ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮ
ಕಾಗವಾಡ 02: ಇಂದಿನ ಯುವಕರು ನಿರಂತರವಾಗಿ ತಂಬಾಕು ಮತ್ತು ತಂಬಾಕುದಿಂದ ನಿರ್ಮಿಸುವ ಪದಾರ್ಥಗಳು ಅತಿಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಿದ್ದಾರೆ. ಯುವಕರು ದುಷ್ಟ ಚಟಗಳ ಆಧೀಣರಾಗಿದ್ದಾರೆ. ಇದ್ದರಿಂದ ಕ್ಯಾನ್ಸರ್ ಮತ್ತಿತರ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಯುವಕರ ತಂದೆ-ತಾಯಿ ತಮ್ಮ ಮಕ್ಕಳನ್ನು ಕಾಪಾಡಲು ದುಷ್ಟ ಚಟಗಳಿಂದ ದೂರುಳಿಸಲು ಪ್ರಯತ್ನಿಸಬೇಕೆಂದು ಮಿರಜದ ನಿರ್ಮಲ್ ಫೌಂಡೇಶನ್ ಅಧ್ಯಕ್ಷ ಡಾ. ಚಂದ್ರಶೇಖರ್ ಹಳಿಂಗಳೆ ಕರೆ ನೀಡಿದ್ದಾರೆ.
ಬುಧವಾರ ರಂದು ಮಿರಜದ ನಿರ್ಮಲ್ ಫೌಂಡೇಶನ ಸಭಾ ಭವನದಲ್ಲಿ “ವಿಶ್ವ ತಂಬಾಕು ರಹಿತ ದಿನ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಡಾ. ಚಂದ್ರಶೇಖರ ಹಳಿಂಗಳೆ ತಂಬಾಕು ಸೇವಿಸಿದರೆ ಅಗುವ ಅನಾಹುತ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಸಾಂಗಲಿ ಮಹಾನಗರ ಪಾಲಿಕೆಯ ನೋಡಲ್ ಅಧಿಕಾರಿಗಳು ಡಾ. ರವೀಂದ್ರ ಕುಮಾರ್ ತಾಟೆ ಉಪಸ್ಥಿತರಿದ್ದರು.
ಡಾ. ಚಂದ್ರಶೇಖರ ಹಳಿಂಗಳೆ ಮಾತನಾಡುವಾಗ, ಇಂದಿನ ಯುವ ಪೀಳಿಗೆ ತಂಬಾಕು ಅಥವಾ ತಂಬಾಕು ಸಂಬಂಧಿತ ಪದಾರ್ಥಗಳಿಗೆ ಅಂಟಿಕೊಂಡಿದ್ದಾರೆ. ಇದ್ದರಿಂದ ಹೊರಬರದೆ ಇನ್ನಷ್ಟು ಮುಳುಗುತ್ತಿದ್ದಾರೆ. ಇದೊಂದು ಚಿಂತೆಯ ವಿಷಯವಾಗಿದೆ. ಆದರೆ, ಇಂಥಹ ದುಷ್ಟಗಳಿಂದ ಅವರನ್ನು ಹೊರ ತರಲು ಶಕ್ಯವಿದೆ. ಇದಕ್ಕಾಗಿ 8 ಡಿ ಸೂತ್ರವನ್ನು ಅನುಸರಿಸಬೇಕೆಂದರು.
1. ಘೋಷಣೆ ದಿನಾಂಕ: ತಂಬಾಕು ಅಥವಾ ತಂಬಾಕು ಉತ್ಪನ್ನಗಳನ್ನು ತ್ಯಜಿಸಲು ದಿನಾಂಕವನ್ನು ನಿಗದಿಪಡಿಸುವುದು.
2. ಸಂಬಂಧಿಕರು / ಸ್ನೇಹಿತರನ್ನು ಘೋಷಿಸಿ: ಇದರಲ್ಲಿ ನಾನು ತ್ಯಜಿಸಲು ನಿರ್ಧರಿಸಿದ್ದೇನೆ ಎಂದು ಸ್ನೇಹಿತರು ಅಥವಾ ಸಂಬಂಧಿಕರಿಗೆ ತಿಳಿಸಿ.
3. ಡ್ರಗ್ ಥೆರಪಿ: ತಂಬಾಕಿನ ಹಂಬಲವನ್ನು ತಡೆಗಟ್ಟಲು ಮತ್ತು ತುರಂತವಾಗಿ ತಂಬಾಕು ಸೇವನೆ ಸ್ಥಗೀತಗೊಳಿಸದ್ದಲ್ಲಿ ಆಗುವ ತೊಂದರೆ ನಿಭಾಯಿಸುವಾಗ ಮಾತ್ರೆಗಳನ್ನು ಬಳಿಸಬೇಕು.
