ಮೂಲಭೂತ ಅಗತ್ಯತೆಯ ಜೊತೆಗೆ ಮಹಿಳೆಯರ ಆರೈಕೆ ಕುರಿತು ಕಾರ್ಯಗಾರ
ಧಾರವಾಡ 26 :ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಶಿಯೇಶನ್ ಆಫ್ ಇಂಡಿಯಾ ಧಾರವಾಡ ಶಾಖೆಯು ಇಂಟರ್ ಎಜೆನ್ಸಿ ವರ್ಕಿಂಗ್ ಗ್ರೂಪ್ ಮತ್ತು ಸ್ವಯಂಸೇವಾ ಸಂಸ್ಥೆಗಳಿಗೆ ವಿಪತ್ತಿನ ಸಂದರ್ಭದಲ್ಲಿ ಲೈಂಗಿಕ ಮತ್ತು ಸಂತಾನೋತ್ಪತ್ತಿಗೆ ಸಂಬಂಧಿಸಿದ ಕನಿಷ್ಟ ಆರಂಭಿಕ ಸೇವಾ ಪ್ಯಾಕೇಜದ ಮಹತ್ವದ ಕುರಿತು ಒಂದು ದಿನದ ಕಾರ್ಯಗಾರವನ್ನು ಏರಿ್ಡಸಲಾಗಿತ್ತು.
ಧಾರವಾಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎನ್.ವ್ಹಿ.ಬರಮನಿ ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿಪತ್ತಿನ ಸಮಯದಲ್ಲಿ ಮೂಲಭೂತ ಅಗತ್ಯತೆಯ ಜೊತೆಗೆ ಮಹಿಳೆಯರ ಮತ್ತು ಹೆಣ್ಣುಮಕ್ಕಳ ಸಂತಾನೋತ್ಪತ್ತಿ ಆರೋಗ್ಯದ ಕನಿಷ್ಟ ಆರಂಭಿಕ ಸೇವಾ ಅಗತ್ಯತೆಯ ಕುರಿತು ಏರಿ್ಡಸಿದ ಈ ಕಾರ್ಯಗಾರ ತುಂಬಾ ಮಹತ್ವದ್ದು, ಈ ಸಂಸ್ಥೆ 1972 ಎಫ್.ಪಿ.ಎ.ಐ ಕುಟುಂಬ ಯೋಜನೆ, ಪ್ರಸವಪೂರ್ವ ಆರೈಕೆ, ಪ್ರಸವನಂತರ ಆರೈಕೆ, ಎಚ್.ಐ.ವ್ಹಿ /ಏಡ್ಸ, ಲೈಂಗಿಕ ರೋಗಗಳು, ಮಕ್ಕಳ ಆರೈಕೆ, ಕೌಶಲ್ಯ ಅಭಿವೃದ್ಧಿ ಮತ್ತು ಆಪ್ತಸಮಾಲೋಚನೆಯ ಸೇವೆಯನ್ನು ನೀಡುತ್ತಿದೆ.
ಇಂದು ಮುಂದುವರೆದು ಮಾನವಿಯ ನೆಲೆಗಟ್ಟಿನಲ್ಲಿ ಅಗತ್ಯವಿರುವ ಜನರಿಗೆ ಜೀವ ರಕ್ಷಿಸಲು ಸರ್ಕಾರ ಮತ್ತು ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳು ಹಾಗೂ ಯುವಜನರೊಂದಿಗೆ ಕೆಲಸ ಮಾಡುತ್ತಿರುವದು ಮತ್ತು ಪಾಲುದಾರ ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲಾ ಮತ್ತು ತಾಲ್ಲೂಕ ಸಮಿತಿಗಳೊಂದಿಗೆ ಚರ್ಚಿ, ಒಗ್ಗೂಡಿಸಿ ಎಸ್.ಆರ್.ಎಚ್. ಕನಿಷ್ಟ ಆರಂಭಿಕ ಸೇವೆ ಪ್ಯಾಕೇಜ ಒದಗಿಸಲು ಸನ್ನದ್ಧಗೋಳಿಸುತ್ತಿರುವದು ಸಂತಸದ ಸಂಗತಿಯಾಗಿದೆ, ಈ ದೀಶೆಯಲ್ಲಿ ನಮ್ಮ ಪೋಲಿಸ್ ಇಲಾಖೆವು ಎಲ್ಲ ರೀತಿಯ ಸಹಕಾರದೊಂದಿಗೆ ಕೆಲಸ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದರು.
