ಇಂಡಿ

ವಿಶ್ವ ಆರೋಗ್ಯ ದಿನಾಚರಣೆಯ ಕಾರ್ಯಕ್ರಮ

ವಿಶ್ವ ಆರೋಗ್ಯ ದಿನಾಚರಣೆಯ ಕಾರ್ಯಕ್ರಮ

ಇಂಡಿ: ನಾವು ಹಣ ಮಾಡಲು ಹೋಗಿ ಆರೋಗ್ಯ ಕಳೆದುಕೊಳ್ಳುತ್ತೆವೆ. ಆರೋಗ್ಯ ಕಾಪಾಡಲು ಹಣ ಕಳೆದುಕೊಳ್ಳುತ್ತೆವೆ. ಇಂದಿನ ಯುವಕರು ಅರ್ಥಮಾಡಿಕೊಳ್ಳಿ. ರೋಗಗಳು ಹಿಂದಿನ ಕಾಲದಲ್ಲಿಯು  ಇದ್ದವು. ಈಗಲೂ ಇವೆ. ಆದರೆ ಕಾಲ ಕಳೆದಂತೆ ಆರೋಗ್ಯ ವ್ಯವಸ್ಥೆಯನ್ನು ಸಂರ​‍್ೂಣ ಬದಲಾವಣೆಯಾಗಿದೆ ಎಂದು ಇಂಡಿ ತಾಲ್ಲೂಕು ಸರಕಾರಿ ಆಸ್ಪತ್ರೆಯ ಡಾ. ರಮೇಶ ರಾಠೋಡ  ಹೇಳಿದರು. 

ಸೋಮವಾರ ಪಟ್ಟಣದ ಎಸ್‌.ಎಸ್‌. ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಹಮ್ಮಿಕೊಂಡ ವಿಶ್ವ ಆರೋಗ್ಯ ದಿನಾಚರಣೆಯ ಕಾರ‌್ಯಕ್ರಮದಲ್ಲಿ ಅವರು  ಮಾತನಾಡಿದರು. 

ಇಂದಿನ ಯುವ ಪೀಳಿಗೆ ಕೆಟ್ಟ ಹವ್ಯಾಸಗಳಿಗೆ ಬಲಿಯಾಗುತ್ತಿದ್ದಾರೆ.  ಆದ್ದರಿಂದ ಎಷ್ಟೋ ಕುಟುಂಬಗಳು ಬೀದಿಗೆ ಬರುತ್ತಿವೆ. ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಅಂತಹ ಹವ್ಯಾಸಗಳಿಂದ ದೂರ ಇರಬೇಕು ಎಂದ ಅವರು. ಕೋವಿಡ್‌-19 ಸಾಂಕ್ರಾಮಿಕ ಆರಂಭದ ಬಳಿಕ ಆರೋಗ್ಯದ ಈ ಮಾತಿಗೆ ಹೆಚ್ಚಿನ ಮಹತ್ವ ದೊರೆತಿದೆಯೇನೋ..! ನಿಜ. ಆರೋಗ್ಯದ ಬಗ್ಗೆ ಮಾತನಾಡುವಾಗಲೆಲ್ಲಾ ಅನೇಕರು ಹಿಂದಿನ ಕಾಲದ ಉದಾಹರಣೆಯನ್ನು ಹೇಳಿ ಹೋಲಿಕೆ ಮಾಡಿಕೊಳ್ಳುತ್ತಾರೆ. ನಮ್ಮ ಮುತ್ತಜ್ಜನಿಗೆ ಮಧುಮೇಹವೇ ಇರಲಿಲ್ಲ. ನಮ್ಮ ಹಿರಿಯರಿಗೆ ಹೃದಯರೋಗ ಎಂದರೆ ಗೊತ್ತೇ ಇಲ್ಲಾ ಹೀಗೆ ಆರೋಗ್ಯದ ಸ್ಥಿತಿಯನ್ನು ಹಿಂದಿನ ಕಾಲಕ್ಕೆ ಹೋಲಿಸಿಕೊಳ್ಳುವುದು ಸಹಜವಾಗಿದೆ.  

