ರಾಣೆಬೆನ್ನೂರ

ವಿಶ್ವ ಏಡ್ಸ್‌ ದಿನಾಚರಣೆ: ಕೋಲಾಜ್ ಚಿತ್ರಿಸಿದ ಚಿತ್ರ ಬಿಡುಗೆ

ವಿಶ್ವ ಏಡ್ಸ್‌ ದಿನಾಚರಣೆ: ಕೋಲಾಜ್ ಚಿತ್ರಿಸಿದ ಚಿತ್ರ ಬಿಡುಗೆ

ರಾಣಿಬೆನ್ನೂರು 02:  ತಾಲೂಕಿನ ಮಾಕನೂರ ಮ್ರಾಮದಲ್ಲಿ ಗುರುವಾರ ವಿಶ್ವ ಏಡ್ಸ್‌ ದಿನಾಚರಣೆ ಅಂಗವಾಗಿ ಜನ ಜಾಗೃತಿಗಾಗಿ  ನಿವೃತ್ತ ಚಿತ್ರಕಲಾ ಶಿಕ್ಷಕ ಡಾ. ಜಿ.ಜೆ. ಮೆಹೆಂದಳೆ ಚಿತ್ರಿಸಿದ ಕೋಲಾಜ್ ಚಿತ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ. ಸಹನಾ ಎಸ್‌.ಎಚ್ ಬಿಡುಗೆ ಮಾಡಿದರು.  

ಡಾ. ಸಹನಾ ಎಸ್‌.ಎಚ್ ಮಾತನಾಡಿ, ಅಸುರಕ್ಷಿತ ಹಾಗೂ ಸಾರ್ವಜನಿಕರ ನಿರ್ಲಕ್ಷವೇ ಮಹಾ ಮಾರಿಗೆ ಹರಡಲು ಕಾರಣವಾಗಿದೆ.  ಸಾರ್ವಜನಿಕರು ಮಹಾ ಮಾರಿ ರೋಗಗಳ ಬಗೆಗೆ ನಿರ್ಲಕ್ಷ ತೋರದೆ ಕಾಲ ಕಾಲಕ್ಕೆ ಸರಿಯಾಗಿ ಜಾಗೃತರಾಗಿದ್ದರೆ ರೋಗಗಳು ಹಬ್ಬುವಿಕೆಯನ್ನು ತಡೆಗಟ್ಟ ಬಹುದು ಎಂದರು. 

ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಜೋತೆ ಜೋತೆಗೆ ಡಾಽ ಮೆಹೆಂದಳೆಯವರೂ ಕೂಡ ಆಗಾಗ ಪಟಾಕಿಗಳಿಂದಾಗುವ ಅನಾಹುತ, ಧೂಮ್ರಪಾನದಿಂದಾಗುವ ದುಷ್ಪರಿಣಾಮ ಮತ್ತು ಅನಾರೋಗ್ಯ, ಮಣ್ಣಿನ ಗಣೇಶನನ್ನೇ ಪೂಜಿಸಿ ಪರಿಸರ ರಕ್ಷಿಸಿ, ಪರಿಸರ ದಿನಾಚರಣೆ ಹಾಗೂ ವಾಯು ಮಾಲಿನ್ಯದ ಬಗೆಗೆ ಜಾಗೃತಿ ಹೀಗೆ ಹತ್ತು ಹಲವಾರು ಸಾಮಾಜಿಕ ಕಳಕಳಿಯ ಚಿತ್ರಗಳನ್ನು ರಚಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. 

ಡಾ. ಜಿ.ಜೆ.ಮೆಹೆಂದಳೆ ಮಾತನಾಡಿ, ಆರೋಗ್ಯವಂತ ಮಾನವರಿಗೆ ಅರಿವಿಲ್ಲದೇ ತಗುಲಿ ಆಹುತಿ ತೆಗೆದುಕೊಳ್ಳುವ ಏಡ್ಸ್‌ ಮಹಾಮಾರಿಯ ನಿಯಂತ್ರಣಕ್ಕೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಕೊಲಾಜ ಚಿತ್ರ ಬಿಡುಗಡೆ ಮಾಡಲಾಗಿದೆ. ಈ ಮಹಾಮಾರಿಯು ಅನೈತಿಕ ಸಂಭಂಧ, ಆಸ್ಪತ್ರೆಗಳಲ್ಲಿ ಸಂಸ್ಕರಿಸದೇ ಉಪಯೋಗಿಸುವ ಸೂಜಿ,  ಸೊಂಕಿನಿಂದ ಕೂಡಿದ ರಕ್ತ ಒಬ್ಬರಿಂದ ಒಬ್ಬರಿಗೆ ನೀಡುವದರಿಂದ ಕೂಡ ಈ ರೋಗ ಹರಡುತ್ತದೆ. ವಿದೇಶದಿಂದ ಬಂದ ಈ ಕಾಯಿಲೆ ಅಜ್ಞಾನದಿಂದ ನಮ್ಮಲ್ಲಿಯೂ ಸಹ ಹರಡಿದೆ ಎಂದು ತಿಳಿಸಿದರು. ಸಮುದಾಯ ಆರೋಗ್ಯಾಧಿಕಾರಿಗಳು, ಆರೋಗ್ಯ ನೀರೀಕ್ಷಣಾಧಿಕಾರಿಗಳು, ಪ್ರಾಥಮಿಕ ಸುರಕ್ಷಣಾಧಿಕಾರಿಗಳು, ಪ್ರಯೋಗಾಲಯದ ತಾಂತ್ರಿಕ ಅಧಿಕಾರಿಗಳು, ಪ್ರಾಥಮಿಕ ಸಹಾಯಕರು ಹಾಗೂ ಸಿಬ್ಬಂಧಿವರ್ಗ ಇದ್ದರು. 


ಸುದ್ದಿ ಓದಿ