4. ವಿಳಂಬ: ನೀವು ಇದಕ್ಕೆ ವ್ಯಸನಿಯಾಗಲು ಬಯಸಿದರೆ, ಸಮಯವನ್ನು ಕೊಲ್ಲುವುದು.
5. ವಿನಾಶ: ಇದು ಮನಸ್ಸನ್ನು ವಿಚಲಿತಗೊಳಿಸುವುದು, ವೃತ್ತಪತ್ರೀಕೆಗಳು ಓದುವುದು, ಟಿವಿ ನೋಡುವುದು ಇತ್ಯಾದಿಗಳನ್ನು ಒಳಗೊಂಡಿದೆ.
6. ಆಳವಾದ ಉಸಿರಾಟ: ದುಷ್ಟ ಚಟಗಳಿಗೆ ಅಂಟಿಕೊಂಡ ಯುವಕನಿಗೆ ತಂಬಾಕು ದೊರೆಯದೆಯಿದ್ದರೆ, ಆತನಿಗೆ ಭಯ ಉಂಟಾಗುತ್ತದೆ. ಈ ಕಾರಣ ಯೋಗಾದಲ್ಲಿ ಮಾಡುವ ಆಳವಾದ ಉಸಿರಾಟ ಪ್ರಾರಂಭಿಸಬೇಕು.
7. ಕುಡಿಯುವ ಮತ್ತು ಪರ್ಯಾಯ ಆಹಾರ ಪದ್ಧತಿ: ಬಯಸಿದಲ್ಲಿ ನೀರು ಕುಡಿಯುವುದು ಮತ್ತು ಚಾಕೊಲೇಟ್, ಪುದೀನಾ ಮಾತ್ರೆಗಳು, ಲವಂಗ, ಸಬ್ಬಸಿಗೆ ಇತ್ಯಾದಿಗಳನ್ನು ಸೇವಿಸುವುದು.
8. ಚರ್ಚೆಗಳು: ಉಪಚಾರ ಪಡೆದುಕೊಳ್ಳುತ್ತಿರುವ ಯುವಕನಿಗೆ ಯಾವ ರೀತಿ ಡಾಕ್ಟರ್ ಹಾಗೂ ಅವರ ಸಹಕಾರಿಗಳು ಮಾರ್ಗದರ್ಶನ ನೀಡುತ್ತಾರೆ, ಅದರ ಮೇಲೆ ಅವಲಂಬಿತವಿದೆ.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಡಾ. ರವೀಂದ್ರ ಕುಮಾರ್ ತಾಟೆ ಹೆಚ್ಚಿನ ಮಾಹಿತಿ ನೀಡುವಾಗ, ವ್ಯಸನಿಗಳು ಹೇಗೆ ಮಾನಸಿಕ ಅಸ್ವಸ್ಥರಾಗಿದ್ದಾರೆ, ಡಾ. ಚಂದ್ರಶೇಖರ್ ಹಳಿಂಗಳೆ ಅವರ 8ಡಿ ಸೂತ್ರವು ಹೇಗೆ ಸೂಕ್ತವಾಗಿದೆ ಮತ್ತು ರೋಗಿಗಳ ಸಿಬ್ಬಂದಿ ವೈದ್ಯರನ್ನು ಹೇಗೆ ಸಂಯೋಜಿಸುವುದು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು. ಅತಿಥಿಯಾಗಿ ಮನೋವೈದ್ಯ ಡಾ. ಗೋವಿಂದ್ ಕುಲಕರ್ಣಿ ಅವರು ಮಾರ್ಗದರ್ಶನ ನೀಡಿದರು.
ಪಥನಾಟ್ಯ ನಿರೂಪಕರಾದ ಸೆಜಲ್ ಬನಸೋಡೆ, ಸತ್ಯವ್ವಾ ಮಗದುಮ, ಮಾಯಾ ಕದಮ್, ಮಾಧುರಿ ಪುಕಾಳೆ, ಇಮ್ರಾನ್ ಮುಲ್ಲಾ, ಸಚಿನ್ ಮತ್ತು ದೀಪಕ್ ಮಾನೆ ಅವರು ಪಥನಾಟ್ಯ ಪ್ರದರ್ಶಿಸಿದರು.
ಈ ವೇಳೆ ಡಾ. ನಿಶಾ ಹಳಿಂಗಳೆ, ಡಾ. ಅಕ್ಷತಾ ಹಳಿಂಗಳೆ, ಡಾ. ಗೋವಿಂದ್ ಕುಲಕರ್ಣಿ, ವಿನಾಯಕ್ ಕವಡೆ ಮತ್ತು ನಿರ್ಮಲ್ ಆಸ್ಪತ್ರೆಯ ಸಿಬ್ಬಂದಿದವರು ಉಪಸ್ಥಿತರಿದ್ದರು.