ಶ್ರವಣ ಮೂನ್ಯತೆಯುಳ್ಳ, ಅಂದ, ಅಂಗವಿಕಲರ ಸೇವೆ ಭಗವಂತನ ಸೇವೆ: ನಂದಿಗುಡಿ ಶ್ರೀ
ರಾಣೇಬೆನ್ನೂರು 28: ಸಮಾಜದಲ್ಲಿ ಜನ್ಮ ತಾಳಿದ ಪ್ರತಿಯೊಂದು ಮಾನವ ಜೀವಿ ಬದುಕಿ ಬಾಳುವ ಹಕ್ಕು ಇದೆ. ಅಂಗ ವೈಕಲ್ಯಲೆತೆ ಪಾಪವು ಅಲ್ಲ ಯಾವುದೇ ಶಾಪವು ಅಲ್ಲ ಎಲ್ಲವೂ ಪ್ರಾರಬ್ಧ ಕರ್ಮವೆಂದು ಭಾವಿಸಬೇಕಾಗಿದೆ ಎಂದು ಹರಿಹರ ತಾಲೂಕು ನಂದಿ ಗುಡಿ ಬ್ರಹನ್ಮಠದ 1108 ಜಗದ್ಗುರು ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯರು ನುಡಿದರು. ಅವರು ಬುಧವಾರ ಮಾರುತಿ ನಗರದ ಶ್ರೀ ರೇಣುಕಾ ಯಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆ,ಉಜ್ವಲ ಮಹಿಳಾ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ ಯೋಜನೆ ಮತ್ತು ಲಯನ್ ಸೇವಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ, ವಿಶ್ವ ಶ್ರವಣನ್ಯೂನ್ಯತೆಯುಳ್ಳ ಮಕ್ಕಳ ದಿನಾಚರಣೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಸಂಘ ಸಂಸ್ಥೆಗಳು ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ, ಸೇವೆ ಸಲ್ಲಿಸುತ್ತವೆ. ಅವರು ಮಾಡುವ ನಿಸ್ಪಲ ಸೇವೆಗೆ, ಸಮಾಜದ ಪ್ರತಿಯೊಬ್ಬರು ಮುಂದೆ ಬಂದು ಸಹಕಾರ ಮತ್ತು ಪ್ರೋತ್ಸಾಹ ನೀಡಬೇಕು ಎಂದರು.
ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ಬಹುತೇಕವಾಗಿ ಇಂದು ಪ್ರಾಮಾಣಿಕ ಸೇವೆಯ ಕೊರತೆ ಎದ್ದು ಕಾಣುತ್ತಲಿದೆ, ಅದರಿಂದ ಸಂಘಟನೆ ಸ್ಥಾಪಿಸಿದವರಿಗೆ ಯಾವುದೇ ರೀತಿಯ ಮಾನಸಿಕ ಶಾಂತಿ ನೆಮ್ಮದಿ ಹಾಗೂ ಆತ್ಮತೃಪ್ತಿ ದೊರೆಯಲಾರದು, ತಾವು ಕಂಡಂತೆ ಸೇವಾ ಅಂದರೆ ಸಂಸ್ಥೆ ನಿಜವಾದ ಸೇವೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡಿದೆ ಎಂದು ಸಂಸ್ಥೆಯ ಕಾರ್ಯವನ್ನು ಪ್ರಸಂಶಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಪ್ರಯೋಜನಾಧಿಕಾರಿ ಎಚ್. ಆರ್. ಶಿವಕುಮಾರ್ ಅವರು, ಸಂಸ್ಥೆಯ ಆರಂಭದಿಂದಲೂ ಬಹು ವಿಧದ ಉದ್ದೇಶವನ್ನು ಇಟ್ಟುಕೊಂಡು ಸಾಗಿದೆ, ಸೇವೆಯನ್ನು ಗುರುತಿಸಿರುವ ನಾಡಿನ ಜನತೆ, ಗಣ್ಯರು, ಮಠ ಪೀಠಗಳ, ಶ್ರೀಗಳು ಸದಾಕಾಲವು ತಮ್ಮ ಶುಭ ಹಾರೈಕೆಯನ್ನು ನೀಡಿದ್ದಾರೆ ಇದರಿಂದ ಎಲ್ಲ ಯೋಜನೆಗಳು, ಅತ್ಯಂತ ಪರಿಣಾಮಕಾರಿಯಾಗಿ, ಸಾರ್ವಜನಿಕ ಮೆಚ್ಚುಗೆಯೊಂದಿಗೆ ನಡೆಯುತ್ತಿರುವುದು, ಆಡಳಿತ ಮಂಡಳಿಗೆ ಅತ್ಯಂತ ಸಂತೋಷವಾಗಿದೆ ಎಂದು ಬೆಳವಣಿಗೆಗೆ ಕಾರಣರಾದ ಎಲ್ಲಾ ಸಹಕಾರಿಗಳಿಗೆ ತಮ್ಮ ಕೃತಜ್ಞತೆ ಸಲ್ಲಿಸಿದರು. ಸಂಸ್ಥೆಯ ಕಾರ್ಯದರ್ಶಿ ರೇಣುಕಾ ಶಿವಕುಮಾರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎಚ್, ಪಾಟೀಲ್, ನಗರಸಭಾ ಸದಸ್ಯ ಶೇಖಣ್ಣ ಹೊಸಗೌಡ್ರ, ಒಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಬುರಡಿಕಟ್ಟಿ, ಲಯನ್ಸ್ ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ, ಸೇರಿದಂತೆ ನಗರಸಭಾ ಸದಸ್ಯರು, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಮತ್ತಿತರೆ ಗಣ್ಯರು ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಾಗೂ ಶೈಕ್ಷಣಿಕ ಪ್ರಗತಿ ಸಾಧಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಲಾಯಿತು. ಕವಿತಾ ಸಂಗಡಿಗರು ಪ್ರಾರ್ಥಿಸಿದರು. ಶಿವರಾಜ ಗಂಗಣ್ಣನವರ್ ಸ್ವಾಗತಿಸಿ ನಿರೂಪಿಸಿದರು. ನಂತರ ನಡೆದ ಅಂದ ಹಾಗೂ ಅಂಗವಿಕಲ ಮೂಕ ಮಕ್ಕಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು.