ದೃಢ ಸಂಕಲ್ಪ ಯಾತ್ರೆಯ ಜಲಕುಂಭ ವಾಹನಕ್ಕೆ ಪೂಜೆ
ಶೇಡಬಾಳ 19: ಕನ್ನಡ ನಾಡಿನ ಸಮೃದ್ಧ ಸಂಪನ್ಮೂಲವನ್ನು ಸಮಗ್ರ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಸಮರ್ಕವಾಗಿ ಬಳಸಿಕೊಳ್ಳುವದೇ ಕರ್ನಾಟಕ ಜಾತ್ಯತೀತ ಜನತಾದಳ ಪಕ್ಷದ ಮುಖ್ಯ ಉದ್ದೇಶವಾಗಿದೆ ಎಂದು ಮಾಜಿ ಶಾಸಕ ಕಲ್ಲಪ್ಪಣ್ಣಾ ಮಗ್ಗೆನ್ನವರ ಹೇಳಿದರು.
ಅವರು ಸೋಮವಾರ ದಿ. 18ರಂದು ದೃಢ ಸಂಕಲ್ಪ ಯಾತ್ರೆಯ ಜಲಕುಂಭ ಹೋತ್ತು ಬಂದ ವಾಹನಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಜಾರಿಗೆ ತರುವುದು, ನದಿಗಳ ಜೋಡನೆ, ಬರುಡು ಜಮೀನಗಳಿಗೆ ನೀರಾವರಿ ಸೌಲಭ್ಯ ಒದಗಿಸಿಕೊಡುವುದೆ ನಮ್ಮ ಪಕ್ಷದ ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು.ಇದೇ ಸಮಯದಲ್ಲಿ ಜಿಲ್ಲಾ ಅಧ್ಯಕ್ಷ ಶಂಕರ ಮಾಡಲಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಮಯದಲ್ಲಿ ಕಲ್ಲಪ್ಪಣ್ಣಾ ಮಗ್ಗೆನ್ನವರ, ಶಂಕರ ಮಾಡಲಗಿ, ರಾಜೇಂದ್ರ ಐಹೋಳೆ, ಶರನು ನಾಯಿಕ, ಶಬ್ಬೀರ ಪಟೇಲ, ಸಂದಿಪ ಕುಸನಾಳೆ, ಪಪ್ಪು ಚೌಗಲೆ, ಸತೀಶ ಪಾಟೀಲ, ಸಾಗರ ಚೌಗಲಾ, ಚಂದ್ರಕಾಂತ ಪಾಟೀಲ ಸೇರಿದಂತೆ ಅನೇಕ ಜಾತ್ಯತೀತ ಜನತಾದಳ ಪಕ್ಷದ ಕಾರ್ಯಕರ್ತರು ಇದ್ದರು.