಿತು ಸಭೆ ಜರುಗಿತು.
ವಾಯ್ ಟಿ ಹೊನ್ನತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ನೊಕಪುರ, ಮಾದುರಾಯಪುರ, ಹುಲ್ಲತ್ತಿ, ಮತ್ತು ಹುಲ್ಲತ್ತಿ ತಾಂಡಾ ಗ್ರಾಮಗಳನ್ನ ಒಳಗೊಂಡಂತೆ 15 ಜನ ಸದಸ್ಯರುಗಳಿಂದ ಕೂಡಿದ್ದು, ಗ್ರಾಮ ಪಂಚಾಯಿತಿಯು 2015 ರಲ್ಲಿ ರಚನೆಯಾಗಿದೆ. ಇಂದಿಗೂ ಗ್ರಾಮ ಪಂಚಾಯಿತಿ ಕಟ್ಟಡವಿಲ್ಲ ಇದರಿಂದಾಗಿ ಸರ್ಕಾರದ ಸೇವೆಗಳು ಗ್ರಾಮೀಣ ಭಾಗದ ಜನತೆಗೆ ತಲಪಲು ಮತ್ತು ಗ್ರಾಮಗಳ ಅಭಿವೃದ್ಧಿ ಕಾಣಲು ಗ್ರಾಮ ಪಂಚಾಯತಿ ಕಾರ್ಯಲಯದ ಅವ್ಯಶಕತೆ ಇರುತ್ತದೆ. ಗ್ರಾಮ ಪಂಚಾಯತಿ ಕಾರ್ಯಲಯಕ್ಕೆ ಮಹಿಳೆಯರು ಹೋಗಲು ಮುಜುಗರ ಪಡುತ್ತಾರೆ. ಕಾರಣ ಶಿಥಿಲಾವಸ್ಥೆಯಲ್ಲಿರುವ ಸದರಿ ಕಟ್ಟಡದಲ್ಲಿ ಮಹಿಳೆರಿಗೆ ವಿಶ್ರಾಂತಿ ಪಡಿಯಲು ಒಂದು ಕೊಠಡಿಯಿಲ್ಲ.
ಮಹಿಳೆಯರಿಗೆ ಶೌಚಾಲಯವಿಲ್ಲ, ಹಾಗಾಗಿ ಮಹಿಳೆಯರು ಶೌಚಾಲಯಕ್ಕೆ ಅಕ್ಕಪಕ್ಕದ ಹೊಲ ಕಥೆಗಳಿಗೆ ಹೋಗುತ್ತಾರೆ. ಇದರಿಂದ ಮಹಿಳೆಯರು ಮುಜುಗರ ಪಡುವಂತಾಗಿದೆ. ಇಂತಹ ಸಮಸ್ಯೆಗಳನ್ನು ಕೆಳೆದ 8 ವರ್ಷಗಳಿಂದ ಎದುರಿಸುವಂತಾಗಿದೆ. ಹಾಗೂ ಸ್ಥಳದ ಸಮಸ್ಯೆಗಳಿರುವದರಿಂದ ಗ್ರಾಮ ಪಂಚಾಯತಿಗೆ ಅನುದಾನ ಮಂಜೂರಾಗಿದರು, ಮತ್ತೆ ಬೇರೆ ಪಂಚಾಯಿತಿಗೆ ವರ್ಗಾಯಿಸಿದ ಉದಾಹರಣೆ ಇದೆ. ಇಂತಹ ಸಮಸ್ಯೆಗಳ ಕುರಿತು ಗ್ರಾಮಸ್ಥರು ತಹಸಿಲ್ದಾರ್ ಗೆ ಮನವರಕೆ ಮಾಡಿದಾಗ ದಂಡಾಧಿಕಾರಿಗಳು ಸಹಕರಾತ್ಮವಾಗಿ ಸ್ಪಂದಸಿ ಭೂಮಾಪನ ಇಲಾಖೆಯ ಸಿಬ್ಬಂದಿಗಳಿಗೆ ಸರ್ವೆ ನಂಬರ 12/9ರ ಜಾಗವನ್ನು ಹದ್ದಬಸ್ತ ಮಾಡಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದರು. ಇದಿರಿಂದ ಪಂಚಾಯಿತಿ ಜಾಗದ 8 ವರ್ಷದ ಸಮಸ್ಯೆಗೆ ನ್ಯಾಯ ಒದಗಿಸಿಕೊಟ್ಟ ತಾಲೂಕ ದಂಡಾಧಿಕಾರಿಗಳಿಗೆ ಗ್ರಾಮಸ್ಥರು ಅಭಿನಂದನೆ ತಿಳಿಸಿದರು.ಈ ಸಂದರ್ಭದಲ್ಲಿ ಯಲ್ಲಪ್ಪ ಉಕ್ಕುಂದ, ರವಿ ಮಳ್ಳಳ್ಳಿ, ಸುಜಾತಪ್ಪ ಓಲೇಕಾರ, ಲೋಕಣ್ಣ ಲಮಾಣಿ, ಪಕ್ಕೀರಪ್ಪ ಸೊರಣಗಿ,ವೆಂಕಟೆಶ ದೊಡ್ಡಮನಿ, ಶಿವರಾಜ್ ಬಿ ಎಚ,ತೂಕಪ್ಪ ಲಮಾಣಿ, ಹಾಲಪ್ಪ ಕುಲ್ಕರ್ಣಿ, ಜಗದೀಶ ಕೆರೊಡಿ, ರಾಜು ಓಲೇಕಾರ, ರವಿ ಕೆರೊಡಿ, ಮಂಜಣ್ಣ ಲಮಾಣಿ, ಮಂಜಪ್ಪ ರಣಸೋತು, ಗ್ರಾಮದ ಹಿರಿಯ ಮುಖಂಡರು ಉಪಸ್ಥಿತರಿದ್ದರು