ಆರ್ಥಿಕ ಸ್ವಾವಲಂಭನೆಗಾಗಿ ಮಹಿಳೆಯರು ಸ್ವಂತ ಉದ್ಯೋಗಗಳನ್ನು ಸ್ಥಾಪಿಸಿ
ರಾಣಿಬೆನ್ನೂರ 30: ಅಡಿಗೆ ಮನೆಯಲ್ಲಿ ಒಲೆ ಸರಿಯಾಗಿ ಉರಿದರೆ ಇಡೀ ಕುಟುಂಬ ಸುಖವಾಗಿರಲು ಸಾಧ್ಯ ಎಂಬ ಸಂಕಲ್ಪದಿಂದ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೇಸ್ ಸರ್ಕಾರದಲ್ಲಿ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಸಚಿವೆಯಾಗಿದ್ದ ಮೋಟಮ್ಮನವರು ಸ್ತ್ರೀಶಕ್ತಿ ಸಂಘಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಿದ್ದರ ಫಲವಾಗಿ ಇಂದು ಅವರು ಸಫಲರಾಗಿದ್ದಾರೆ ಎಂದು ವಿಧಾಸಭೆಯ ಉಪಾಧ್ಯಕ್ಷ ರುದ್ರ್ಪ ಲಮಾಣಿ ಹೇಳಿದರು.
ಇಲ್ಲಿನ ಎಪಿಎಂಸಿ ಸಮುದಾಯ ಭವನದಲ್ಲಿ ಶನಿವಾರ ಏರಿ್ಡಸಿದ್ದ ಕೃಷಿ ನಂತರದ ಹೆಚ್ಚು ಉದ್ಯೋಗ ಸೃಷ್ಠಿಸಿದ ಆಹಾರೋತ್ಪನ್ನಗಳ ತಯಾರಿಕೆ ಮತ್ತು ಕೆಎಫ್ಎಫ್ ಬ್ರ್ಯಾಂಡ್ 1 ರಿಂದ ಮಾರಾಟ ವ್ಯವಸ್ಥೆಗಳಿರುವ ರಾಜ್ಯದ ಮಧ್ಯ ಜಿಲ್ಲೆ ಹಾವೇರಿಯಿಂದ ಪ್ರಾರಂಭಿಸುವ ಈ ಬೃಹತ್ ಯೋಜನೆಗಾಗಿ ಆಹಾರ ಸಂಸ್ಕರಣಾಧಾರರ ಮಹಿಳಾ ಸಹಕಾರ ಸಂಘ ನಿಯಮಿತ ಒಟ್ಟು 22 ಎಫ್ಡ್ಲ್ಯೂಸಿ ಗಳ ನೋಂದಣಿ ಪ್ರಮಾಣಗಳ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸ್ತ್ರೀ ಶಕ್ತಿಯ ಮೂಲಕ ಮಹಿಳೆಯರ ಸಭಲೀಕರಣಕ್ಕೆ ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಆಹಾರೋತ್ಪನ್ನಗಳ ತಯಾರಿಕೆ ಮತ್ತು ಮಾರಾಟ ವ್ಯವಸ್ಥೆಯನ್ನು ಆಹಾರ ಸಂಸ್ಕರಣಧಾರರ ಮಹಿಳಾ ಸಹಕಾರ ಸಂಘವನ್ನು ತಯಾರಿಸಿ ತನ್ಮೂಲಕ ಮಹಿಳೆಯರ ಸಭಲೀಕರಣ ಮಾಡಲು ಸಾಧ್ಯವೆಂಬ ಸಂಕಲ್ಪ ಅವರದಾಗಿತ್ತು. ಅವರ ಕನಸು ಇಂದು ನನಸಾಗಲಿದೆ ಎಂದರು
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಆರ್ಥಿಕ ಸ್ವಾವಲಂಭನೆಯಾಗಬೇಕಾದರೆ ಮಹಿಳೆಯರು ಸ್ವಂತ ಉದ್ಯೋಗಗಳನ್ನು ಸ್ಥಾಪಿಸಿ ಅದರ ಮೂಲಕ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಆದರೆ ಪುರುಷರು ಮಹಿಳೆಯರಿಗೆ ಸಹಕಾರ ನೀಡಬೇಕು. ಆದಿ ಕಾಲದಿಂದ ಇಂದಿನ ವರೆಗೂ ಮಹಿಳೆಯರ ಆರ್ಥಿಕ ಸ್ವಾವಲಂಭನೆಗೆ ತವರು ಮನೆಯಿಂದ ಹಸುಗಳನ್ನು ಕೊಟ್ಟು ಅವಳ ಬದುಕು ಹಸನವಾಗಲೆಂದು ಹರಸುತ್ತಿರುವುದು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.
