ರಾಣೆಬೆನ್ನೂರ

ಮಾಡುವ ಕೆಲಸ ಪ್ರೀತಿಸುವವನಿಗೆ ಕೆಲಸ ಎಂದೂ ಹೊರೆಯಾಗುವುದಿಲ್ಲ: ಗೊಲ್ಲರ

ಮಾಡುವ ಕೆಲಸ ಪ್ರೀತಿಸುವವನಿಗೆ ಕೆಲಸ ಎಂದೂ ಹೊರೆಯಾಗುವುದಿಲ್ಲ: ಗೊಲ್ಲರ

ರಾಣೇಬೆನ್ನೂರು 04:  ಕಾಡಿನಲ್ಲಿ ಹೂವಿನ ಸೌಂದರ್ಯದ ಬಗ್ಗೆ ಪ್ರಶಂಸೆ ವ್ಯಕ್ತಿಪಡಿಸಲು ಇಲ್ಲದಿದ್ದರೂ ಹೂವುಗಳು ಅರಳಿಸುವುದನ್ನು ನಿಲ್ಲಿಸುವುದಿಲ್ಲ. ಹಾಗೆ ನಮ್ಮ ಕೆಲಸದ ಬಗ್ಗೆ ಯಾರೊಬ್ಬರೂ ಪ್ರಶಂಸೆ ವ್ಯಕ್ತಪಡಿಸದಿದ್ದರೂ ಅದನ್ನು ನಾವು ನಿಷ್ಠೆಯಿಂದ ಮುಂದುವರೆಸಬೇಕು. ಮಾಡುವ ಕೆಲಸವನ್ನು ಪ್ರೀತಿಸುವವನಿಗೆ ಕೆಲಸ ಎಂದೂ ಹೊರೆಯಾಗದೇ ಆನಂದವನ್ನೇ ತರುವ ಹೊಳೆಯಾಗುತ್ತದೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು. ಅವರು ಹಾವೇರಿ ಜಿಲ್ಲಾ ಕೇಂದ್ರದ ಕೆರಿಮತ್ತಿಹಳ್ಳಿಯಲ್ಲಿರುವ ವಿವಿಧೋದ್ದೇಶಗಳ ಸಹಕಾರಿ ಸಂಘದ ಕರ್ನಾಟಕ ಎಣ್ಣೆ ಬೀಜ ಮಂಡಳಿ ಕೇಂದ್ರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಶಾಖಾ ವ್ಯವಸ್ಥಾಪಕರ ಹಾಗೂ ಕ್ಷೇತ್ರ ಅಧಿಕಾರಿಗಳ ತರಬೇತಿ ಶಿಬಿರದ ಸಮಾರೋಪದಲ್ಲಿ  ಮಾತನಾಡಿದರು.ಮನುಷ್ಯ ಜೀವನದಲ್ಲಿ ಸುಖ ಸಂತೋಷಗಳೆಲ್ಲವೂ ಅವನು ಮಾಡುವ ಕೆಲಸದಲ್ಲಿದೆ. 

ನೀವು ಕರ್ತವ್ಯಕ್ಕೆ ಸಲಾಂ ಹೊಡೆದರೆ ಜೀವನದಲ್ಲಿ ಬೇರೆ ಯಾರಿಗೂ ಸಲಾಮ್ ಹೊಡೆಯಬೇಕಾದ ಅಗತ್ಯವಿಲ್ಲ. ಕರ್ತವ್ಯಕ್ಕೆ ಭ್ರಷ್ಟರಾದರೆ ಪ್ರತಿಯೊಬ್ಬರಿಗೂ ಸಲಾಮ್ ಹೊಡೆಯಬೇಕಾಗುತ್ತದೆ ಎಂದು ಅಬ್ದುಲ್ ಕಲಾಂರವರ ನುಡಿಯನ್ನು ಉಲ್ಲೇಖಿಸಿದರು.ಜೇನ್ನೋಣದಂತೆ ಸತತೋದ್ಯೋಗವೇ ನಮಗೆ ನಮ್ಮ ಮನರಂಜನೆ ಎನಿಸಬೇಕು. ವೃತ್ತಿಗೌರವ, ಗ್ರಾಹಕರೊಡನೆ ಸೌಜನ್ಯದ ವರ್ತನೆ, ಪ್ರಾಮಾಣಿಕತೆ, ಮುಗುಳ್ನಗೆ ಪ್ರಗತಿಗೆ ಸೋಪಾನ ಎಂದೂ ಹನುಮಂತಗೌಡ ಉದಾಹರಣೆ ಮೂಲಕ ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ಸನ್ಮಾಸಿ ಗೌರವಿಸಲಾಯಿತು. ತಮಗೆ ನೀಡಿದ ಗೌರವಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಭಾರತ ವಿಜ್ಞಾನ ಸಮಿತಿಯ ರಾಜ್ಯ ಸಂಚಾಲಕಿ ರೇಣುಕಾ ಗುಡಿಮನಿ ಮಾತನಾಡಿ ಮಿತವ್ಯಯ ಒಂದು ವರಮಾನ. ಉಳಿತಾಯ ಮನೋಭಾವನೆ ಬದುಕನ್ನು ಸುಭದ್ರಗೊಳಿಸುತ್ತದೆ ಎಂದರು. ಸಂಸ್ಥೆಯ ಅಧ್ಯಕ್ಷ ಕೆ. ಮಂಜುನಾಥ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿಬ್ಬಂದಿಯವರ ಕಾರ್ಯಕ್ಷಮತೆ ಸಾಧನೆಯನ್ನು ಗುರುತಿಸಿ ಕಾಲಕಾಲಕ್ಕೆ ಗೌರವಿಸುತ್ತೇವೆ, ಉತ್ತೇಜಿಸುತ್ತೇವೆ ಎಂದು ಹೇಳಿದರು. ತರಬೇತಿಯಲ್ಲಿ 37 ಅಧಿಕಾರಿಗಳು ಪಾಲ್ಗೊಂಡಿದ್ದರು. ಸಾಹಿತಿ ಪೃಥ್ವಿರಾಜ ಬೆಟಗೇರಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಕೃಷ್ಣ ಮಾಸನಕಟ್ಟಿ ಸ್ವಾಗತಿಸಿದರು. ಇನ್ನೋರ್ವ ಅಧಿಕಾರಿ ಮಧುಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಮಾನವ ಸಂಪನ್ಮೂಲ ಅಧಿಕಾರಿ ಸುನೀಲಕುಮಾರ ಎ. ಎಸ್. ವಂದಿಸಿದರು 

ಸುದ್ದಿ ಓದಿ