ವಿಶ್ವ ರಂಗಭೂಮಿ ದಿನಾಚರಣೆ
ಬ್ಯಾಡಗಿ: ತಾಲೂಕಿನ ಆತ್ತಿಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕಿರುಚಿತ್ರ ನಟ, ನಿರೂಪಕ ಹಾಗೂ ರಂಗಭೂಮಿ ಕಲಾವಿದರಾದ ಜಮೀರ್ ಅಬ್ದುಲ್ ಗಫಾರಸಾಬ ರಿತ್ತಿ ಅವರಿಗೆ 2022ನೇ ಸಾಲಿನ ವಿಶ್ವ ರಂಗಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಹಾವೇರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹುತಾತ್ಮ ಮೈಲಾರ ಮಹದೇವಪ್ಪರವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಗೆಳೆಯರ ಬಳಗ, ಜಿಲ್ಲಾ ಕಲಾಬಳಗ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಜಮೀರ್ ರಿತ್ತಿ ಅವರ ಕಲೆ, ಸಾಹಿತ್ಯ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತ ಜಮೀರ್ ರಿತ್ತಿ ಅವರನ್ನು ಜಿಲ್ಲೆಯ ಹಿರಿಯ ಹಾಗೂ ಕಿರಿಯ ಸಾಹಿತಿಗಳು, ಕಲಾವಿದರು, ನೌಕರರ ಮತ್ತು ಶಿಕ್ಷಕರ ಸಂಘದ ಸದಸ್ಯರು, ವಿವಿಧ ಗಣ್ಯರು ಹಾಗೂ ಗೆಳೆಯರ ಬಳಗದ ಬಂಧು ಮಿತ್ರರು ಸೇರಿದಂತೆ ಇನ್ನಿತರರು ಅಭಿನಂದಿಸಿ ಶುಭ ಹಾರೈಸಿದ್ದಾರೆ.