ಕಾಗವಾಡ

ಜನರಲ್ಲಿ ಮಾನಸಿಕ ಆರೋಗ್ಯದ ಜಾಗೃತಿ ಮೂಡಿಸಬೇಕು: ಜಿ.ಜಿ. ಕಾಂಬಳೆ

ಜನರಲ್ಲಿ ಮಾನಸಿಕ ಆರೋಗ್ಯದ ಜಾಗೃತಿ ಮೂಡಿಸಬೇಕು: ಜಿ.ಜಿ. ಕಾಂಬಳೆ

ಮಿರಜನ ನಿರ್ಮಲ ಆಸ್ಪತ್ರೆಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಕಾಗವಾಡ 12: ಇಂದಿನ ಒತ್ತಡದ ಜೀವನದಲ್ಲಿ ಜನರಿಗೆ ಮಾನಸಿಕ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ವಿಶೇಷವಾಗಿ ನಿರ್ಮಲ ಆಸ್ಪತ್ರೆ ಮತ್ತು ವ್ಯಸನಮುಕ್ತಿ ಕೇಂದ್ರಲ್ಲಿಯ ರೋಗಿಗಳಿಗೆ ಈ ಕುರಿತು ಮಾರ್ಗದರ್ಶನ ಅತೀ ಅವಶ್ಯಕವಾಗಿದೆಂದು ಸಾಂಗಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ, ಜಿಲ್ಲಾ ಹಿರಿಯ ದಿವಾನಿ ನ್ಯಾಯಾಲಯದ ನ್ಯಾಯಾಧೀಶ ಜಿ.ಜಿ. ಕಾಂಬಳೆ ತಿಳಿಸಿದ್ದಾರೆ. 

ಅವರು, ಇತ್ತಿಚಿಗೆ ಮಹಾರಾಷ್ಟ್ರದ ಮಿರಜ ಪಟ್ಟಣದ ನಿರ್ಮಲ ಆಸ್ಪತ್ರೆ, ಮತ್ತು ವ್ಯಸನಮುಕ್ತಿ ಕೇಂದ್ರದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ನಿಮಿತ್ಯ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಾ ರೋಗಿಗಳ ಕಾನೂನು ಹಕ್ಕುಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. 

ಮುಖ್ಯ ಅತಿಥಿಗಳಾಗಿ ಡಾ. ಶೀತಲ ಶಿಂಧೆ, ಮನೋರೋಗ ತಜ್ಞ ಡಾ. ಮಾಣಿಕರಾವ ಸೂರ್ಯವಂಶಿ ಉಪಸ್ಥಿತರಿದ್ದು, ಮಾರ್ಗದರ್ಶನ ಮಾಡಿದರು. ಡಾ. ದೀಪಕ ಮುಕಾದಮ ಪ್ರಾಸ್ಥಾವಿಕವಾಗಿ ಮಾತನಾಡಿದರು. 

ನಿರ್ಮಲ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ವ್ಯಸನಗಳು ಮತ್ತು ಮಾನಸಿಕ ಕಾಯಿಲೆಗಳ ಕುರಿತು ಜನಜಾಗೃತಿ ನಾಟಕವನ್ನು ಪ್ರದರ್ಶನ ಮಾಡಿದರು. 

ಈ ವೇಳೆ ನಿರ್ಮಲ ಆಸ್ಪತ್ರೆಯ ಎಲ್ಲ ಸಿಬ್ಬಂದಿ ವರ್ಗದವರು, ರೆಡ-ಶಿರಾಳದ ಮಾತೋಶ್ರೀ ಹೀರಾಯಿ ದೇಶಮುಖ ನಸಿಂರ್ಗ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ದೀಪಕ ಮುಕಾದಮ ನಿರೂಪಿಸಿದರು. ನೀತಿನ ಅಂಬೇಕರ ವಂದಿಸಿದರು. 


ಸುದ್ದಿ ಓದಿ