ನೂತನ ಶಾಲಾ ಕೊಠಡಿಗಳಿಗೆ ಶಾಸಕ ಶ್ರೀಮಂತ ಪಾಟೀಲ ಪೂಜೆ
ಕಾಗವಾಡ 03: ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಉಗಾರ ಖುರ್ದ್ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನೂತನ ಸನ್ 2019-20 ನೇ ಸಾಲಿನ ನಬಾರ್ಡ್ ಯೋಜನೆಯಡಿಯಲ್ಲಿ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ನೂತನ 5 ಕೊಠಡಿಗಳನ್ನು ಶಾಸಕ ಶ್ರೀಮಂತ ಪಾಟೀಲರು ಪೂಜೆ ಸಲ್ಲಿಸಿ, ಚಾಲನೆ ನೀಡಿದರು.
ಬುಧವಾರ ದಿ. 3ರಂದು ಉಗಾರ ಖುರ್ದದಲ್ಲಿ ಶಾಸಕ ಶ್ರೀಮಂತ ಪಾಟೀಲರು ನೂತನವಾಗಿ ನಿರ್ಮಾಣವಾದ ಶಾಲಾ ಕೊಠಡಿಗಳನ್ನು ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ವೀಕ್ಷಿಸಿ ಉದ್ಘಾಟಿಸಿದರು.
ಉಗಾರ ಖುರ್ದ ಪುರಸಭೆ ವ್ಯಾಪ್ತಿಯಲ್ಲಿ ಪ್ರಾರಂಭಿಸಿದ ಜನಸಂಪರ್ಕ ಕಾರ್ಯಲಯದಿಂದಾ ಸುಮಾರು 50 ಕ್ಕಿಂತ ಹೆಚ್ಚು ಸಾರ್ವಜನಿಕರಿಗೆ ಶಾಸಕರ ವತಿಯಿಂದ ಪೆನ್ಷನ್ ಬಾಂಡ್ (ಪಿಂಚಣಿ) ಗಳ ಮಂಜೂರಾತಿ ಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಿದರು.
ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಆರ್ ಮುಂಜೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಎಸ್.ಜಿ.ಹಿರೇಮಠ್, ಇಂಜಿನಿಯರ್ ಆರ್.ಪಿ.ಅವತಾಡೆ, ಪುರಸಭೆ ಸದಸ್ಯರಾದ ಪ್ರಪುಲ್ ಥೋರುಸೆ, ಬಾಬು ಹೊಸಮನಿ, ರಾಕೇಶ್ ಪಾಟೀಲ, ಸುಜಯ ಫರಾಕಟ್ಟೆ, ರಾಜೀವ ಪಾಟೀಲ, ಮದನ ದೇಶಿಂಗೆ, ಯೋಗೇಶ ಕುಂಬಾರ, ಪ್ರತಾಪ ಜತ್ರಾಟೆ, ಸುಭಾಸ ಖುರಾಡೆ, ಸಂಜಯ ವಾಗಮೋಡೆ, ವಿಕ್ರಮ್ ಧನಗರ, ಪ್ರಕಾಶ ಥೋರುಸೆ, ಪ್ರಕಾಶ ರಾಜಮಾನೆ ಮತ್ತಿತರ ಸದಸ್ಯರು, ಮುಖಂಡರು ಹಾಗೂ ಶಾಲಾ ಸಿಬ್ಬಂದಿಯವರು, ಕಾರ್ಯಕರ್ತರು ಉಪಸ್ಥಿತರಿದ್ದರು.