ಕಾಗವಾಡ

ಬಸವೇಶ್ವರ ವೃತ್ತ ನಾಮಕರಣ, ಪುತ್ಥಳಿ ಸ್ಥಾಪನೆಗೆ ಅಡಿಗಲ್ಲು

ಬಸವೇಶ್ವರ ವೃತ್ತ ನಾಮಕರಣ, ಪುತ್ಥಳಿ ಸ್ಥಾಪನೆಗೆ ಅಡಿಗಲ್ಲು

ಲೋಕದರ್ಶನ ವರದಿ 

ಕಾಗವಾಡ 05: ತಾಲೂಕಿನ  ಉಗಾರ ಖುರ್ದ್‌ ಪಟ್ಟಣದಲ್ಲಿ ಬಸವ ಜಯಂತಿ ನಿಮಿತ್ಯ ಬಸವೇಶ್ವರ ವೃತ್ತ ನಾಮಕರಣ ಹಾಗೂ ಪುತ್ಥಳಿ ನಿರ್ಮಿಸಲು ತಿಕೋಟಾ ಮಠದ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಇವರ ಸಾನಿಧ್ಯದಲ್ಲಿ ಅಡಿಗಲ್ಲು ಸಮಾರಂಭ ನೆರವೇರಿತು. 

ಉಗಾರ ಪಟ್ಟಣದ ಮುಖಂಡರು ಕನ್ನಡ ಯುವಕ ಸಂಘದ ಅಧ್ಯಕ್ಷರು ಶಿವಗೌಡ ಕಾಗೆ ಇವರ ಪ್ರಮುಖ ನೇತೃತ್ವದಲ್ಲಿ ಕಾರ್ಯಕ್ರಮ ಜರಗಿತು. 

ಬಸವೇಶ್ವರ ವೃತ್ತ ನಾಮಕರಣ ಹಾಗೂ ಪುತ್ಥಳಿ ಸ್ಥಾಪನೆ ಗುರಿ ಕಳೆದ ಅನೇಕ ವರ್ಷಗಳಿಂದ ಇಲ್ಲಿಯ ಕನ್ನಡ ಯುವಕ ಸಂಘದ ಮುಖಂಡರು ಹಮ್ಮಿಕೊಂಡಿದ್ದರು ಆದರೆ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬವಾಗುತ್ತಿದ್ದುದರಿಂದ ಯೋಜನೆ ಮುಂದೂಡಲಾಗಿತ್ತು. ಸುಮಾರು 12 ಲಕ್ಷ ರುಪಾಯಿ ವೆಚ್ಚಮಾಡಿ ಅಶ್ವರೂಢ ಬಸವೇಶ್ವರ ಪುತ್ಥಳಿ ಈಗಾಗಲೇ ನಿರ್ಮಿಸಲಾಗಿದೆ. ಕೇವಲ ಸ್ಥಾಪನೆ ಅಷ್ಟೇ ಬಾಕಿ ಉಳಿದಿದೆ. 

ಶಿವಗೌಡ ಕಾಗೆ ಮಾತನಾಡಿ ಕಳೆದ 30 ವರ್ಷಗಳ ಹಿಂದೆ ಬಸವೇಶ್ವರ ವೃತ್ತ ಎಂದು ನಾಮಕರಣ ಮಾಡಿದ್ದೇವೆ. ಆದರೆ ಅಲ್ಲಿಗೆ ಅತಿಕ್ರಮಣವಾಗಿದ್ದರಿಂದ ಪುತ್ಥಳಿ ಸ್ಥಾಪನೆ ಮಾಡುವುದು ಆಗಲಿಲ್ಲ. ಈಗಾಗಲೇ ಸುಮಾರು 12 ಲಕ್ಷ ಮೌಲ್ಯದ ಅಶ್ವಾರೂಢ ಬಸವೇಶ್ವರ ಪುತ್ಥಳಿ ನಿರ್ಮಿಸಲಾಗಿದೆ. ಅಕ್ಷಯ ತೃತೀಯ ಹಬ್ಬದ ನಿಮಿತ್ಯ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಅಡಿಗಲ್ಲು ಸಮಾರಂಭ ನೆರವೇರಿಸಿದ್ದವೆ. ಬರುವ ಶ್ರಾವಣ ಮಾಸದಲ್ಲಿ ವಿಜಯಪುರ ಜ್ಞಾನಯೋಗ ಆಶ್ರಮದ ಸಿದ್ದೇಶ್ವರ ಮಹಾಸ್ವಾಮೀಜಿಗಳ ಇವರ ಹಸ್ತದಿಂದ ಪುತ್ಥಳಿ ಅನಾವರಣ ಮಾಡುವ ನಿರ್ಣಯ ಕೈಗೊಂಡಿದ್ದೇವೆ ಎಂದರು. 

ಪುತ್ಥಳಿ ಸ್ಥಾಪನೆ ಮಾಡಲು ಎಲ್ಲರೂ ಸಹಕಾರ ನೀಡಿದ್ದಾರೆ. ಕಳೆದ ಅನೇಕ ವರ್ಷಗಳ ಕನಸು ನನಸುವಾಗಲಿದೆ ಎಂದು ಶಿವಗೌಡ ಕಾಗೆ ಹೇಳಿದರು. 

ಅಡಿಗಲ್ಲು ಸಮಾರಂಭದಲ್ಲಿ ಕನ್ನಡ ಯುವಕ ಸಂಘದ ಪ್ರಮುಖರಾದ ಮಂಜುನಾಥ್ ತೆರದಾಳ, ದಯಾನಂದ ವಾಲಿ, ಮದನ ದೇಶಿಂಗೆ, ಮಾಂತೇಶ್ ಥಭಾಜ, ರಾಜು ಕಲಸನ್ನವರ್, ರಾಕೇಶ್ ಪಾಟೀಲ್ ದೀಪಕ್ ಪಾಟೀಲ್, ಬಸು ಸಂಗಾವೆ, ಭಾಹೂಸಾಹೇಬ ನಾಯಕ್, ನ್ಯಾಯವಾದಿ ಆರ್ .ರಾವ ಸೇರಿದಂತೆ ಅನೇಕ ಕನ್ನಡ ಅಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು. 


ಸುದ್ದಿ ಓದಿ