ಕಾಗವಾಡ

ಮಹಿಳೆಯರು ಏನನ್ನೂ ಸಾಧಿಸಬಲ್ಲ ಛಲವಿದೆ: ಅಥಣಿ

ಮಹಿಳೆಯರು ಏನನ್ನೂ ಸಾಧಿಸಬಲ್ಲ ಛಲವಿದೆ: ಅಥಣಿ

ಲೋಕದರ್ಶನ ವರದಿ 


ಕಾಗವಾಡ 25: ಕುಟುಂಬದ ನಿರ್ವಹಣೆ ಮಾಡುವ ಮಹಿಳೆಗೆ ದೇಶ ಕಾಯುವ ಶಕ್ತಿಯೂ ಇದೆ. ಮಹಿಳೆಯರು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲ ಛಲವೂ ಅವರಲ್ಲಿ ಅಡಗಿದೆ ಎಂದು ಸಾಹಿತಿ ಡಾ.ಅರ್ಚನಾ ಅಥಣಿ ಅಭಿಪ್ರಾಯಪಟ್ಟರು. 

 ಅವರು ಇಂದು ಹೇಮ-ವೇಮ ಸೇವಾ ಪ್ರತಿಷ್ಠಾನದ ಹೇಮರಡ್ಡಿ ಮಲ್ಲಮ್ಮ ಮಹಿಳಾ ಸಂಘ ಅಥಣಿ ಇವರು ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು  ಮಹಿಳೆ ಇಂದು ಅಡುಗೆ ಮನೆಗೆ ಸೀಮಿತವಾಗಿ ಉಳಿದಿಲ್ಲ. 

 ಮನೆ ಒಳಗೂ ಮನೆ ಹೊರಗೂ ದುಡಿದು ಪುರುಷರಿಗೆ ಸರಿ ಸಮಾನವಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ಅಂತೆಯೇ ವಿಶ್ವದ ಮಹಾನ್ ಸಾಧಕರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಹೆಣ್ಣು ಎಂದರೆ ಕೀಳಿರಿಮೆ ಬೇಡ. ಪೂಜ್ಯನೀಯ ಭಾವನೆಯಿಂದ ಕಾಣುವ ಮೂಲಕ ಪ್ರತಿಯೊಬ್ಬರೂ ಗೌರವ ನೀಡಬೇಕೆಂದ ಅವರು ಮಹಿಳೆ ತಾಯಿಯಾಗಿ, ಮಗಳಾಗಿ, ಪತ್ನಿಯಾಗಿ, ಪುರುಷನ ಸಕಲ ಅಭಿವೃದ್ಧಿಗೆ ಕಾರಣಳಾದ ಹೆಣ್ಣನ್ನು ಗೌರವಿಸಿದರೆ ಅಲ್ಲಿ ದೇವತೆಗಳು ನೆಲೆಸುತ್ತಾರೆಂಬ ನಮ್ಮ ಹಿರಿಯರ ಮಾತು ಅಕ್ಷರಶ: ಸತ್ಯ. ಇಂಥ ಹೆಣ್ಣು ಮಕ್ಕಳ ಅಭಿವೃದ್ಧಿಯನ್ನು ಚಿವುಟಿ ಹಾಕದೇ ಪ್ರೋತ್ಸಾಹಿಸಿ ಬೆಳೆಸಬೇಕೆಂದು ಡಾ ಅರ್ಚನಾ ಅಥಣಿ ಅಭಿಪ್ರಾಯ ಪಟ್ಟರು.  

ಮುಖ್ಯ ಅತಿಥಿಗಳಾಗಿ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ತುಳಸಾ ಅಕ್ಕನವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರತಿಯೊಂದು ಕುಟುಂಬದಲ್ಲಿ ಹೆಣ್ಣು ಗಂಡು ಎನ್ನುವ ಲಿಂಗ ತಾರತಮ್ಯ ಮಾಡದೆ ಇಬ್ಬರಿಗೂ ಸಮಾನ ದೃಷ್ಟಿಯಿಂದ ನೋಡಿಕೊಂಡು ಉತ್ತಮ ಸಂಸ್ಕಾರ ಹೊಂದಿದ ಶಿಕ್ಷಣ ಕೊಡಿಸಿ, ಜೊತೆಗೆ ಬಾಲ್ಯವಿವಾಹಗಳನ್ನು ತಡೆಗಟ್ಟಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಗುರು ಹಿರಿಯನ್ನು ಗೌರವದಿಂದ ನೋಡಿಕೊಳ್ಳುವಂತೆ ಮನೆಯಲ್ಲಿ ತಾಯಂದಿರು ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಸಂಸ್ಕಾರ ನೀಡುವುದರ ಜೊತೆಗೆ ಸಾದ್ಯವಾದಷ್ಟು ಮೊಬೈಲ್ ಹಾಗೂ ಟಿಯಿಂದ ಮಕ್ಳನ್ನು ದೂರವಿಡುವಂತೆ ತಾಯಂದಿರು ನೋಡಿಕೊಳ್ಳುವಂತೆ ತುಳಸಾ ಅಕ್ಕನವರ ಸಲಹೆ ನೀಡಿದರು. 

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ, ಡಾ.ಅರ್ಚನಾ ಅಥಣಿ,  ಭಾರತಿ ಸಂಕ್ರಟ್ಟಿ ಸೇರಿದಂತೆ ಅನೇಕ ಮಹಿಳೆಯನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ವಿಮಲಾ ಸಂಕ್ರಟ್ಟಿ, ಶಾರದಾ ಪಾಟೀಲ, ಬೌರಮ್ಮ ಖೋತ, ಮಹಾನಂದಾ ಗುಂಜಿಗಾಂವೆ, ಶೈಲಜಾ ನಾಯಿಕ, ಸುಜಾತಾ ಪಾಟೀಲ, ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