ಈ ದಿಸೆಯಲ್ಲಿ ಇಂದು ಸರ್ಕಾರ ಮತ್ತು ಸಹಕಾರ ಸಂಘಗಳ ಮೂಲಕ ಹೆಚ್ಚು ಉದ್ಯೋಗ ಸೃಷ್ಟಿಸುವ ಸಂಕಲ್ಪದಿಂದ ಸಂಸ್ಕರಿಸಿದ ಆಹಾರೋತ್ಪನ್ನಗಳ ತಯಾರಿಕೆ ಮತ್ತು ಕೆಎಂಎಫ್ ಬ್ರ್ಯಾಂಡ್ ಮೂಲಕ ಹಪ್ಪಳ, ಸಂಡಿಗೆ, ರೊಟ್ಟಿ ವಿವಿಧ ಆಹಾರೋತ್ಪನ್ನಗಳ ತಯಾರಿಕೆಯ ಆಹಾರ ಸಂಸ್ಕರಣಾಧಾರರ ಮಹಿಳಾ ಸಂಘ ನೋಂದಣಿಯಾಗಿರುವುದು ಸಂತಸ ತಂದಿದೆ ಎಂದು ಮೋಟಮ್ಮ ಹೇಳಿದರು.
ಮಹಿಳೆಯರು ಎಷ್ಟೇ ಆರ್ಥೀಕ ಸಭಲತೆ ಹೊಂದಿದರೂ ಕೂಡ ಇಂದು ಮಹಿಳಾ ದೌರ್ಜನ್ಯಗಳು ಹೆಚ್ಚಾಗುತ್ತಲಿವೆ. ಇಂತಹ ಘಟನೆಗಳು ನಡೆದಾಗ ಮಹಿಳೆಯರು ಒಗ್ಗಟ್ಟಿನಿಂದ ಖಂಡಿಸುವುದು ಹಾಗೂ ಹೋರಾಟದ ಮೂಲಕ ನೊಂದ ಮಹಿಳೆಯರಿಗೆ ಸಾಂತ್ವನದ ಜೊತೆಗೆ ನ್ಯಾಯ ಕೊಡಿಸಲು ಮುಂದಾಗಬೇಕು ಎಂದು ಮಹಿಳೆಯರಿಗೆ ಕಿವಿ ಮಾತು ಹೇಳಿದರು.
ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ನಮ್ಮ ದೇಶವು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ಅಭಿವೃದ್ಧಿ ಹೊಂದಬೇಕಾದರೆ ಮಹಿಳೆಯರು ವಿವಿಧ ಕೌಶಲ್ಯಗಳ ಮೂಲಕ ಆಹಾರೋತ್ಪನ್ನಗಳನ್ನ ಮಾರಾಟ ಮಾಡಿದಾಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಜಿಲ್ಲಾ ಆಹಾರ ಸಂಸ್ಕರಣಧಾರರ ಒಕ್ಕೂಟದ ನಿಯೋಜಿತ ಮುಖ್ಯಪ್ರವರ್ತಕಿ ರುಕ್ಮೀಣಿ ಸಾವುಕಾರ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಸಹಕಾರ್ಯದರ್ಶಿ ಪರಮೇಶ ನಾಯಕ, ಕೆಎಂಎಫ್ ನಿರ್ದೇಶಕ ಹೆಚ್.ಸಿ.ಹಿರೇಗೌಡ್ರ, ಸಹಾಯಕ ನಿಬಂಧಕ ವಿಕ್ರಂ ಕುಲಕರ್ಣಿ, ಪೂರ್ಣಿಮಾ ಕೋಳಿವಾಡ, ಕೆಎಫ್ಎಫ್ ಸಲಹೆಗಾರ ಬಸವರಾಜ ತಿಪ್ಪಾಯಿಕೊಪ್ಪ, ಸಂತೋಷ ಮಾಡಳ್ಳಿ, ವರ್ತಕ ಪ್ರಕಾಶ ಹಾಗೂ ಎಫ್ಡ್ಯೂ-್ಲಸಿ ಸಹಕಾರಿ ಸಂಘದ 22 ಮಹಿಳೆಯರು ಉಪಸ್ಥಿತರಿದ್ದರು.