ಇಂಡಿ

ವಿಶ್ವ ಮಾನಸಿಕ ದಿನಾಚರಣೆ ಕಾರ್ಯಕ್ರಮ

ವಿಶ್ವ ಮಾನಸಿಕ ದಿನಾಚರಣೆ ಕಾರ್ಯಕ್ರಮ

ಇಂಡಿ: ಜೀವನದಲ್ಲಿ ಒಂದಲ್ಲಾ ಒಂದು ಹಂತದಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬನು ಮಾನಸಿಕ ತೊಂದರೆಗೆ ಒಳಗಾಗುತ್ತಾರೆ. ತಮಗೆ ಮಾನಸಿಕ ಕಾಯಿಲೆ ಇದೆ ಎಂದು ವಿಜಯಪುರ ಜಿಲ್ಲಾ ಆಸ್ಪತ್ರೆಯ ಮನೋವೈದ್ಯ ಡಾ. ಮಂಜುನಾಥ ಮಸಳಿ ಹೇಳಿದರು 

ಮಂಗಳವಾರ ಪಟ್ಟಣದ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಲಯದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು. 

ಮದ್ಯಪಾನ ದುಷ್ಯಚಟದ ತೊಂದರೆಗಳು ಇದ್ದಲ್ಲಿ ಮಾಟ ಮಂತ್ರ ದೇವರ, ಮೂಢನಂಬಿಕೆಗೆ ಒಳಗಾಗದೇ ಹತ್ತಿರದ ಸರಕಾರಿ ಆಸ್ಪತ್ರೆಗೆ ಹೋಗಿ ಮನೋತಜ್ಞರನ್ನು ಭೇಟಿ ಮಾಡಬೇಕು ಎಂದರು. 

ತಾಲೂಕು ಆರೋಗ್ಯ ಅಧಿಕಾರಿಗಳು ಡಾಽಽ ಅರ್ಚನಾ ಕುಲಕರ್ಣಿ ಮಾತನಾಡಿ, ಮನೋರೋಗಿಗಳು ತಮಗೆ ಇಂತಹ ಕಾಯಿಲೆಗಳು ಗೊತ್ತಾಗಿದ ಕ್ಷಣ  ಚಿಕಿತ್ಸೆ ಪಡೆಯಲು ಮುಂದೆ ಬರುವುದಿಲ್ಲ. ಕೆಲವು ಸಲ ಗಾಬರಿ, ಭಯ ಆಗುತ್ತದೆ. ಮಾನಸಿಕ ಆರೋಗ್ಯವು ಸರಿಯಾಗಿ ಇರದೇ ಇದ್ದರೆ ಆಗ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಹೀಗಾಗಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವು ಸರಿಯಾಗಿದ್ದರೆ. ಮಾತ್ರ ಮನುಷ್ಯನ ಜೀವನವು ಸುಖಕರವಾಗಿರುವದು ಸಾದ್ಯೆ ಎಂದರು. 

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳು ಸುನಂದಾ ಅಂಬಲಗಿ ಮಾತನಾಡಿ,      ನಿಯಮಿತವಾಗಿ ನಿದ್ರೆ ಉತ್ತಮ ಆಹಾರ, ವ್ಯಾಯಾಮ ಹೊಸ ಕೌಶಲ್ಯಗಳೊಂದಿಗೆ ತಮ್ಮ ಜೀವನವನ್ನು ಸಾಗಿಸಬೇಕು ಎಂದು ತಿಳಿಸಿದರು. 

ಕಾರ‌್ಯಕ್ರಮದಲ್ಲಿ ದೀಪಾಲಯ ಸಂಘದ ಒಕ್ಕೂಟದ ಮಹಿಳೆಯರು ವಿದ್ಯಾರ್ಥಿನಿಯರು ಕಾರ್ಯಾಲಯದ ಆರೋಗ್ಯ ಸಿಬ್ಬಂದಿ ಇದ್ದರು. 


ಸುದ್ದಿ ಓದಿ