ಗುಳೇಗುಡ್ಡ

ಪುಣ್ಯಾರಾಧನೆ ಮಹೋತ್ಸವ

ಪುಣ್ಯಾರಾಧನೆ ಮಹೋತ್ಸವ

ಗುಳೇದಗುಡ್ಡ: ತಾಲೂಕಿನ ಕೊಟೇಕಲ್ ಗ್ರಾಮದ ಅಮರೇಶ್ವರ ಮಠದಲ್ಲಿ, ಪರಮಪೂಜ್ಯ ಲಿಂಗೈಕ್ಯ ಶ್ರೀ ಷ.ಬ್ರ.ಅಮರೇಶ್ವರ ಶ್ರೀಗಳವರ 52 ನೇ ಪುಣ್ಯಾರಾಧನೆ ಮಹೋತ್ಸವವನ್ನು ಜೂನ್, 8 ರಂದು ಮಂಗಳವಾರ ಆನ್ಲೈನ್ ಮೂಲಕ ಆಚರಿಸಲು ನಿರ್ಧರಿಸಲಾಗಿದೆ ಎಂದು ಶ್ರೀಮಠದ ಶ್ರೀಷ.ಬ್ರ.ನೀಲಕಂಠ ಶಿವಾಚಾರ್ಯ ಶ್ರೀಗಳು ಹೇಳಿದರುಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪರಮ ಪೂಜ್ಯ ಲಿಂಗೈಕ್ಯ ಶ್ರೀ ಷ.ಬ್ರ.ಅಮರೇಶ್ವರ 52 ನೇ ಶ್ರೀಗಳ ಪುಣ್ಯಾರಾಧನೆ ಮಹೋತ್ಸವದ ಅಂಗವಾಗಿ ಜೂನ್ 8, ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ಮಹಾರುದ್ರಾಭಿಷೇಕ ಜರುಗುವುದು. ಅದೇ ಸಮಯದಲ್ಲಿ ಕಾಶೀ ಪೀಠದ ಶ್ರೀ ಜಗದ್ಗುರು ವಿಶ್ವಾರಾಧ್ಯ ಮೂತರ್ಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಶ್ರೀ ಕಾಶಿ ಜಗದ್ಗುರುಗಳಿಂದ ಆಶೀರ್ವಚನ ನೆರವೇರುವುದು. ಸದ್ಬಕ್ತರು ಈ ಪುಣ್ಯಮಯ ಕಾರ್ಯಕ್ರಮದಲ್ಲಿ ಪಾಲ್ಗೂಂಡು ಆಶೀವರ್ಾದ ಪಡೆಯಬೇಕೆಂದು ಹೇಳಿದರು. ಮಹಾಮೃತ್ಯುಂಜಯ ಹೋಮ: ಇಡೀ ಜಗತ್ತು ಕೋವಿಡ್ನಿಂದ ಸಂಕಷ್ಟ ಅನುಭವಿಸುತ್ತಿದ್ದು ಲೋಕ ಕಲ್ಯಾಣಾರ್ಥವಾಗಿ, ಕೋರೊನಾ ನಿವಾರಣೆಗಾಗಿ ಅಂದು 10 ಗಂಟೆಗೆ ಮಹಾಮೃತ್ಯುಂಜಯ ಹೋಮ ನರವೇರುವುದೆಂದು ತಿಳಿಸಿದರು. 


ಸುದ್ದಿ ಓದಿ