ಯರಗಟ್ಟಿ

ವಿಶ್ವ ರೇಬಿಸ್ ದಿನ ಆಚರಣೆ

ವಿಶ್ವ ರೇಬಿಸ್ ದಿನ ಆಚರಣೆ

ಯರಗಟ್ಟಿ 30: ಸ್ಥಳಿಯ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ವಿಶ್ವ ರೇಬೀಸ್ ದಿನಾಚರಣೆಯನ್ನು ಆಚರಿಸಲಾಯಿತು.  

ರೇಬೀಸ್ ಸೋಂಕು ಪ್ರಾಣಿಯಿಂದ ಪ್ರಾಣಿಗೆ ಪ್ರಾಣಿಯಿಂದ ಮನುಷ್ಯನಿಗೆ ಹರಡುವದು. 

ಜ್ವರ ನಿಶ್ಯಕ್ತಿ ತಲೆನೋವು ಆಯಾಸ ಅಸ್ವಸ್ಥತೆ ಇದರ ಲಕ್ಷಣಗಳಾಗಿದ್ದು. ಮೆದುಳು ಸೋಂಕಿನಿಂದ ಆತಂಕ ಗೊಂದಲ ಉಂಟಾಗಿ ರೋಗಿಗೆ ನೀರು ಬೆಂಕಿ ಕಂಡರೆ ಹೆದರಿಕೆ ಕಂಡುಬರುತ್ತದೆ. 

ಇದನ್ನು ನಿಯಂತ್ರಣ ಮಾಡಲು - ನಾಯಿ ಇತರೆ ಸಾಕುಪ್ರಾಣಿಗಳನ್ನು ಕಚ್ಚದಂತೆ ನೋಡಿಕೊಳ್ಳುವದು. ಸಾಕುಪ್ರಾಣಿ ಗಳಿಗೆ ಲಸಿಕೆ ಹಾಕಿಸುವದು. ಮಕ್ಕಳು ಇತರರು ಪ್ರಾಣಿಗಳ ಸಂಪರ್ಕಕ್ಕೆ  ಬರದಂತೆ ನೋಡಿಕೊಳ್ಳುವುದು. ಸೋಂಕಿತ ನಾಯಿ ಕಡಿದಾಗ ಲಸಿಕೆ ಮಾಡಿಸುವದು. ಬಾವಲಿಗಳಿಂದ ದೂರವಿರುವದು ಹಾಗೂ ಬೀದಿ ನಾಯಿಗಳನ್ನ ನಿಯಂತ್ರಣ ಮಾಡುವದಾಗಿದೆ ಹಾಗೂ  ವಿಶ್ವ  ರೇಬಿಸ್ ದಿನಾಚರಣೆ ಅಂಗವಾಗಿ ಆರೋಗ್ಯ ವಂದೇ, ಶೂನ್ಯ ಸಾವು ಎಂಬುದು 

ಈ ವರ್ಷದ ಘೋಷಣೆಯಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆಯ್‌. ಆರ್‌. ಗಂಜಿ ಹೇಳಿದರು.  

ಕಾರ್ಯಕ್ರಮದಲ್ಲಿ  ಡಾ. ರಮಾಶ್ರೀ  ಕಣಗಲಿ, ಎಸ್‌. ಬಿ. ಬೆಂಡಿಗೇರಿ, ಎನ್‌. ಎಂ.  ಹಾರೂಗೊಪ್ಪ,  ಮಂಜುಳಾ ಈರಗಾರ, ಎಂ. ಎಚ್‌. ಹುನಸಿಕಟ್ಟಿ, ಯು. ಬಿ.  ಬೆಟಗೇರಿ, ಆಶಾ ಕಾರ್ಯಕರ್ತೆಯರು, ತಾಯಂದಿರು ಸಾರ್ವಜನಿಕರು ಹಾಜರಿದ್ದರು ಡಾ. ಬಿ. ಎಸ್‌. ಬಳ್ಳೂರ  ಮುಖ್ಯ ವೈದ್ಯಾಧಿಕಾರಿಗಳು ಇವರು ಅದ್ಯಕ್ಷತೆ ವಹಿಸಿದ್ದರು. ಮಂಜುಳಾ ಈರಗಾರ  ನಿರೂಪಣೆ  ಮಾಡಿ  ಎನ್‌.  ಎಂ. ಹಾರೂಗೊಪ್ಪ ಸ್ವಾಗತಿಸಿ ಎಸ್‌. ಬಿ. ಬೆಂಡಿಗೇರಿ ವಂದಿಸಿದರು. 


ಸುದ್ದಿ ಓದಿ