ವಿಶ್ವ ರೇಬಿಸ್ ರೋಗ ಜಾಗೃತಿ ಕಾರ್ಯಕ್ರಮ
ಇಂಡಿ: ರೇಬಿಸ್ ವೈರಾಣು ತಗುಲಿರುವ ನಾಯಿ ಬೆಕ್ಕು ತೋಳದಂತಹ ಪ್ರಾಣಿಗಳು ಮನುಷ್ಯರನ್ನು ಕಚ್ಚುವದು ಹಾಗೂ ನೆಕ್ಕುವುದರಿಂದಲೂ ಮನುಷ್ಯನ ದೇಹದಲ್ಲಿ ವೈರಾಣು ಪ್ರವೇಶಿಸುತ್ತದೆ. ರೇಬೀಸ್ ಹೊಂದಿರುವ ಮನುಷ್ಯ ಸಹ ಇನ್ನೊಬ್ಬ ವ್ಯಕ್ತಿಗೆ ಕಚ್ಚಿದರು ರೋಗ ಹರಡುತ್ತದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಅರ್ಚನಾ ಕುಲಕರ್ಣಿ ಹೇಳಿದರು.
ಬುಧವಾರ ಪಟ್ಟಣದ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ ವಿಶ್ವ ರೇಬೀಸ್ ರೋಗ ಜಾಗೃತಿ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಿದರು.
ವೈರಾಣು ತಗುಲಿದ ಪ್ರಾಣಿ ಕಚ್ಚಿದ ಜಾಗವನ್ನು ತುರ್ತಾಗಿ ಶುಚಿಗೊಳಿಸಬೇಕು. ಹರಿಯುವ ನೀರಿನಿಂದ ಪ್ರಾಣಿ ಕಚ್ಚಿದ ಜಾಗವನ್ನು ಸ್ವಚ್ಚಗೊಳಿ ಲಸಿಕೆ ಹಾಕಿಸಿಕೋಳ್ಳುವುದರಿಂದ ವೈರಾಣು ನರಗಳ ಮೇಲೆ ಪ್ರಭಾವ ಬೀರುವದು ಕಡಿಮೆಯಾಗುತ್ತದೆ ಎಂದರು.
ಪಶು ವೈದ್ಯ ಡಾ. ರಾಜಕುಮಾರ ಅಡಕೆ ಮಾತನಾಡಿ, ರೋಗ ನಿರೋದಕ ಲೇಪನಗಳನ್ನು ಬಳಸಬಹುದು. ಕಚ್ಚಿದ ಜಾಗಕ್ಕೆ ಹೋಲಿಗೆ ಹಾಕಬಾರದು ಯಾವುದೇ ಮನೆಯ ಮದ್ದುಗಳನ್ನು ಹಚ್ಚಬಾರದು ಎಂದು ಹೇಳಿದರು.
ಡಾ. ಪ್ರಶಾಂತ ಧೂಮಗೊಂಡ ಮಾತನಾಡಿದರು, ರೋಗ ತಗಿಲಿದ ನಾಯಿ ಇತರೆ ಪ್ರಾಣಿಗಳಿಗೆ ಕಡಿದಾಗ ವೈರಾಣುಗಳು ಪುನ: ರವಾನೆಯಾಗುತ್ತವೆ ಮೆದುಳಿಗೆ ಸಮೀಪದ ಭಾಗಗಳಲ್ಲಿ ಕಡಿದರೆ ರೋಗ ಬೇಗ ಬರುತ್ತದೆ. ವೈರಾಣು ಶರೀರ ಪ್ರವೇಶಿಸಿದ ಒಂದು ವಾರದಿಂದ 2 ವರ್ಷದ ಒಳಗೆ ಯಾವಾಗ ಬೇಕಾದರು ಕಾಯಿಲೆ ಬರಬಹುದು. ನಾಯಿ ಕಡಿದ ನಂತರ ತಕ್ಷಣವೇ ಆಸ್ಪತ್ರೆಗೆ ಹೋಗಿ ಲಸಿಕೆ ಮಾಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ, ಎಸ್.ಎಸ್. ಪತ್ತಾರ, ಸಿ.ಜೆ. ಜೋಸೆಪ್, ವಿಶ್ವನಾಥ ತೆನಿಹಳ್ಳಿ, ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ಇದ್ದರು.