ವಿಶ್ವ ಆರೋಗ್ಯ ಸಂಸ್ಥೆ ತನ್ನ ಧ್ಯೇಯ ಘೋಷಣೆಯಲ್ಲಿ ಹೇಳಿರುವ ಆಶಯ ಸ್ವಚ್ಛ ಗಾಳಿ, ಸುರಕ್ಷಿತ ನೀರು, ಆರೋಗ್ಯಕರ ಆಹಾರ ಲಭ್ಯವಾಗುವಂತೆ ಮಾಡುವುದು. ವಾಸಿಸುವ ಪರಿಸರವುಳ್ಳ ಪಟ್ಟಣಗಳು, ವಾತಾವರಣದ ವೈಪರೀತ್ಯಗಳ ಬಗ್ಗೆ ಜಾಗೃತಿ ವಹಿಸಬೇಕು. ಎಲ್ಲರೂ ದೀರ್ಘಾಯುಷ್ಯವುಳ್ಳ ಸಂತೋಷ ಬದುಕಿಗಾಗಿ ಆರೋಗ್ಯದತ್ತ ಗಮನಹರಿಸಬೇಕು. ಎಲ್ಲರಿಗೂ ಗೊತ್ತು ಇರುವ ಹಾಗೆ ಕೊರೊನಾದಂತಹ ಸಾಂಕ್ರಾಮಿಕಗಳಿಂದ ಕಲಿತ ಪಾಠಗಳೂ ಕಂಡಿದ್ದೆವೆ. ನಿಮ್ಮ ಸುಂದರ ಬದುಕಿಗಾಗಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು ಎಂದರು.  

ಸಂಸ್ಥೆಯ ಅಧ್ಯಕ್ಷ ಎಸ್‌.ಬಿ. ಕೆಂಬೋಗಿ ಮಾತಾನಾಡಿ, ಜೀವನದಲ್ಲಿ ಎನಾದರೂ ಸಾಧಿಸಬೇಕು ಎಂದರೆ ಛಲ ಇರಬೇಕು. ಅದು ಸಾಧಿಸಲು ಸಾದ್ಯವಿದೆ. ದೇವರು  ಗಾಳಿ, ನೀರು, ಆಹಾರ ಹೀಗೆ ಎಲ್ಲವೂ ಕೋಟಿದ್ದಾನೆ. ಆದರೆ ನಾವು ಅದರ  ಸದುಉಪಯೋಗವಾಗಬೇಕು. ಇಲ್ಲವಾದರೆ ಪರಿಣಾಮಗಳು ಎದುರಿಸಬೇಕಾಗುತ್ತದೆ. ಆರೋಗ್ಯವೇ ಭಾಗ್ಯ. ಇದಕ್ಕಿಂತ ಮಿಗಿಲಾದುದು ಯಾವುದೂ ಇಲ್ಲಾ ಸದೃಢ ಆರೋಗ್ಯ ಕಾಪಾಡಿಕೊಳ್ಳ್ಳುವುದು ಒಂದು ಕಲೆ. ನಮ್ಮ ಜೀವನ ಶೈಲಿ, ಆಹಾರ ಪದ್ಧತಿ ಇತ್ಯಾದಿಗಳೆಲ್ಲವೂ ಆರೋಗ್ಯದ ಮೇಲೆ ನೇರ ಅಥವಾ ಪರೋಕ್ಷ ಪರಿಣಾಮ ಬೀರುತ್ತಲೇ ಇರುತ್ತವೆ. ಅನಾರೋಗ್ಯಕ್ಕೆ ತುತ್ತಾದಾಗ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ. ಕಾಯಿಲೆ ಬರುವ ಮೊದಲೇ ಅದರ ಬಗ್ಗೆ ಎಚ್ಚರ ವಹಿಸಬೇಕು. ರೋಗ ಬರದಂತೆ ಜಾಗೃತರಾಗುವುದು ಅತೀ ಮುಖ್ಯ ಎಂದರು. 

ಇಂಡಿ ಸಿದ್ಧಾರೂಡ ಮಠದ ಸ್ವರೂಪಾನಂದ ಶ್ರೀಗಳರ ಧಿವ್ಯಸಾನಿದ್ಯ ವಹಿಸಿದರು. ಪ್ರಾಚಾರ್ಯ ಸೌಮ್ಯ ರೂಗಿ, ಶಶೀಧರ ವಾಲಿ, ಮಹಾಂತೇಶ ಪಾಟೀಲ, ಪುಷ್ಪಾ ಪೊದ್ದಾರ ಉಪಸ್ಥಿತರಿದ್ದರು.  

ವಿದ್ಯಾರ್ಥಿನಿ ಪವೀತ್ರ ಬಿಜ್ಜರಗಿ ನಿರೂಪಿಸಿದರು. ಪೂಜಾ ನಿವರಗಿ ವಂದಿಸಿದರು. 


ಸುದ್ದಿ ಓದಿ