ಕಾಗವಾಡ

ಶಿರಗುಪ್ಪಿ ಶುಗರ್ ವರ್ಕ್ಸನಿಂದ ಸಕ್ಕರೆ ಚೀಲಗಳಿಗೆ ಪೂಜೆ

ಶಿರಗುಪ್ಪಿ ಶುಗರ್ ವರ್ಕ್ಸನಿಂದ ಸಕ್ಕರೆ ಚೀಲಗಳಿಗೆ ಪೂಜೆ

ಕಾಗವಾಡ  ನವೆಂಬರ್ 04: ಇಲ್ಲಿನ ದಿ.ಶಿರಗುಪ್ಪಿ ಶುಗರ್ ವರ್ಕ್ಸ ಸಕ್ಕರೆ ಕಾರ್ಖಾನೆ  2020-21ನೇ ಕಬ್ಬು ನುರಿಸುವ ಹಂಗಾಮಿನಲ್ಲಿ 26 ದಿನ ಕಬ್ಬು ನುರಿಸಿ 1 ಲಕ್ಷ ಕ್ವಿಂಟಲ್ ಸಕ್ಕರೆ ತಯಾರಿಸಿದೆ. 

ಬುಧವಾರ ಸಕ್ಕರೆ ಕಾರ್ಖಾನೆ ಸಭಾ ಭವನದಲ್ಲಿ ಕಾರ್ಖಾನೆಯ ಅಧ್ಯಕ್ಷರು, ಮಾಜಿ ಶಾಸಕ ಕಲ್ಲಪ್ಪಣ್ಣಾ ಮಗ್ಗೆಣ್ಣವರ ಮತ್ತು ಎಂ.ಡಿ ಡಾ. ರಮೇಶ ದೊಡ್ಡನ್ನವರ ಸಕ್ಕರೆ ಚೀಲಗಳ ಪೂಜೆ ನೆರವೇರಿಸಿದರು.

ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಸುತ್ತಿರುವ ರೈತರಿಗೆ ಪ್ರತಿಟನ್ ಕಬ್ಬಿಗೆ 2700 ರೂ. ದರ ಘೋಷಿಸಿ 14 ದಿನಗಳ ಒಳಗಾಗಿ ಅವರ ಖಾತೆಗೆ ಹಣ ಹಾಕಲಾಗಿದೆ ಎಂದು ಕಾರ್ಖಾನೆ ಅಧ್ಯಕ್ಷ ಕಲ್ಲಪ್ಪಣ್ಣಾ ಮಗ್ಗೆಣ್ಣವರ ಹೇಳಿದರು.

ಕಾರ್ಖಾನೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅರುಣ ಫರಾಂಡೆ, ಮುಖ್ಯ ಅಧಿಕಾರಿ ಕೆ.ಜೆ.ಜಾಯಕ್ಕನ್ನವರ, ರಸಾಯಣ ಶಾಸ್ತ್ರಜ್ಞ ಪ್ರೇಮಪಾಲ ಸಿಂಗ್, ಕೇನ್ ಮ್ಯಾನೇಜರ್ ಎ.ಕೆ.ಪಾಟೀಲ, ಕೌತುಕ ಮಗ್ಗೆಣ್ಣವರ, ಬಿ.ಡಿ.ಯಳಗುಡ, ವಿರೇಂದ್ರ ಜಾಡರ, ಕೋ-ಜನರೇಷನ್ ವಿಭಾಗದ ವ್ಯವಸ್ಥಾಪಕ ಜಯದೀಪ ಎಚ್.ಎನ್., ಎಸ್.ಆರ್.ನಾಯಿಕ, ಸೇರಿದಂತೆ ಅನೇಕರು ಇದ್ದರು.

ಸುದ್ದಿ ಓದಿ