ಮೆಡ್ಲೇರಿ ವಲಯ ಐರಣಿ ಕ್ಷೇತ್ರದಲ್ಲಿ ವಿಶ್ವ ಪರಿಸರ ದಿನಾಚರಣೆ
ರಾಣೇಬೆನ್ನೂರು೦೭: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮೇಡ್ಲೆರಿ ವಲಯದ ಐರಣಿ ಕಾರ್ಯಕ್ಷೇತ್ರದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿ ಹಚ್ಚುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾ ರಾಮಕೃಷ್ಣ ಎಚ್. ಕೆ. ಅವರು ಮಾತನಾಡಿ, ಪರಿಸರ ಜಾಗೃತಿಯ ಬಗ್ಗೆ ಮನೆಗೊಂದು ಮರ ಊರಿಗೊಂದು ವನ ಇರುವ ಹಾಗೆ ಜಾಗೃತಿ ವಹಿಸಬೇಕು ಇದರಿಂದ ನಮ್ಮ ಸುತ್ತಲ ಪರಿಸರ ಆರೋಗ್ಯ ಮತ್ತು ಸಮೃದ್ಧಿಯಾಗಿ ಇರಲು ಸಹಕಾರಿಯಾಗಲಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಣೆಬೆನ್ನೂರು ತಾಲೂಕಿನ ಕೃಷಿ ಅಧಿಕಾರಿಯಾದ ದೇವರಾಜ್ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಪರಿಸರ ಹೇಗೆ ರಕ್ಷಣೆ ಮಾಡಬೇಕು ಎನ್ನುವುದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.ಮಕ್ಕಳು ಯಾವುದೋ ಕಾರ್ಯಕ್ರಮಗಳಿಗೆ ಹಣ ಖರ್ಚು ಮಾಡುವುದರ ಬದಲು ಆ ಸಂದರ್ಭದ ಸವಿ ನೆನಪಿಗಾಗಿ ಒಂದೊಂದು ಗಿಡಗಳನ್ನು ತಂದು ನೆಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಗಿಡ ಮರಗಳನ್ನು ಬೆಳೆಸಿರುವುದರಿಂದ ನಮ್ಮ ಸುತ್ತ ಮುತ್ತಲಿನ ಪರಿಸರ ಮತ್ತು ನಮ್ಮ ಆರೋಗ್ಯ ಚೆನ್ನಾಗಿರಲೂ ಸಾಧ್ಯವಿದೆ ಎಂದರು. ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷ ನಾಗಮ್ಮ ಚಳಗೇರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವ ಸಹಾಯ ಸಂಘದ ಸದಸ್ಯರು ಶಾಲೆಯ ಸಹ ಶಿಕ್ಷಕರು ಶಾಲಾ ಮಕ್ಕಳು ಮತ್ತು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು