ರಾಣೆಬೆನ್ನೂರ

ವೈ. ಟಿ. ಹೊನ್ನತ್ತಿ ಪಂಚಾಯತ್ : ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ

ವೈ. ಟಿ. ಹೊನ್ನತ್ತಿ  ಪಂಚಾಯತ್ : ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ  ಆಯ್ಕೆ

ರಾಣೇಬೆನ್ನೂರು 29 :ತಾಲೂಕಿನ ವಾಯ್ ಟಿ ಹೊನ್ನತ್ತಿ ಗ್ರಾಮ ಪಂಚಾಯತಿ ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆ ನಡೆಯಿತು. ಸಾಮಾನ್ಯ ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನವು ಅನುಸೂಚಿತ ಜಾತಿ ಮಹಿಳಾ ಮೀಸಲು ಕ್ಷೇತ್ರವಾಗಿತ್ತು. ಒಟ್ಟು 15  ಸದಸ್ಯರ ಬಲ ಹೊಂದಿರುವ ಪಂಚಾಯಿತಿಯು, ಇಂದು ಚುನಾವಣೆ ಪ್ರಕ್ರಿಯೆ ನಡೆದು, 10 ಸದ್ಯರು ತಮ್ಮಮತಗಳನ್ನು ಚಲಾಯಿದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಅನುಸೋಚಿತ ಜಾತಿ ಮಹಿಳಾ  ಮೀಸಲು ಕ್ಷೇತ್ರವಾಗಿತ್ತು. ಚುನಾವಣೆ ಪ್ರಕ್ರಿಯೆ  ನೆಡೆದು, ಹುಲ್ಲತ್ತಿ ಗ್ರಾಮದ  ಗೀತಾ ಶ್ಯಾಮಣ್ಣ  ಓಲೇಕಾರ  ಅಧ್ಯಕ್ಷರಾಗಿ ಹಾಗೂ   ಉಪಾಧ್ಯಕ್ಷರಾಗಿ  ಬೇಬಿಬಾಯಿ  ಡಿ  ಪಮ್ಮಾರ  ಅವರು ಅವಿರೋಧವಾಗಿ ಆಯ್ಕೆಯಾದರು.ಚುನಾವಣಾಧಿಕಾರಿಗಳಾಗಿ  ರವಿಶಾಸ್ತ್ರೀ ಆರಾಧಿಮಠ ಮತ್ತು ಪಂಚಾಯಿತಿ ಪಿಡಿಒ ಟಿ. ಬಿ. ಮೊಗನಾವರ ಅವರು ತಮ್ಮ ಕರ್ತವ್ಯ ನಿರ್ವಹಿಸಿದರು. ಗ್ರಾಮದ ನಾಗಪ್ಪ ಉಕ್ಕುಂದ. ಸುಜಾತಪ್ಪ ತಳವಾರ. ದ್ಯಾಮಪ್ಪ ಚಿಕ್ಕಣ್ಣನವರ. ಗುಡ್ಡಪ್ಪ ಮೆಡ್ಲೆರಿ, ಶಿವಾರಾಜ್ ಎಚ್, ಗೋವಿಂದಪ್ಪ ತಳವಾರ  ಸುರೇಶ ಡೊಳ್ಳಿನ, ಜಗದೀಶ್ ಕೆರೊಡಿ, ರಾಜು ಓಲೇಕಾರ, ರವಿ ಕೆರೊಡಿ, ಮೌನೇಶ್ ಹಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