ವಿಶ್ವ ಫಾರ್ಮಸಿಸ್ಟ್ ದಿನಾಚರಣೆ
ಸಿಂದಗಿ: ಫಾರ್ಮಾಸಿಸ್ಟ್ಗಳು ರೋಗಿಯ ಖಾಯಿಲೆಯನ್ನು ಗುರುತಿಸುವ ವೈದ್ಯರುಗಳಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ನಿಗದಿತ ಕಾಯಿಲೆಗೆ ಸೂಕ್ತ ಓಷಧಿಗಳನ್ನು ನೀಡಿ ಅವುಗಳನ್ನು ಹೇಗೆ ಮತ್ತು ಯಾವಾಗ ತೆಗೆದುಕೊಳ್ಳಬೇಕು ಎಂದು ತಿಳಿಸಿಕೊಡುವುದರ ಜೊತೆಗೆ ರೋಗ ಗುಣಮುಖದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ ಹೇಳಿದರು.
ನಗರದ ಕಾವ್ಯಾ ಶಿಕ್ಷಣ ಸಂಸ್ಥೆಯ ಸಂಗಮೇಶ್ವರ ಫಾರ್ಮಸಿ ಕಾಲೇಜಿನಲ್ಲಿ ಹಮ್ಮಿಕೊಂಡ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫಾರ್ಮಾಸಿಸ್ಟಗಳು ತಮ್ಮ ವೃತ್ತಿಯಲ್ಲಿ ಪರಿಣಿತಿ ಹೊಂದಿರಬೇಕು. ಇಲ್ಲದಿದ್ದರೆ ರೋಗಿಯ ಜೀವದ ಜೊತೆ ಚೆಲ್ಲಾಟವಾಡಿದಂತಾಗುತ್ತದೆ. ನಿಜವಾದ ಸಾಮಾಜಿಕ ಜವಾಬ್ದಾರಿ ಹೊಂದಿದವರು ಎಂದರೆ ಫಾರ್ಮಾಸಿಸ್ಟಗಳು ಎಂದರು.
ಇದೇ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ, ಸರಕಾರಿ ಆಸ್ಪತ್ರೆಯ ಫಾರ್ಮಾಸಿಸ್ಟ ಸುರೇಶ ಬಬಲೇಶ್ವರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರಾಚಾರ್ಯ ಸಂದೀಪ ಚಾಂದಕವಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯ ವಿದ್ಯಾರ್ಥಿನಿ ಸಹನಾ ಚೌಕಿಮಠ ಸ್ವಾಗತಿಸಿದರು. ನೂರಲಿನ್ ನಿರೂಪಿಸಿದರು. ನಯನಾ ದೇಶಟ್ಟಿ ವಂದಿಸಿದರು.