ಧಾರವಾಡ ಜಿ.ಟಿ.ಟಿ.ಸಿ.ಯಲ್ಲಿ ನಡೆದ ವಿಶ್ವ ಯುವ ಕೌಶಲ್ಯ ದಿನಾಚರಣೆ
ಧಾರವಾಡ 15: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿ.ಟಿ.ಟಿ.ಸಿ, ಧಾರವಾಡದ ಸಂಯುಕ್ತಾಶ್ರಯದಲ್ಲಿ ಇಂದು (ಜುಲೈ 15 ರಂದು) ಜಿ.ಟಿ.ಟಿ.ಸಿ, ಧಾರವಾಡ ದಲ್ಲಿ ವಿಶ್ವ ಯುವ ಕೌಶಲ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ರವೀಂದ್ರ ಪಿ ದ್ಯಾಬೇರಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು, ಧಾರವಾಡ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಖಞಟಟ ಇಛಿಠ ಖಥಿಣಜಟ ಬಗ್ಗೆ ವಿವರಿಸಿದರು, ಶಿವಾನಂದ ಕುಂಬಾರ, ಪ್ರಾಂಶುಪಾಲರು, ಜಿ.ಟಿ.ಟಿ.ಸಿ, ಧಾರವಾಡ ರವರು ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ವಿದ್ಯಾರ್ಥಿಗಳಿಗೆ ಪ್ರಸ್ತುತ ಕೌಶಲ್ಯದ ಅವಶ್ಯಕತೆಯನ್ನು ತಿಳಿಸಿದರು.
ಹಾಗೂ ಶಂಕರ ಮಂಚೆಗೌಡ, ರಾಷ್ಟ್ರೀಯ ತಿರ್ುಗಾರರು ಮತ್ತು ಅಂತರಾಷ್ಟ್ರೀಯ ಕೌಶಲ್ಯ ಸ್ವರ್ಧೆ ತಜ್ಞರು, ಜಿ.ಟಿ.ಟಿ.ಸಿ, ಧಾರವಾಡ ರವರು ಮುಖ್ಯ ಭಾಷಣದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೌಶಲ್ಯ ಸ್ವರ್ಧೆಗಳಿಗೆ ಭಾಗವಹಿಸಲು ಸತತ ಪ್ರಯತ್ನದಿಂದ ಸಾಧ್ಯವೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿ.ಟಿ.ಟಿ.ಸಿ, ಧಾರವಾಡದ ವಿದ್ಯಾರ್ಥಿಗಳಾದ ಹಾಗೂ 2024ರ ರಾಷ್ಟ್ರೀಯ ಕೌಶಲ್ಯ ಸ್ವರ್ಧೆಯಲ್ಲಿ ಬೆಳ್ಳಿ ಪದಕ ವಿಜೇತರಾದ ಶಿವಾಜಿ ಧೊಂಡಿ ಮತ್ತು ಬಸವರಾಜ ಹಣಗಿ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರವಿ ಎ.ಎನ್., ಸಹಾಯಕ ನಿರ್ದೇಶಕರು, ಕೌಶಲ್ಯಾಭಿವೃದ್ಧಿ ಇಲಾಖೆ, ಧಾರವಾಡ ಎ. ಎಮ್ ಶೆಟ್ಟರ, ಸಹಾಯಕ ಸಾಂಖ್ಯಿಕ ಅಧಿಕಾರಿಗಳು, ಕೌಶಲ್ಯಾಭಿವೃದ್ಧಿ ಇಲಾಖೆ, ಧಾರವಾಡ ಮತ್ತು ಡಾ. ರವಿ ಮುನವಳ್ಳಿ ಅಭಿಯಾನ ವ್ಯವಸ್ಥಾಪಕರು ಡೆ-ನಲ್ಮ್ ಯೋಜನೆ, ಕೌಶಲ್ಯಾಭಿವೃದ್ಧಿ ಇಲಾಖೆ, ಧಾರವಾಡ ಹಾಗೂ ಸಿಬ್ಬಂದಿ ವರ್ಗದವರು, ಜಿ.ಟಿ.ಟಿ.ಸಿ, ಧಾರವಾಡದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು, ಪ್ರಶಾಂತ, ಉಪನ್ಯಾಸಕರು, ಜಿ.ಟಿ.ಟಿ.ಸಿ, ಧಾರವಾಡ ರವರು ವಂದನಾರೆ್ಣಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.