ಅಥಿತಿಗಳಾಗಿ ಶರಣಪ್ಪ ಬರಸಿ, ಸಿ.ಇ.ಓ ಸದನಾ ಬೆಂಗಳೂರ, ಇವರು ಮಾತನಾಡಿ ಇಂಟರ್ ಎಜೆನ್ಸಿ ವರ್ಕಿಂಗ್ ಗ್ರೂಪ್ ಹಲವಾರು ವರ್ಷಗಳಿಂದ ವಿಪತ್ತುಗಳಲ್ಲಿ ಕೆಲಸಗಳನ್ನು ಮಾಡುತ್ತಿದ್ದೇವೆ. ಈ ಕಾರ್ಯಾಗಾರದಲ್ಲಿ ಎಸ್.ಆರ್.ಎಚ್. ಕನಿಷ್ಟ ಆರಂಭಿಕ ಸೇವೆ ಪ್ಯಾಕೇಜ ಕುರಿತಾಗಿರುವದು ತುಂಬಾ ವಿಶೇಷವಾಗಿದೆ. ರಾಜ್ಯದ ಯಾವುದೇ ಭಾಗದ ವಿಪತ್ತಿನ ಸಂದರ್ಭದಲ್ಲಿ ಎಲ್ಲರೂ ಸೇರಿ ಸಂತಾನೋತ್ಪತ್ತಿ ಆರೋಗ್ಯದ ಕನಿಷ್ಟ ಆರಂಭಿಕ ಸೇವೆ ನೀಡಲು ಈ ಕಾರ್ಯಾಗಾರ ಸಹಾಯವಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಅಥಿತಿಗಳಾದ ಡಾ. ಮೋಹನಕುಮಾರ ತಂಬದ ಮಾತನಾಡಿ ವಯನಾಡಿನ ಜನರ ಸಂಕಷ್ಟವನ್ನು ವಿವರಿಸಿದರು ಮತ್ತು ಇಂತಹ ಕಾರ್ಯಾಗಾರಗಳು ನಮ್ಮನ್ನು ನಾವು ಸನ್ನದ್ಧಗೋಳಿಸಲು ಸಹಕಾರಿಯಾಗುತ್ತವೆ ಎಂಬ ಇಂಗಿತ ವ್ಯಕ್ತಪಡಿಸಿದರು.ಸುಜಾತಾ ಎಸ್.ಆನಿಶೆಟ್ಟರ ಶಾಖಾ ವ್ಯವಸ್ಥಾಪಕರು ಪ್ರಾಸ್ತಾವಿಕವಾಗಿ ಕಾರ್ಯಾಗಾರ ಉದ್ದೇಶವನ್ನು ತಿಳಿಸಿದರು.
ಈ ಕಾರ್ಯಾಗಾರದಲ್ಲಿ ವೀಜನ್ ಇಂಡಿಯಾ, ಆರುನ್ಯಾ ಸೇವಾ ಟ್ರಸ್ಟ, ಗಂಗಾದೇವಿ, ಸಾಧನಾ, ಪಿ.ಆರ್.ಡಿ.ಎಲ್, ಮಹಿಳಾ ಸಮಖ್ಯಾ, ಶಾರದಾಂಭೆ, ಕರ್ನಾಟಕ ಪ್ರಜ್ವಲ್ ಸೇವಾ ಸಂಸ್ಥೆ, ಡಾ. ನೆಲಸನ್ ಮಂಡೆಲಾ ಗ್ರಾಮೀಣ ಸಂಸ್ಥೆ, ಸ್ವಾಮಿ ವಿವೇಕಾನಂದ ಯುತ್ ಮೋಮೇಂಟ್, ಬಿ.ಡಿ.ಎಸ್.ಎಸ್, ಬೆಳಕು ಮಹಿಳಾ ಸಂಘ, ಕೆ.ಎಸ್.ಎಸ್. ಪರಿಪೂರ್ಣ ಸಂಸ್ಥೆ, ಆರೋಗ್ಯ ಭಾರತಿ, ಆರೂಡ ಸಂಸ್ಥೆ, ಸಹನಾ, ಇಬ್ಬನಿ, ವಿನಶಿ ಪೌಂಡೇಶನ್, ಸುಭದ್ರ ಪೌಂಡೇಶನ್, ಮಹಾಲಕ್ಷೀ ಸಂಸ್ಥೆ, ಬಾಲ ರಕ್ಷಾ ಭಾರತಿ, ಯಶೋಧಾ ವೆಲ್ ಪೇರ್ ಟ್ರಸ್ಟ, ಶ್ರೀ ಬ್ರಹ್ಮಲಿಂಗೇಶ್ವರ ಸಂಸ್ಥೆ, ಸುರಕ್ಷಾ ಅಸೊಸಿಯೇಶನ್, ಎಸ್.ಎಸ್.ಸಿ.ಆರ್.ಡಿ.ಎಸ್ ಸೇರಿದಂತೆ ಕರ್ನಾಟಕದ 13 ಜಿಲ್ಲೆಗಳಿಂದ 26 ಕ್ಕೂ ಹೆಚ್ಚು ಸ್ವಯಂಸೇವಾ ಸಂಸ್ಥೆಳಿಂದ 50 ಕ್ಕೂ ಪ್ರತಿನಿಧಿಗಳು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.ಶಿಲ್ಪಾ ಅದರಗುಂಚಿ ಸ್ವಾಗತಿಸಿದರು, ಆಶಾ ಕೋರಿಶೆಟ್ಟರ ವಂದಿಸಿದರು, ಎನ್.ಎಫ್.ಮಡಿವಾಳರ ನಿರೂಪಿಸಿದರು.