ಸಂಸ್ಕೃತಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಶಿಗ್ಗಾವಿ 07: ಮಕ್ಕಳಲ್ಲಿ ಪರಿಸರದ ಮಹತ್ವ ಮತ್ತು ಅದನ್ನು ಉಳಿಸುವ ಜ್ಞಾನವನ್ನು ಮೂಡಿಸಿದಾಗ ಮಾತ್ರ ಭವಿಷ್ಯದಲ್ಲಿ ಅವರು ಪ್ರಜ್ಞಾವಂತ ಪರಿಸರ ಪ್ರೇಮಿಗಳಾಗಿ ರೂಪಗೊಂಡು ನಿಜ ಅರ್ಥದಲ್ಲಿ ವಿಶ್ವ ಪರಿಸರ ದಿನ ಆಚರಿಸುವಂತಾಗುತ್ತಾರೆ ಎಂದು ಎಂಪಿಎಂ ಶಿಕ್ಷಣ ಸಂಸ್ಥೆಯ ಸಂಸ್ಕೃತಿ ಪ್ರಾಥಮಿಕ ಶಾಲೆಯ ಮುಖೋಪಾಧ್ಯಾಯಿನಿ ಅನಿತಾ ಹಿರೇಮಠ ಹೇಳಿದರು.
ಪಟ್ಟಣದ ಸಂಸ್ಕೃತಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಆವರಣದಲ್ಲಿ ಸಸಿ ನೆಟ್ಟು ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆ ಕುರಿತಂತೆ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಿ ಮಾತನಾಡಿದ ಅವರು, ವಾಯು ಮಾಲಿನ್ಯ, ಪ್ಲಾಸ್ಟಿಕ್ ಮಾಲಿನ್ಯ, ಜಲ ಮಾಲಿನ್ಯ, ಇಂಧನ ಸಂವರಕ್ಷಣೆ, ದ್ವೀಚಕ್ರ ಸವಾರ ಪಾಲಕರಿಗೆ ಕಡ್ಡಾಯ ಹೆಲ್ಮೆಟ್ ಬಳಕೆ ಸೇರಿದಂತೆ ಹಲವಾರು ವಿಚಾರಗಳ ಮೇಲೆ ಬೆಳಕು ಚೆಲ್ಲುವ ಸಾಮಾಜಿಕ ಬದ್ದತೆಯ ನಿರ್ದಿಷ್ಟ ಕಾರ್ಯಕ್ರಮಗಳನ್ನು ಶಾಲೆಗಳು ಮಾಡುವ ಮೂಲಕ ಮಕ್ಕಳನ್ನು ಸಮಾಜಿಕ ಜವಾದ್ಬಾರಿ ಉಳ್ಳವರನ್ನಾಗಿ ಬೆಳಸಬಹುದಾಗಿದೆ ಎಂದರು.
ಈ ಸಂದರ್ಭದಲಿ ಶಿಕ್ಷಕಿಯರಾದ ಸವಿತಾ ಗೌರಿಮಠ, ರಾಜೇಶ್ವರಿ ಪಾಟೀಲ, ಗಾಯಿತ್ರಿ ಎಂ.ವಿ, ಶ್ವೇತಾ ದುಬೆ, ಸವಿತಾ ಮಡಿವಾಳರ, ಸವಿತಾ ಹೊನ್ನಣ್ಣನವರ, ಸ್ವಪ್ನಾ ಪಟೇದ, ನಿಖಿತಾ ಕಂಕನವಾಡ, ಸರೋಜಾ ಪಾಟೀಲ, ಲತಾ ಸವಣೂರ, ದೀಪಾ ಜವಳಗಟ್ಟಿ, ಗದಿಗೆಪ್ಪಾ ಅಣ್ಣಿಗೇರಿ, ವಿದ್ಯಾರ್ಥಿಗಳು ಇದ್ದರು.
ಪರಿಸರ ದಿನಾಚರಣೆ ಅಂಗವಾಗಿ ಚಿತ್ರಕಲಾ ಸ್ಪರ್ದೆಯಲ್ಲಿ ಭಾಗವಹಿಸಿದ ಸಂಸ್ಕೃತಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು. ಪಾಲ್ಗೊಂಡಿದರು.