ವಿಶ್ವ ಪ್ರವಾಸೋದ್ಯಮ ದಿನ: ಪ್ರವಾಸೋದ್ಯಮ ತಾಣಗಳನ್ನು ರಕ್ಷಿಸುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ
ಧಾರವಾಡ 05: ಕರ್ನಾಟಕ ರಾಜ್ಯ ದೇಶದಲ್ಲೇ ಪ್ರವಾಸೋದ್ಯಮಕ್ಕೆ ಹೆಸರು ಪಡೆದಿದ್ದು, ಇಂದಿನ ಯುವ ಸಮುದಾಯದ ಮೇಲೆ ಪ್ರವಾಸೋದ್ಯಮ ತಾಣಗಳನ್ನು ರಕ್ಷಿಸುವ ಜವಾಬ್ದಾರಿ ಇದೆ ಎಂದು ಉತ್ತರಾಖಂಡದ ಇಂಟರ್ನ್ಯಾಷನಲ್ ಸೆಂಟರ್ ಫಾರ್ ರೆಸಪಾನ್ಸಿಬಲ್ ಟೂರಿಸಂ ಫೌಂಡೇಷನ್ ದ ನಿರ್ದೇಶಕಿ ಮನೀಷಾ ಪಾಂಡೆ ಅಭಿಪ್ರಾಯಪಟ್ಟರು.
ಕರ್ನಾಟಕ ಕಲಾ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಪ್ರವಾಸೋದ್ಯಮ ಅಧ್ಯಯನ ವಿಭಾಗ ಮತ್ತು ಕೇಂದ್ರ ಪ್ರವಾಸೋದ್ಯಮ ಬೆಂಗಳೂರು ಕಚೇರಿ ಸಹಯೋಗದಲ್ಲಿ ವಿಭಾಗದ 'ವಿಜಯ ಭುವನ', ಸಭಾಂಗಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರವಾಸೋದ್ಯಮ ಮತ್ತು ಶಾಂತಿ', ಎಂಬ ವಿಷಯದ ಕುರಿತು ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ರಕ್ಷಿಸುವ ಅಗತ್ಯವಿದೆ. ಪ್ರಸ್ತುತ ಕೇರಳ ರಾಜ್ಯ ದೇಶವನ್ನು ಪ್ರವಾಸೋದ್ಯಮವನ್ನು ಪ್ರತಿನಿಧಿಸುತ್ತದ್ದು, ಉತ್ತರಾಖಂಡ ರಾಜ್ಯ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಆದಾಯವನ್ನು ಹೊಂದಿರುವದು ವಿಶೇಷ ಎಂದ ಅವರು ಪ್ರವಾಸೋದ್ಯಮ ತಾಣಗಳಲ್ಲಿ ಸ್ಥಳೀಯ ಜನರ ಹಿತಾಸಕ್ತಿಯನ್ನು ಕಾಪಾಡುವುದು ಅವಶ್ಯ ಎಂದ ಅವರು ನಮ್ಮ ಸುತ್ತಮುತ್ತಲಿನ ಪ್ರವಾಸೋದ್ಯಮ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಿದಾಗ ಅವರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ ಎಂದರು.
ಸ್ಥಳೀಯ ಸಂಪ್ರದಾಯಕ ತಿನಿಸುಗಳು, ಸಂಪ್ರದಾಯ. ಸಂಸ್ಕೃತಿ ಕುರಿತು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸರ್ಕಾರವು ಪ್ರವಾಸೋದ್ಯಮ ಬೇಕಾಗುವ ಮೂಲಸೌಕರ್ಯ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸಬೇಕಾಗಿದೆ ಎಂದರು.
ಶಿರಸಿಯ ಕಮ್ಯೂನಿಟಿ ಟೂರಿಸಂ ವೃತ್ತಿಪರ ಸೀತಾರಾಮ ಹೆಗಡೆ ಮಾತನಾಡಿ... ಗ್ರಾಮೀಣ ಪ್ರವಾಸೋದ್ಯಮ ಪರಿಕಲ್ಪನೆ ಹೆಚ್ಚು ಪ್ರಸ್ತುತ ಗೊಳ್ಖುತ್ತಿರುವದರಿಂದ ಗ್ರಾಮೀಣ ಪ್ರವಾಸೋದ್ಯಮದಿಂದ ಆ ಗ್ರಾಮದ ಆರ್ಥಿಕತೆ ಹೆಚ್ಚಲು ಕಾರಣವಾಗಿದೆ ಎಂದ ಅವರು ಗ್ರಾಮೀಣ ಪ್ರವಾಸೋದ್ಯಮದಿಂದ ಸ್ಥಳೀಯರಿಗೆ ಉದ್ಯೋಗ ಅವಕಾ ಕಲ್ಪಿಸಲು ಸಾದ್ಯ ಎಂದರು.
ಶೈಕ್ಷಣಿಕ ಒಪ್ಪಂದಕ್ಕೆ ಸಹಿ : ಇದೇ ಸಂದರ್ಭದಲ್ಲಿ ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗದ ಜೊತೆಗೆ ಶೈಕ್ಷಣಿಕ ತರಬೇತಿಗಾಗಿ ಉತ್ತರಾಖಂಡದ ಇಂಟರನ್ಯಾಷನಲ್ ಸೆಂಟರ್ ಫಾರ್ ರೆಸಪಾನ್ಸಬಲ್ ಟೂರಿಸಂ ಫೌಂಡೇಷನ್ ದ ಜೊತೆಗೆ ಒಪ್ಪಂದಕ್ಕೆ ಮಾಡಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿವಿ ನಿವೃತ್ತ ಕುಲಸಚಿವರಾದ ಪ್ರೊ.ಎಸ್.ರಾಜಶೇಖರ ಮಾತನಾಡಿ.ಇಚ್ಛಾಶಕ್ತಿಯಿಂದ ಪ್ರವಾಸೋದ್ಯಮ ಕ್ಷೇತ್ರವನ್ನು ಬೆಳಸಲು ಸಾಧ್ಯ ಎಂದ ಅವರು ಪ್ರವಾಸೋದ್ಯಮ ಬೆಳೆಸುವಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡುವುದು ಅವಶ್ಯಕತೆ ಇದೆ ಎಂದ ಅವರು ಸರಕಾರಗಳು ಪ್ರವಾಸೋದ್ಯಮ ಕ್ಷೇತ್ರಗಳನ್ನು ಭವಿಷ್ಯದಲ್ಲಿ ಉಳಿಸಿಕೊಳ್ಳಬೇಕಾದರೆ ಅಗತ್ಯ ಯೋಜನೆಗಳನ್ನು ರೂಪಿಸಬೇಕಾದ ಅಗತ್ಯವಿದೆ ಎಂದರು.
ಪ್ರವಾಸೋದ್ಯಮ ದಿನದ ಅಂಗವಾಗಿ ಆಯೋಜಿಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ಗಳನ್ನು ನೀಡಲಾಯಿತು .
ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಜಗದೀಶ ಕಿವುಡನವರ ಮಾತನಾಡಿ ರಾಜ್ಯದ ಸರಕಾರಿ ಸಂಸ್ಥೆ ಆಗಿದೆ. ಉತ್ತರ ಕರ್ನಾಟಕ ವಿದ್ಯಾರ್ಥಿಗಳನ್ನು ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಿದ್ದ ಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ಸಂಸ್ಥೆ ತನ್ನದೇ ಆದ ಪಾತ್ರವನ್ನು ವಹಿಸಿದೆ ಎಂದು ಅವರು ಹದಿನೇಳು ಪ್ರವಾಸೋದ್ಯಮ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಶೈಕ್ಷಣಿಕವಾಗಿ ಚಟುವಟಿಕೆಗಳನ್ನು ಆಯೋಜಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಿರಸಿಯ ಸಿತಾರಾಮ ಹೆಗಡೆ, ಡಾ.ರಾಣಿ ರವಿಶಂಕರ, ಡಾ.ಸುಷ್ಮಾ ಮಳಗಿ, ಸಂದೀಪ್ ಘೋರೆ್ಡ ಸೇರಿದಂತೆ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.